ETV Bharat / state

ಮುದ್ದೇಬಿಹಾಳ: ಆ್ಯಂಬುಲೆನ್ಸ್​​​ನಲ್ಲಿಯೇ ಮಗುವಿಗೆ ಜನ್ಮ ನೀಡಿದ ತಾಯಿ - ಅಂಬ್ಯಲೆನ್ಸ್​​​ನಲ್ಲಿಯೇ ಹೆರಿಗೆ

ಬೈಲಕೂರ ಗ್ರಾಮದ ಗರ್ಭಿಣಿ ಭುವನೇಶ್ವರಿ ಬಸವರಾಜ್ ಛಲವಾದಿ ಅವರಿಗೆ ಹೆರಿಗೆ ನೋವು ಜೋರಾದ ಹಿನ್ನೆಲೆ, ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಆ್ಯಂಬುಲೆನ್ಸ್​​​ನಲ್ಲಿಯೇ ಹೆರಿಗೆ ಮಾಡಿಸಲಾಗಿದೆ. ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ-ಮಗು ಸುರಕ್ಷಿತರಾಗಿದ್ದಾರೆ.

delivery in ambulance at muddebihala
ಅಂಬ್ಯಲೆನ್ಸ್​​​ನಲ್ಲಿಯೇ ಹೆರಿಗೆ
author img

By

Published : Jul 6, 2021, 11:17 AM IST

ಮುದ್ದೇಬಿಹಾಳ: ಹೆರಿಗೆ ನೋವು ಹೆಚ್ಚಾಗಿ ಗರ್ಭಿಣಿವೋರ್ವರು ಆ್ಯಂಬುಲೆನ್ಸ್​​​ನಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಇಂದು ತಾಲೂಕಿನ ಬೈಲಕೂರ ಗ್ರಾಮದಲ್ಲಿ ನಡೆದಿದೆ. ತಾಯಿ ಮತ್ತು ಮಗು ಇಬ್ಬರು ಸುರಕ್ಷಿತವಾಗಿದ್ದು, ತಂಗಡಗಿ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.

ಬೈಲಕೂರ ಗ್ರಾಮದ 23 ವರ್ಷದ ಭುವನೇಶ್ವರಿ ಬಸವರಾಜ್ ಛಲವಾದಿ ಅವರಿಗೆ ಎರಡನೇ ಹೆರಿಗೆಯ ದಿನಾಂಕ ಮೀರಿತ್ತು. ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನು 108 ಆ್ಯಂಬುಲೆನ್ಸ್​ನಲ್ಲಿ ಕರೆದೊಯ್ಯುವ ವೇಳೆ ನೋವು ಉಲ್ಬಣಗೊಂಡಾಗ ವಾಹನದಲ್ಲಿಯೇ ಹೆರಿಗೆ ಮಾಡಿಸಿಕೊಂಡರು.

ತಾಯಿ ಮತ್ತು ಮಗು ಸುರಕಷಿತವಾಗಿದ್ದಾರೆ ಎಂದು ಹೆರಿಗೆ ಮಾಡಿಸಿಕೊಂಡ ನಾಲತವಾಡದ 108 ಅರೋಗ್ಯ ಕವಚ ಸಿಬ್ಬಂದಿ ಸ್ಟಾಫ್ ನರ್ಸ್ ಶರಣು ನಾವಿ ತಿಳಿಸಿದ್ದಾರೆ. ಚಾಲಕ ಅನ್ವರ್ ಹುಸೇನ್ ಇದ್ದರು. ಸುರಕ್ಷಿತ ಹೆರಿಗೆ ಮಾಡಿಸಿದ ಆ್ಯಂಬುಲೆನ್ಸ್​ ಸಿಬ್ಬಂದಿಗೆ ಚಲವಾದಿ ಕುಟುಂಬದವರು ಧನ್ಯವಾದಗಳನ್ನು ಅರ್ಪಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.