ವಿಜಯಪುರ: ಯಶವಂತಪುರ - ವಿಜಯಪುರ ನೂತನ ರೈಲು ಉದ್ಘಾಟನೆ ವೇಳೆ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ವಾದ ನಡೆಸಿದರು.
ವಿಜಯಪುರ ನಗರದ ರೇಲ್ವೆ ನಿಲ್ದಾಣದ ಆವರಣದಲ್ಲಿ ನೂತನ ರೈಲು ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮುನ್ನ ವಾಗ್ವಾದ ನಡೆಸಿದ್ದಾರೆ. ಯಾವ ಕಾರಣಕ್ಕೆ ವಾಗ್ವಾದ ನಡೆಯಿತು ಎಂಬುದು ತಿಳಿದು ಬಂದಿಲ್ಲ.
ಉಭಯ ನಾಯಕರು ವಾಗ್ದಾದ ನಡೆಸುತ್ತಿರುವುದನ್ನು ಗಮನಿಸಿದ ರೈಲ್ವೆ ಸಚಿವ ಸುರೇಶ ಅಂಗಡಿ, ಸಂಸದ ರಮೇಶ ಜಿಗಜಿಣಗಿ ಅವರನ್ನು ಸಮಾಧಾನ ಪಡಿಸಿದರು. ಇತ್ತ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಸಮಾಧಾನ ಪಡಿಸಿದರು.
ಕಾರ್ಯಕ್ರಮದುದ್ದಕ್ಕೂ ಯತ್ನಾಳ್ ಹಾಗೂ ಜಿಗಜಿಣಗಿ ಪರಸ್ಪರ ಕೋಪದಲ್ಲಿಯೇ ಮಾತನಾಡಿದ್ದು ಕಂಡು ಬಂದಿತು.