ETV Bharat / state

ಪಕ್ಷ ಸೂಚಿಸಿದ್ರೆ ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧ: ಗೋವಿಂದ ಕಾರಜೋಳ

author img

By

Published : Jan 27, 2020, 12:23 PM IST

ಸಚಿವ ಸಂಪುಟ ವಿಸ್ತರಣೆ ವಿಚಾರ ಕುರಿತು ಡಿಸಿಎಂ ಗೋವಿಂದ ಕಾರಜೋಳ ಪ್ರತಿಕ್ರಿಯಿಸಿದ್ದು, ಪಕ್ಷ ಸೂಚಿಸಿದ್ರೆ ಸಚಿವ ಸ್ಥಾನ ತ್ಯಾಗ ಮಾಡಲು ಸಿದ್ಧವೆಂದು ಸ್ಪಷ್ಟಪಡಿಸಿದ್ದಾರೆ.

DCM Govinda Karajola
ಗೋವಿಂದ ಕಾರಜೋಳ

ವಿಜಯಪುರ: ಸಚಿವ ಸಂಪುಟ ವಿಸ್ತರಣೆ ವಿಚಾರ ಕುರಿತು ಡಿಸಿಎಂ ಗೋವಿಂದ ಕಾರಜೋಳ ಪ್ರತಿಕ್ರಿಯೆ ನೀಡಿದ್ದು, ನಾನು ಹೊರಗಡೆ ಓಡಾಡುತ್ತಿದ್ದೇನೆ, ಅದರ ಬಗ್ಗೆ ತನಗೆ ಮಾಹಿತಿ ಇಲ್ಲವೆಂದು ಹೇಳಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಕುರಿತು ಗೋವಿಂದ ಕಾರಜೋಳ ಪ್ರತಿಕ್ರಿಯೆ

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಯಲ್ಲಿ ಹಾಗೂ ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ. ನಾನು ನಾಡಿದ್ದು ಬೆಂಗಳೂರಿಗೆ ಹೋದ ಮೇಲೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡುತ್ತೇನೆ. ಆಗ ಯಾವೆಲ್ಲಾ ಬೆಳವಣಿಗೆ ಆಗುತ್ತದೆ ಎನ್ನುವುದು ಗೊತ್ತಾಗಲಿದೆ ಎಂದರು.

ಕೆಲವರ ಸ್ಥಾನಮಾನ ತ್ಯಾಗ ವಿಚಾರವಾಗಿ ಮಾತನಾಡಿದ ಕಾರಜೋಳ, ಡಿಸಿಎಂ ಸ್ಥಾನ, ಸಚಿವ ಸ್ಥಾನಗಳನ್ನು ತ್ಯಾಗ ಮಾಡುವಂತೆ ಪಕ್ಷ ಸೂಚಿಸಿದ್ರೆ, ಇವತ್ತೇ ಅದಕ್ಕೆ ಸಿದ್ಧ. ಪಕ್ಷ ಏನು ನಿರ್ಣಯ ತೆಗೆದುಕೊಳ್ಳುತ್ತದೆಯೋ ನಾನು ಅದಕ್ಕೆ ಬದ್ಧವಾಗಿದ್ದೇನೆ‌. ರಾಷ್ಟ್ರೀಯ ಅಧ್ಯಕ್ಷರು, ಪ್ರಧಾನಮಂತ್ರಿ, ಮುಖ್ಯಮಂತ್ರಿ ಹೇಗೆ ಹೇಳ್ತಾರೋ ಹಾಗೆ ನಾನು ಚಾಚು ತಪ್ಪದೆ ಮಾಡುತ್ತೇನೆ. ಪಕ್ಷದಲ್ಲಿ ಶಿಸ್ತಿನ ಸಿಪಾಯಿ ಆಗಿ ಕೆಲಸ ಮಾಡುತ್ತೇನೆ. ಪಕ್ಷ ಸೂಚಿಸಿದ್ರೆ ನಾನು ಖಂಡಿತವಾಗಿ ಸ್ಥಾನ ತ್ಯಾಗ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಇನ್ನು, ಸೋತವರಿಗೆ ಸ್ಥಾನಮಾನ ನೀಡುವ ವಿಚಾರವಾಗಿ ಮಾತನಾಡಿದ ಡಿಸಿಎಂ ಕಾರಜೋಳ, ಅದರ ಬಗ್ಗೆ ಯತ್ನಾಳ್​ ಅವರು ಏನು ಹೇಳಿದ್ದಾರೋ ನನಗೆ ಗೊತ್ತಿಲ್ಲ, ಗೊತ್ತಿಲ್ಲದೇ ಏನೂ ಹೇಳುವುದು ಸರಿಯಲ್ಲ. ವಿಜಯಪುರ- ಬಾಗಲಕೋಟೆ ಜಿಲ್ಲೆಗಳಿಗೆ ಸಚಿವ ಸ್ಥಾನಗಳು ಸಿಗಲಿ ಎಂಬುದು ನನ್ನ ಆಸೆ ಕೂಡ ಹೌದು ಎಂದರು.

Intro:ವಿಜಯಪುರ Body:ವಿಜಯಪುರ:
ಸಚಿವ ಸಂಪುಟ ವಿಸ್ತರಣೆ ವಿಚಾರ. ನಾನು ಹೊರಗಡೆ ಓಡಾಡುತ್ತಿದ್ದೇನೆ, ಅದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.
ವಿಜಯಪುರದಲ್ಲಿ ಮಾತನಾಡಿದ ಅವರು,
ಸಚಿವ ಸಂಪುಟ ವಿಸ್ತರಣೆಯಲ್ಲಿ ಹಾಗೂ ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ ಎಂದರು.
ನಾನು ನಾಡಿದ್ದು ಬೆಂಗಳೂರಿಗೆ ಹೋದ ಮೇಲೆ ಮುಖ್ಯಮಂತ್ರಿಗಳಿಗೆ ಭೇಟಿ ಆಗುತ್ತೇನೆ.
ಆಗ ಏನೇನು ಬೆಳವಣಿಗೆ ಆಗುತ್ತೋ ಗೊತ್ತಾಗುತ್ತೆ ಎಂದರು.
ಕೆಲವರ ಸ್ಥಾನಮಾನ ತ್ಯಾಗ ವಿಚಾರವಾಗಿ ಮಾತನಾಡಿದ ಅವರು, ಡಿಸಿಎಂ ಸ್ಥಾನ, ಸಚಿವ ಸ್ಥಾನ ಗಳನ್ನು ತ್ಯಾಗ ಮಾಡುವಂತೆ ಪಕ್ಷ ಸೂಚಿಸಿದ್ರೆ ಇವತ್ತೇ ನಾನು ತ್ಯಾಗ ಮಾಡ್ತೆನೆ ಎಂದರು.
ಪಕ್ಷ ಏನು ನಿರ್ಣಯ ಮಾಡುತ್ತೋ ನಾನು ಅದಕ್ಕೆ ಬದ್ಧವಾಗಿದ್ದೇನೆ‌.
ರಾಷ್ಟ್ರೀಯ ಅಧ್ಯಕ್ಷರು, ಪ್ರಧಾನಮಂತ್ರಿಗಳು ಮುಖ್ಯಮಂತ್ರಿಗಳು ಹೇಗೆ ಹೇಳ್ತಾರೋ ಹಾಗೆ ನಾನು ಚಾಚು ತಪ್ಪದೆ ಮಾಡ್ತೆನೆ. ಎಂದರು.
ನಾನೊಬ್ಬ ಪಕ್ಷದ ಶಿಸ್ತಿನಿ ಸಿಪಾಯಿ ಆಗಿ ಕೆಲಸ ಮಾಡುತ್ತೇನೆ.
ಪಕ್ಷ ಸೂಚಿಸಿದ್ರೆ ನಾನು ಖಂಡಿತವಾಗಿ ತ್ಯಾಗ ಮಾಡ್ತೆನೆ ಎಂದರು.
ಸೋತವರಿಗೆ ಸ್ಥಾನಮಾನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಕಾರಜೋಳ
ಅದರ ಬಗ್ಗೆ ಏನು ಹೇಳಿದ್ದಾರೆ ನನಗೆ ಗೊತ್ತಿಲ್ಲ, ಗೊತ್ತಿಲ್ಲದೆ ಏನೂ ಹೇಳುವುದು ಸರಿಯಲ್ಲ.
ವಿಜಯಪುರ ಜಿಲ್ಲೆಗೆ ಸ್ಥಾನಮಾನ ವಿಚಾರ.
ಸಿಗಬಹುದು ಎಂಬ ನಿರೀಕ್ಷೆ ಇದೆ, ಅದನ್ನು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ.
ಖಂಡಿತವಾಗಿ ಸಿಗಬೇಕು ಎಂಬುದು ನನ್ನ ಅಪೇಕ್ಷೆ ಆಗಿದೆ. ಅಖಂಡ ಜಿಲ್ಲೆ ಇದ್ದಾಗ ನಾನು ವಿಜಯಪುರದವನೇ ಆಗಿದ್ದೇನೆ.
ಜಿಲ್ಲೆ ವಿಂಗಡಣೆ ಆದ ಬಳಿಕ ಬಾಗಲಕೋಟೆಗೆ ಹೋಗಿದ್ದೇನೆ.
ಹಾಗಾಗಿ ವಿಜಯಪುರ- ಬಾಗಲಕೋಟೆ ಜಿಲ್ಲೆಗಳಿಗೆ ಸಚಿವ ಸ್ಥಾನಗಳು ಸಿಗಲಿ ಎಂಬುದು ನನ್ನ ಆಸೆಯೂ ಕೂಡ ಆಗಿದೆ ಎಂದರು.
ಡಿಸಿಎಂ ಸ್ಥಾನಗಳ ವಿಚಾರವಾಗಿ ಮಾತನಾಡಿದ ಅವರು, ಅದರ ಬಗ್ಗೆ ನನಗೆ ಗೊತ್ತಿಲ್ಲ, ನಾನು ಹೆಚ್ಚಿನ ಸೌಲಭ್ಯ ಪಡೆದಿಲ್ಲ.
ಡಿಸಿಎಂ ಎಂದು ಹೆಚ್ವಿನ ಭದ್ರತೆ ನನಗೆ ಬೇಡ ಎಂದು ನಾನು ಮೊದಲೇ ತಿಳಿಸಿದ್ದೇನೆ ಎಂದರು.Conclusion:ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.