ವಿಜಯಪುರ: ಕೊರೊನಾ ಭೀತಿಯಿಂದ ಲಾಕ್ ಡೌನ್ ಜಾರಿಯಲ್ಲಿರಯವ ಮುಸ್ಲಿಂ ಬಾಂಧವರು ಷಬ್ ಎ ಬರಾತ್ ಅಂಗವಾಗಿ ಸಮೂಹಿಕವಾಗಿ ಪ್ರಾರ್ಥನೆ ಸಲ್ಲಿಸದಿರುವುವಂತೆ ಜಿಲ್ಲಾಧಿಕಾರಿ ಮುಸ್ಲಿಂ ಸಮುದಾಯದ ಮುಖಂಡರಿಗೆ ಮನವಿ ಮಾಡಿದ್ದಾರೆ.
ನಗರ ಗೋಲ ಗುಮ್ಮಜ್ ಪೊಲೀಸ್ ಠಾಣೆಯಲ್ಲಿ ಸಮುದಾಯ ಮುಖಂಡರೊಂದಿಗೆ ಶಾಂತಿ ಸಭೆ ನಡೆಸಿ ಕೂರೊನಾ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ದೇವಾಲಯ, ಚರ್ಚ್ ಸೇರಿದಂತೆ ಎಲ್ಲವೂಗಳಿಗೆ ಪ್ರವೇಶ ನಿಷೇಧ ಹೆರಲಾಗಿದೆ. ಷಬ್ ಎ ಬರಾತ್ ಅಂಗವಾಗಿವಾಗಿ ಖಜ್ರಸ್ಥಾನ್, ಮಸೀದಿಗಳಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಬಾರದು ಎಂದು ವಕ್ಪ್ ಬೋರ್ಡ್ ಕೂಡ ಆದೇಶ ಮಾಡಿದೆ.
ಇನ್ನೂ ಜಿಲ್ಲೆಯಲ್ಲಿ ಕೊವೀಡ್ ವೈರಸ್ ಪಾಸಿಟಿವ್ ಇಲ್ಲವಾದ್ರೂ ಮುಂಜಾಗ್ರತಾ ಕ್ರಮವಾಗಿ ಸಾಮೂಹಿಕ ಪ್ರಾರ್ಥನೆಗೆ ನಿಷೇಧ ಹೇರಬೇಕಿದೆ. ಕೊರೊನಾ ಸೋಂಕು ಬಾರದಂತೆ ಜಿಲ್ಲಾಡಳಿಕ್ಕೆ ಎಲ್ಲರೂ ಕೈ ಜೋಡಿಸಬೇಕಿದ್ದು, ಜಾತಿ,ಧರ್ಮ ಪಂಥ ಮರೆತು ಎಲ್ಲರೂ ಸಹಕರಿಸುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಮನವಿ ಮಾಡಿದರು.
ಬಳಿಕ ಎಸ್ಪಿ ಅನುಪಮ್ ಅಗವಾರ ಮಾತನಾಡಿ ಜಿಲ್ಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿರುವ ಕಾರಣ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಸಾಮೂಹಿಕ ಸಭೆ ಸೇರುವುದನ್ನ ನಿಷೇಧ ಹೇರಲಾಗಿದೆ. ಎಲ್ಲರೂ ಸಾಮೂಹಿಕ ಅಂತರ ಕಾಯ್ದುಕೊಳ್ಳಬೇಕು ಕಾನೂನಿಗೆ ವಿರುದ್ಧವಾಗಿ ನಡೆಯದೆ ಎಲ್ಲರೂ ಜಿಲ್ಲಾಡಳಿಕ್ಕೆ ಹಾಗೂ ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕು ಎಂದರು.