ವಿಜಯಪುರ : ರಷ್ಯಾ ಮತ್ತು ಉಕ್ರೇನ್ ಮಹಾಯುದ್ಧದಿಂದ ಉಕ್ರೇನ್ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ಭಾರತೀಯ ವಿದ್ಯಾರ್ಥಿಗಳು ಸದ್ಯ ವೈದ್ಯಕೀಯ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅವರ ಶೈಕ್ಷಣಿಕ ಸಮಸ್ಯೆ ಬಗೆಹರಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಡಾ.ಎಂ.ಬಿ.ಪಾಟೀಲ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ಕೇಂದ್ರ ಸರ್ಕಾರ ಚುನಾವಣೆಯಲ್ಲಿ ಗೆದ್ದ ನಂತರ ಬಡವರ ಲೂಟಿಗೆ ಇಳಿದಿದೆ : ಡಿಕೆಶಿ
ವಿಜಯಪುರದ ವಿದ್ಯಾರ್ಥಿಗಳಿಗೆ BLDE ಡೀಮ್ಡ್ ವಿವಿಯಿಂದ ಉಚಿತ ಪಾಠ, ತರಬೇತಿ, ಗ್ರಂಥಾಲಯ ಸೌಲಭ್ಯ ಕಲ್ಪಿಸಿರುವ ಕುರಿತು ಪ್ರಧಾನಿಗೆ ಮಾಹಿತಿ ನೀಡಿದ್ದಾರೆ. ಯುದ್ಧ ಕೊನೆಗೊಂಡರೂ ಉಕ್ರೇನ್ನಲ್ಲಿ ಸದ್ಯಕ್ಕೆ ಕಾಲೇಜು ಆರಂಭವಾಗುವ ಸೂಚನೆಗಳಿಲ್ಲ.
ಉಕ್ರೇನ್–ರಷ್ಯಾ ಯುದ್ಧದ ನಿಮಿತ್ತ ಇದೊಂದು ಬಾರಿ ಹಾಲಿ ನಿಯಮಗಳಿಗೆ ವಿನಾಯಿತಿ ಕೊಟ್ಟು ಸ್ವದೇಶದಲ್ಲೇ ಎಲ್ಲಾ ವೈದ್ಯ ವಿದ್ಯಾರ್ಥಿಗಳಿಗೂ ಶಿಕ್ಷಣ ಮುಂದುವರೆಸಲು ಅವಕಾಶ ಕಲ್ಪಿಸುವ ವಿಶೇಷ ನೀತಿಯನ್ನು ಕೇಂದ್ರ ರೂಪಿಸಬೇಕು ಎಂದು ಮನವಿ ಮಾಡಿದ್ದಾರೆ.