ವಿಜಯಪುರ : 5ಕ್ಕಿಂತ ಹೆಚ್ಚಿನ ಮಕ್ಕಳಲ್ಲಿ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಜಿಲ್ಲೆಯ 9 ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಪಿ.ಸುನೀಲ್ಕುಮಾರ್ ಆದೇಶ ಹೊರಡಿಸಿದ್ದಾರೆ.
ಮುದ್ದೇಬಿಹಾಳ ತಾಲೂಕಿನಲ್ಲಿಎರಡು, ಇಂಡಿ ತಾಲೂಕಿನಲ್ಲಿ ಒಂದು, ಬಸವನ ಬಾಗೇವಾಡಿ ತಾಲೂಕಿನಲ್ಲಿ ಒಂದು, ಬಬಲೇಶ್ವರ ತಾಲೂಕಿನಲ್ಲಿ ಒಂದು ಶಾಲೆ, ವಿಜಯಪುರ ತಾಲೂಕಿನ ಎರಡು ಹಾಗೂ ಸಿಂದಗಿ ತಾಲೂಕಿನ ಎರಡು ಶಾಲೆಗಳಿಗೆ ಒಂದು ವಾರಗಳ ಕಾಲ ರಜೆ ಘೋಷಿಸಲಾಗಿದೆ.