ETV Bharat / state

ವಿಜಯಪುರ: ವಿಮಾನ‌ ನಿಲ್ದಾಣ ಕಾಮಗಾರಿ ಕುರಿತು ಡಿಸಿ ಸಭೆ - ವಿಜಯಪುರ ಜಿಲ್ಲೆ ಸುದ್ದಿ

ವಿಮಾನ ನಿಲ್ದಾಣಕ್ಕೆ ಪರ್ಯಾಯ ರಸ್ತೆಗಾಗಿ ಭೂಸ್ವಾಧೀನ, ರಸ್ತೆ ಉದ್ದಳತೆ, ಅಪ್ರೋಚ್ ರಸ್ತೆ, ವಿದ್ಯುತ್, ನೀರಿನ ಸೌಲಭ್ಯ ಕಲ್ಪಿಸುವ ಕುರಿತು ಮುಂದಿನ ಹತ್ತು ದಿನಗಳ ಅವಧಿಯಲ್ಲಿ ಖರ್ಚು, ವೆಚ್ಚಗಳ ವರದಿಗಳನ್ನು ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದರು.

DC meeting on airport work
ವಿಮಾನ‌ ನಿಲ್ದಾಣ ಕಾಮಗಾರಿ ಕುರಿತು ಡಿಸಿ ಸಭೆ
author img

By

Published : Oct 29, 2020, 6:51 PM IST

ವಿಜಯಪುರ: ವಿಜಯಪುರ ತಾಲೂಕಿನ ಮದಭಾವಿ ಹಾಗೂ ಬುರಣಾಪೂರ ವ್ಯಾಪ್ತಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ವಿಮಾನ ನಿಲ್ದಾಣಕ್ಕೆ ಸಮೀಪಿಸುವ ಕಾಲುವೆ ಪಕ್ಕದ ಸಂಪರ್ಕ ರಸ್ತೆ, ನೀರು ಸರಬರಾಜು ಸೌಲಭ್ಯ ಹಾಗೂ 1000 ಕೆವಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪನೆಗೆ ಸಂಬಂಧಪಟ್ಟಂತೆ ತಕ್ಷಣ ಖರ್ಚು ವೆಚ್ಚ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಮಾನ ನಿಲ್ದಾಣ ಕಾಮಗಾರಿಗೆ ಸಂಬಂಧಪಟ್ಟಂತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಅಪ್ರೋಚ್ ರೋಡ್ ಕುರಿತು ತಕ್ಷಣ ಭೂಸ್ವಾಧೀನ, ರಸ್ತೆ ಖರ್ಚು ವೆಚ್ಚ ಕುರಿತಂತೆ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ಸೂಚನೆ ನೀಡಿದರು.

ಅದರಂತೆ ಈ ಹಿಂದೆ 2012 ರಲ್ಲಿ ನೀರು ಸರಬರಾಜು ಇಲಾಖೆಯಿಂದ ವಿಮಾನ ನಿಲ್ದಾಣಕ್ಕೆ ಅವಶ್ಯಕವಿರುವ ನೀರಿನ ಸರಬರಾಜು ಕುರಿತು 15 ಕೋಟಿ ರೂ.ಗಳ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಸದ್ಯದ ಪರಿಸ್ಥಿತಿಗೆ ಪೂರಕವಾಗಿ ಜಲಸಂಪನ್ಮೂಲದ ಶಾಶ್ವತ ಪರಿಹಾರದ ಬಗ್ಗೆ ಖರ್ಚು, ವೆಚ್ಚ ವರದಿ ಮತ್ತು ಅಗತ್ಯವಿರುವ ನೀರಿನ ಪ್ರಮಾಣದ ಬಗ್ಗೆ ಪರಿಶೀಲನಾ ವರದಿ ಸಹ ಸಲ್ಲಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು ಈ ಕುರಿತು ಲೋಕೋಪಯೋಗಿ ಹಾಗೂ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು.

ವಿಮಾನ ನಿಲ್ದಾಣಕ್ಕೆ 1000 ಕೆವಿ ವಿದ್ಯುತ್ ವಿತರಣಾ ಕೇಂದ್ರದ ಅಗತ್ಯತೆ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದು, ತಕ್ಷಣ ವಿತರಣಾ ಕೇಂದ್ರ ಖರ್ಚು, ವೆಚ್ಚ ವರದಿ ಸಲ್ಲಿಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಒಟ್ಟಾರೆ ವಿಮಾನ ನಿಲ್ದಾಣಕ್ಕೆ ಪರ್ಯಾಯ ರಸ್ತೆಗಾಗಿ ಭೂಸ್ವಾಧೀನ, ರಸ್ತೆ ಉದ್ದಳತೆ, ಅಪ್ರೋಚ್ ರಸ್ತೆ, ವಿದ್ಯುತ್, ನೀರಿನ ಸೌಲಭ್ಯ ಕಲ್ಪಿಸುವ ಕುರಿತು ಮುಂದಿನ ಹತ್ತು ದಿನಗಳ ಅವಧಿಯಲ್ಲಿ ಖರ್ಚು, ವೆಚ್ಚಗಳ ವರದಿಗಳನ್ನು ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಮದಭಾವಿ ಹಾಗೂ ಬುರಣಾಪೂರ ಗ್ರಾಮಗಳ ಮಧ್ಯದಲ್ಲಿ ವಿಮಾನ ನಿಲ್ದಾಣಕ್ಕಾಗಿ ಕೆಐಎಡಿಬಿ ಯಿಂದ 727 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಎಟಿಆರ್ –72 ವಿಮಾನ ನಿಲ್ದಾಣ ಹಾರಾಟಕ್ಕಾಗಿ ಒಟ್ಟು 220 ಕೋಟಿ ರೂ.ಗಳನ್ನು ನಿಗದಿಪಡಿಸಿ, ಸರ್ಕಾರದಿಂದ ಈಗಾಗಲೇ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಕಾಮಗಾರಿಯನ್ನು ಎರಡು ಹಂತದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದು, ಮೊದಲನೇ ಹಂತದ ಕಾಮಗಾರಿಗಳಿಗೆ 95 ಕೋಟಿ ರೂ. ಮಂಜೂರಾತಿ ದೊರೆತಿದೆ. ಮೊದಲನೇ ಹಂತದ ಕಾಮಗಾರಿಗೆ ತಾಂತ್ರಿಕ ಮಂಜೂರಾತಿ ನೀಡಲಾಗಿದ್ದು, ಈಗಾಗಲೇ ಟೆಂಡರ್ ಆಹ್ವಾನಿಸಲಾಗಿದೆ. ಅಕ್ಟೋಬರ್ 22 ರಂದು ಫ್ರೇ ಬಿಡ್ ಸಭೆ ಸಹ ಮುಕ್ತಾಯಗೊಂಡಿದ್ದು, ಭಾಗವಹಿಸಿದ್ದ ಐದು ಜನ ಬಿಡ್‍ದಾರರಿಗೆ ಸೂಕ್ತ ಸ್ಪಷ್ಟೀಕರಣ ನೀಡಲಾಗಿದೆ. ಟೆಂಡರ್ ಸಲ್ಲಿಸಲು ಅಕ್ಟೋಬರ್ 27 ಕೊನೆಯ ದಿನ ನಿಗದಿಪಡಿಸಲಾಗಿತ್ತು. ಇಂದು ಟೆಕ್ನಿಕಲ್ ಬಿಡ್ ತೆರೆಯಲು ದಿನಾಂಕ ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಸಭೆಯಲ್ಲಿ ತಿಳಿಸಿದರು.

ವಿಮಾನ ನಿಲ್ದಾಣಕ್ಕೆ ಮೊದಲನೇ ಹಂತದ ಕಾಮಗಾರಿಗ ಅವಶ್ಯಕತೆಗೆ ಅನುಗುಣವಾಗಿ ಗ್ರೌಂಡ್ ಲೇವಲಿಂಗ್, ರನ್ ವೇ, ಟ್ಯಾಕ್ಸಿ ವೇ, ಅಪ್ರಾನ್, ಐಸೋಲೇಶನ್ ವೇ, ಭೂಸ್ವಾಧೀನ ಪಡೆದ ಸ್ಥಳದಲ್ಲಿ ಅಪ್ರೋಚ್ ರೋಡ್ ಮತ್ತು ಆಂತರಿಕ ರಸ್ತೆ ಹಾಗೂ ಪಾರ್ಕಿಂಗ್ ವ್ಯವಸ್ಥೆ ಕಾಮಗಾರಿಗಳು ಒಳಗೊಂಡಿವೆ. ವಿಮಾನ ನಿಲ್ದಾಣದ ಒಟ್ಟು 125 ಕೋಟಿ ರೂ.ಗಳ ವಿವಿಧ ಕಾಮಗಾರಿಗಳಿಗಾಗಿ ಡಿಪಿಆರ್ ತಯಾರಿ ಹಂತದಲ್ಲಿದ್ದು, ಸಂಪೂರ್ಣ ಸಿದ್ಧಗೊಂಡ ನಂತರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಸಭೆಯಲ್ಲಿ ತಿಳಿಸಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.