ETV Bharat / state

ಸಂಕಷ್ಟದಲ್ಲಿರುವ ಅನ್ನದಾತನಿಗೆ ಪರಿಹಾರ ನೀಡಲು ಡ್ರೋಣ್ ಸಮೀಕ್ಷೆ - ಭೀಮಾನದಿ ಪ್ರವಾಹ ಸುದ್ದಿ

ಕಂದಾಯ ಮತ್ತು ಕೃಷಿ ಇಲಾಖೆ ನಡೆಸುವ ಬೆಳೆ ಸಮೀಕ್ಷೆ ನಂತರ ರೈತರಿಂದ ಯಾವುದಾರೂ ತಕರಾರು ಬಂದರೆ ಡ್ರೋಣ್​ ಕ್ಯಾಮೆರಾ ಸಮೀಕ್ಷೆ ಪರಿಶೀಲನೆ ನಡೆಸಿ ರೈತರು ಮಾಡಿರುವ ಆರೋಪಗಳ ಬಗ್ಗೆ ಮಾಹಿತಿ ಕಲೆ ಹಾಕಲು ಉಪಯುಕ್ತವಾಗಲಿದೆ. ಕೆಲ ರೈತರ ಜಮೀನುಗಳು ಸಮೀಕ್ಷೆಯಿಂದ ತಪ್ಪಿ ಹೋಗಿದ್ದರೆ, ಅಂತಹ ರೈತರ ಜಮೀನಿನ ಗುರುತು ಪತ್ತೆ ಹಚ್ಚಲು ಡ್ರೋಣ್ ಕ್ಯಾಮೆರಾ ಸಮೀಕ್ಷೆ ಸಹಾಯಕಾರಿಯಾಗಿದೆ..

ವಿಜಯಪುರದಲ್ಲಿ ಡ್ರೋಣ್ ಸಮೀಕ್ಷೆ
ವಿಜಯಪುರದಲ್ಲಿ ಡ್ರೋಣ್ ಸಮೀಕ್ಷೆ
author img

By

Published : Oct 25, 2020, 2:01 PM IST

Updated : Oct 25, 2020, 8:47 PM IST

ವಿಜಯಪುರ: ಭೀಮಾನದಿ ಪ್ರವಾಹ ತಗ್ಗಿದೆ. ಮತ್ತೆ ಎಂದಿನಂತೆ ಜನಜೀವನ ಆರಂಭವಾಗಿದೆ. ಆದರೆ, ಪ್ರವಾಹದ ಅನಾಹುತದ ಲೆಕ್ಕ ಮಾತ್ರ ಇನ್ನೂ ಸಿಗುತ್ತಿಲ್ಲ. ಭೀಮಾತೀರದ ಸಾವಿರಾರು ಅನ್ನದಾತರ ಬೆಳೆ ನಷ್ಟವಾಗಿದ್ದು, ಮನೆ-ಮಠ ಕಳೆದುಕೊಂಡು ಸಂಕಷ್ಟ ಅನುಭವಿಸುತ್ತಿದ್ದಾರೆ. ಎಲ್ಲ ಸಂತ್ರಸ್ತರಿಗೆ ನ್ಯಾಯಯುತವಾದ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ವಿಜಯಪುರ ಜಿಲ್ಲಾಡಳಿತ ಮತ್ತೆ ಪ್ರವಾಹ ಸಮೀಕ್ಷೆ ನಡೆಸುತ್ತಿದೆ. ಪರಿಹಾರದಲ್ಲಿ ಯಾವ ರೈತನಿಗೂ ಅನ್ಯಾಯವಾಗದ ರೀತಿಯಲ್ಲಿ ನೋಡಿಕೊಳ್ಳಲು ಡ್ರೋಣ್​ ಸಮೀಕ್ಷೆ ಸಹ ಈ ಬಾರಿ ನಡೆಸುತ್ತಿದೆ.

ಮಹಾರಾಷ್ಟ್ರ ಸರ್ಕಾರದ ಅವೈಜ್ಞಾನಿಕ ನೀರು ನಿರ್ವಹಣೆಯಿಂದ ಕರ್ನಾಟಕದ ಭೀಮಾನದಿಯಿಂದ ಪ್ರವಾಹ ಉಂಟಾಗಿತ್ತು. ರೈತರು ಬೆಳೆದ 2 ಲಕ್ಷ ಹೆಕ್ಟೇರ್ ಪ್ರದೇಶದ ವಿವಿಧ ಬಗೆಯ ಬೆಳೆಗಳು ನೀರಿನಲ್ಲಿ ಕೊಚ್ಚಿಹೋಗಿದ್ದವು. ಇದರ ಜತೆ 8ಕ್ಕಿಂತ ಹೆಚ್ಚು ಗ್ರಾಮಗಳು ನೀರಿನ ಪ್ರವಾಹದಲ್ಲಿ ಸಿಲುಕಿ ಜಗತ್ತಿನ ಸಂಪರ್ಕ ಕಳೆದುಕೊಂಡಿದ್ದವು. ಈಗ ಇದೆಲ್ಲಾ ಇತಿಹಾಸದ ಪುಟ ಸೇರಿದೆ. ಪ್ರವಾಹದಿಂದ ನಷ್ಟವಾಗಿರುವ ಬೆಳೆಗಳಿಗೆ ಸರ್ಕಾರ ಸೂಕ್ತ ಪರಿಹಾರ ನೀಡಲು ಸಮೀಕ್ಷೆ ನಡೆಸಲು ಮುಂದಾಗಿತ್ತು.

ಪ್ರತಿ ವರ್ಷ ಇಂತಹ ಅನಾಹುತ ನಡೆದಾಗ ಕಂದಾಯ ಮತ್ತು ಕೃಷಿ ಇಲಾಖೆ ನಡೆಸುವ ಅಂದಾಜು ನಷ್ಟದ ವರದಿ ಆಧಾರದ ಮೇಲೆ ಅನ್ನದಾತನಿಗೆ ಪರಿಹಾರದ ಮೊತ್ತ ನಿಗದಿಪಡಿಸಲಾಗುತ್ತಿತ್ತು. ಇದರಲ್ಲಿ ಭ್ರಷ್ಟಾಚಾರದ ವಾಸನೆ ಸಹ ಬಡೆಯುತ್ತಿತ್ತು. ಉಳ್ಳ ರೈತರಿಗೆ ಹೆಚ್ಚಿನ ಪರಿಹಾರ, ಬಡ ರೈತನಿಗೆ ಅಲ್ಪ ಪರಿಹಾರ ಸಿಗುವ ಆರೋಪಗಳು ಕೇಳಿ ಬರುತ್ತಿತ್ತು. ಇದನ್ನು ತಪ್ಪಿಸಲು ಈ ಬಾರಿ ಡ್ರೋಣ್ ಕ್ಯಾಮೆರಾ ಮೂಲಕ ಬೆಳೆ ಸಮೀಕ್ಷೆ ನಡೆಸಲು ಜಿಲ್ಲಾಡಳಿತ ಮುಂದಾಗಿದೆ.

ಕಂದಾಯ ಮತ್ತು ಕೃಷಿ ಇಲಾಖೆ ನಡೆಸುವ ಬೆಳೆ ಸಮೀಕ್ಷೆ ನಂತರ ರೈತರಿಂದ ಯಾವುದಾರೂ ತಕರಾರು ಬಂದರೆ ಡ್ರೋಣ್​ ಕ್ಯಾಮೆರಾ ಸಮೀಕ್ಷೆ ಪರಿಶೀಲನೆ ನಡೆಸಿ ರೈತರು ಮಾಡಿರುವ ಆರೋಪಗಳ ಬಗ್ಗೆ ಮಾಹಿತಿ ಕಲೆ ಹಾಕಲು ಉಪಯುಕ್ತವಾಗಲಿದೆ. ಕೆಲ ರೈತರ ಜಮೀನುಗಳು ಸಮೀಕ್ಷೆಯಿಂದ ತಪ್ಪಿ ಹೋಗಿದ್ದರೆ, ಅಂತಹ ರೈತರ ಜಮೀನಿನ ಗುರುತು ಪತ್ತೆ ಹಚ್ಚಲು ಡ್ರೋಣ್ ಕ್ಯಾಮೆರಾ ಸಮೀಕ್ಷೆ ಸಹಾಯಕಾರಿಯಾಗಿದೆ.

ಸದ್ಯ ಭೀಮಾ, ಕೃಷ್ಣಾ ಮತ್ತು ಡೋಣಿ ನದಿಯಲ್ಲಿ ಉಂಟಾಗಿದ್ದ ಮಹಾಪ್ರವಾಹದಲ್ಲಿ ಅಕ್ಟೋಬರ್ 1ರಿಂದ 19 ರವರೆಗಿನ ನಷ್ಟವನ್ನು ಸಮೀಕ್ಷೆ ಮಾಡಲಾಗಿದೆ. ಇದರಂತೆ 2,21,227 ಲಕ್ಷ ಹೆಕ್ಟರ್ ಪ್ರದೇಶ ಬೆಳೆ ನಷ್ಟವಾಗಿದೆ. ಇದರ ಅಂದಾಜು ನಷ್ಟ 87649.39 ಲಕ್ಷ ರೂ.ಗಳಾಗಿವೆ. ಅದರಲ್ಲಿ 6989 ಹೆಕ್ಟರ್ ತೋಟಗಾರಿಕೆ ಬೆಳೆಯಾಗಿದೆ. ಇದರ ಅಂದಾಜು 0567.46 ಲಕ್ಷ ರೂ. ನಷ್ಟವಾಗಿದೆ. ಕೃಷಿ ಮತ್ತು ತೋಟಗಾರಿಕೆ ಬೆಳೆ ಸೇರಿ ಒಟ್ಟು 2.28.216 ಲಕ್ಷ ಹೆಕ್ಟರ್ ಬೆಳೆ ಹಾಳಾಗಿದೆ. ಇದರ ಅಂದಾಜು 98.216 ಕೋಟಿ ರೂ. ನಷ್ಟವಾಗಿದೆ. ಇದರ ಜತೆ 2 ಜನ ಸಾವನ್ನಪ್ಪಿದ್ದಾರೆ. 54 ಜಾನುವಾರು ಸಾವನ್ನಪ್ಪಿವೆ. 4440 ಮನೆಗಳಿಗೆ ಹಾನಿಯಾಗಿದೆ.

ಈಗ ಕೈಗೊಂಡಿರುವ ಡ್ರೋಣ್​ ಸಮೀಕ್ಷೆಯಿಂದ ಪರಿಹಾರ ತಂತ್ರಾಂಶ ನೋಂದಣಿ ಕಾರ್ಯ ನಡೆಯುತ್ತಿದೆ. ಈ ನೊಂದಣಿ ವೇಳೆ ಯಾರಾದರೂ ರೈತರು ಸಮೀಕ್ಷೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರೆ ಅವರ ಸಹಾಯಕ್ಕೆ ಈ ಡ್ರೋಣ್​ ಸಮೀಕ್ಷೆ ಬರಲಿದೆ. ಪರಿಹಾರ ತಂತ್ರಾಂಶ ನೋಂದಣಿ ಪೂರ್ಣಗೊಂಡ ಮೇಲೆ ಕಂದಾಯ ಮತ್ತು ಕೃಷಿ ಇಲಾಖೆಯ ಜಂಟಿ ಸಮೀಕ್ಷಾ ವರದಿ ಜತೆ ಡ್ರೋಣ್​ ಕ್ಯಾಮರಾ ಮೂಲಕ ನಡೆಸಿರುವ ವರದಿಯನ್ನು ರಾಜ್ಯ ಸರ್ಕಾರಕ್ಕೆ ಜಿಲ್ಲಾಡಳಿತ ಸಲ್ಲಿಸಲಿದೆ. ಆಧುನಿಕ ತಂತ್ರಜ್ಞಾನ ಬೆಳೆ ನಷ್ಟದ ಸಮೀಕ್ಷೆಗೆ ಬಳಕೆಯಾಗುತ್ತಿರುವ ಕಾರಣ ರೈತರಿಗೆ ಸೂಕ್ತ ಹಾಗೂ ನ್ಯಾಯಯುತ ಪರಿಹಾರ ಸಿಗಬಹುದು. ಇದು ಸಹಜವಾಗಿ ಅನ್ನದಾತನ ಮೊಗದಲ್ಲಿ ಸಂಕಷ್ಟದಲ್ಲಿಯೂ ಮಂದಹಾಸ ಮೂಡಿಸಿದೆ.

Last Updated : Oct 25, 2020, 8:47 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.