ETV Bharat / state

ಮೂರು ದಿನಗಳ ಹಿಂದೆ ನದಿಯಲ್ಲಿ ಕೊಚ್ಚಿ ಹೋಗಿದ್ದ ಯುವಕನ ಶವ ಪತ್ತೆ - ಕೊಚ್ಚಿ ಹೋಗಿದ್ದ ಯುವಕ

ಅಂತ್ಯಕ್ರಿಯೆ ಮುಗಿಸಿಕೊಂಡು ಸ್ವಗ್ರಾಮಕ್ಕೆ ಮರಳುತ್ತಿದ್ದ ಯುವಕನೊಬ್ಬ ನದಿಯ ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದ. ಆತನ ಶವವು ಮೂರು ದಿನಗಳ ಬಳಿಕ ಪತ್ತೆಯಾಗಿದೆ.

vijayapura
ಯುವಕನ ಶವ ಪತ್ತೆ
author img

By

Published : Sep 12, 2020, 9:04 PM IST

ವಿಜಯಪುರ: ಭೀಮಾ ನದಿಯಲ್ಲಿ ಕಳೆದ ಮೂರು ದಿನಗಳ ಹಿಂದೆ ಕೊಚ್ಚಿ ಹೋಗಿದ್ದ ಯುವಕನ ಶವ ಇಂದು ಚಡಚಣ ತಾಲೂಕಿನ ಧೂಳಖೇಡ ಸೇತುವೆ ಬಳಿ ಪತ್ತೆಯಾಗಿದೆ.

ಹತ್ತಳ್ಳಿ ಗ್ರಾಮದ ಯುವಕ ರಮೇಶ ಬಸರಗಿ (25) ಕಳೆದ ಬುಧವಾರ ಸಂಬಂಧಿಕರ ಅಂತ್ಯಕ್ರಿಯೆ ಮುಗಿಸಿಕೊಂಡು ಸ್ವಗ್ರಾಮಕ್ಕೆ ಮರಳುತ್ತಿದ್ದ. ಈ ವೇಳೆ ಮಾರ್ಗಮಧ್ಯೆ ಬಾಂದಾರ ಕಂ ಸೇತುವೆ ಬಳಿ ನದಿ ನೀರಿನ ರಭಸ ಹೆಚ್ಚಾಗಿದ್ದರಿಂದ ಬೈಕ್ ಸಮೇತ ರಮೇಶ ಕೊಚ್ಚಿ ಹೋಗಿದ್ದನು. ಕಳೆದ ಮೂರು ದಿನಗಳಿಂದ ಯುವಕನ ಹುಡುಕಾಟ ನಡೆದಿತ್ತು. ಇಂದು ಸಂಜೆ 4ಗಂಟೆಗೆ ಧೂಳಖೇಡ ಸೇತುವೆ ಬಳಿ ಯುವಕನ ಮೃತ ದೇಹ ದೊರಕಿದೆ.

ತಹಶೀಲ್ದಾರ್​ಗೆ ತರಾಟೆ :

ಯುವಕ ನದಿಯಲ್ಲಿ ಕೊಚ್ಚಿ ಹೋದ ವಿಷಯ ತಾಲೂಕಾಡಳಿತಕ್ಕೆ ತಿಳಿಸಿದರೂ ಕೂಡ ಸ್ಪಂದಿಸಿರಲಿಲ್ಲ. ಹೀಗಾಗಿ ಸ್ವತಃ ಗ್ರಾಮಸ್ಥರೆ ಸ್ವಂತ ಖರ್ಚಿನಲ್ಲಿ ಯುವಕನ ಶವದ ಪತ್ತೆಗೆ ಮುಂದಾಗಿದ್ದರು. ಬಳಿಕ ಘಟನಾ ಸ್ಥಳಕ್ಕೆ ಶನಿವಾರ ಭೇಟಿ ನೀಡಿದ ಚಡಚಣ ತಹಶೀಲ್ದಾರ್​​ ಆರ್.ಎಸ್. ರೇವಡಿಗಾರ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಬಳಿಕ ಬೋಟ್​ ವ್ಯವಸ್ಥೆ ಮಾಡಲಾಗಿದೆ. ಬೋಟ್​​ ಕಾರ್ಯಾಚರಣೆ ವೇಳೆ ಯುವಕ ರಮೇಶ ಮೃತ ದೇಹ ಪತ್ತೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.