ETV Bharat / state

ಮಿಡತೆಗಳು ಬರುವ 24 ಗಂಟೆಗಳ ಮುಂಚೆಯೇ ಜಿಲ್ಲಾಡಳಿತಕ್ಕೆ ಮಾಹಿತಿ ಸಿಗುತ್ತೆ: ಡಿಸಿ ಸ್ಪಷ್ಟನೆ - ನಿಗದಿತ ಸಮಯಲ್ಲಿ ಅಧಿಕಾರಿಗಳಿಗೆ ಸ್ಪ್ರೇಯರ್ ಹಾಗೂ ಟ್ಯಾಂಕರ್ ಸಿದ್ಧತೆ

ಮಿಡತೆಗಳು ಪಕ್ಕದ ಯಾವುದೇ ಜಿಲ್ಲೆಗಳಿಗೆ ಬಂದರೂ ಮುಂಚಿತವಾಗಿ ಜಿಲ್ಲಾಡಳಿತಕ್ಕೆ ಮಾಹಿತಿ ಸಿಗುತ್ತೆ, ಹೀಗಾಗಿ ನಿಗದಿತ ಸಮಯಲ್ಲಿ ಅಧಿಕಾರಿಗಳಿಗೆ ಸ್ಪ್ರೇಯರ್ ಹಾಗೂ ಟ್ಯಾಂಕರ್ ಸಿದ್ಧತೆ ಮಾಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗೆ ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಹೇಳಿದ್ದಾರೆ.

District administration will get information about grasshoppers before 24 hours
ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ
author img

By

Published : May 28, 2020, 5:32 PM IST

ವಿಜಯಪುರ: ಮಿಡತೆಗಳು ಜಿಲ್ಲೆಯಲ್ಲಿ ದಾಳಿ ಇಡುವ 24 ಗಂಟೆಗಳ ಮುಂಚೆ ಮಾಹಿತಿ ದೊರೆಯುತ್ತಿದೆ. ಅವುಗಳ ಹಾವಳಿ ತಪ್ಪಿಸಲು ಎಲ್ಲ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಹೇಳಿದರು.

ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ
ನಂತರ ಮಾತನಾಡಿದ ಅವರು, ಮಿಡತೆಗಳ ಹಾವಳಿ ಕುರಿತಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದಲೂ ನಿರ್ದೇಶನಗಳು ಬಂದಿದೆ. ಈಗಾಗಲೇ ತಹಶೀಲ್ದಾರ್​, ತೋಟಗಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮುನ್ನಚ್ಚರಿಕೆ ಕ್ರಮಕ್ಕೆ ಮುಂದಾಗುವಂತೆ ಸೂಚನೆ ನೀಡಿದ್ದಾರೆ‌.
ಈಗಾಗಲೇ ಕೃಷಿ ಸಚಿವರು ಕೂಡಾ ಅಧಕಾರಿಗಳೊಂದಿಗೆ ಡಿಸಿ ಸಭೆ ನಡೆಸಿದ್ದಾರೆ. ಅವ್ರು ಕೂಡ ಇನ್ನಷ್ಟು ನಿರ್ದೇಶನ ನೀಡುವುದಾಗಿ ತಿಳಿಸಿದ್ದಾರೆ‌. ಜಿಲ್ಲೆಯಲ್ಲಿ ಹೆಚ್ಚಾಗಿ ದ್ರಾಕ್ಷಿ ಮತ್ತು ನಿಂಬೆ ತೋಟಗಾರಿಕೆ ಬೆಳೆಗಳಿವೆ. ಹಾಗೂ ರೈತರ ಬಳಿ ಬೆಳೆಗಳಿಗೆ ರಾಸಾಯನಿಕ ಸಿಂಪಡಣೆ ಟ್ಯಾಂಕರ್‌ ಮತ್ತು ಸ್ಪ್ರೇಯರ್‌ಗಳಿವೆ ಎಂದರು.
ಮಿಡತೆಗಳು ಪಕ್ಕದ ಯಾವುದೇ ಜಿಲ್ಲೆಗಳಿಗೆ ಬಂದರೂ ಮುಂಚಿತವಾಗಿ ಜಿಲ್ಲಾಡಳಿತಕ್ಕೆ ಮಾಹಿತಿ ಸಿಗುತ್ತೆ, ಹೀಗಾಗಿ ನಿಗದಿತ ಸಮಯಲ್ಲಿ ಅಧಿಕಾರಿಗಳಿಗೆ ಸ್ಪ್ರೇಯರ್ ಹಾಗೂ ಟ್ಯಾಂಕರ್ ಸಿದ್ಧತೆ ಮಾಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗೆ ತಿಳಿಸಲಾಗಿದೆ ಎಂದು ಡಿಸಿ ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.