ವಿಜಯಪುರ: ಚಡಚಣ ಬಳಿಯ ಹತ್ತಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು 45 ವರ್ಷದ ಧರೆಪ್ಪ ಧರ್ಮಪ್ಪ ಬಿರಾದಾರ ಮೃತಪಟ್ಟಿದ್ದಾನೆ. ಜೋಡೆತ್ತಿನ ಗಾಡಿಯಲ್ಲಿ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಚಡಚಣ ತಹಶೀಲ್ದಾರ್ ಸುರೇಶ್ ಚವಲರ, ಪಿಎಸ್ಐ ಎಂ.ಎ.ಸತಿಗೌಡರ ಭೇಟಿ ನೀಡಿ ಪರಿಶೀಲಿಸಿದರು.
ಸಿಡಿಲಿಗೆ ಕುರಿಗಳು ಬಲಿ
ನಿಡಗುಂದಿ ತಾಲೂಕಿನ ಕೂಡಗಿ ಗ್ರಾಮದಲ್ಲಿ ಸಿಡಿಲಿಗೆ ಮೂರು ಕುರಿಗಳು ಬಲಿಯಾಗಿವೆ. ಕೂಡಗಿನ ದ್ಯಾಮಣ್ಣ ಮನಗೂಳಿ ಎಂಬುವವರಿಗೆ ಸೇರಿರುವ ಕುರಿಗಳು ಇವಾಗಿವೆ. ಈ ಕುರಿತು ಎನ್ಟಿಪಿಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.