ವಿಜಯಪುರ: ಎಲ್ಲೆಂದರಲ್ಲಿ ಮಾತನಾಡಲು ನಮ್ಮದು ಪ್ರಾದೇಶಿಕ ಪಕ್ಷವಲ್ಲ. ನಮ್ಮದು ರಾಷ್ಟ್ರೀಯ ಪಕ್ಷ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.
ಶ್ರೀರಾಮಲುಗೆ ಡಿಸಿಎಂ ಮಾಡುವ ವಿಚಾರವಾಗಿ ಆಲಮಟ್ಟಿಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಎಲ್ಲೆಂದರಲ್ಲಿ ಮಾತನಾಡಲು ನಮ್ಮದು ಪ್ರಾದೇಶಿಕ ಪಕ್ಷವಲ್ಲ. ನಮ್ಮದು ರಾಷ್ಟ್ರೀಯ ಪಕ್ಷ. ಹಾಗಾಗಿ ಪ್ರಧಾನಿ, ರಾಷ್ಟ್ರೀಯ ಅಧ್ಯಕ್ಷರು, ಸಿಎಂ ಅವರು ಸೇರಿ ತೀರ್ಮಾನಿಸುತ್ತಾರೆ ಎಂದರು.
ಇವೆಲ್ಲ ಪಕ್ಷ ತೆಗೆದುಕೊಳ್ಳುವ ನಿರ್ಣಯಗಳಾಗಿವೆ. ಪಕ್ಷದಲ್ಲಿನ ಅನೇಕ ಹಿರಿಯ ನಾಯಕರು ಈ ಕುರಿತು ತೀರ್ಮಾನ ತೆಗೆದುಕೊಳ್ತಾರೆ. ನಾವು ಸುಮ್ಮನೆ ಹೇಳಿಕೆ ಕೊಡುವುದು ಬಾಯಿ ಚಟ ಆಗುತ್ತೆ, ಹಾಗಾಗಿ ನಾನು ಇದರ ಬಗ್ಗೆ ಮಾತನಾಡಲ್ಲ ಎಂದರು.