ವಿಜಯಪುರ: ಕೇಂದ್ರ ಸರ್ಕಾರ ಆರೋಗ್ಯ ಸೇವೆಗಳನ್ನು ಸಂಪರ್ಕಿಸುವ ಉದ್ದೇಶದಿಂದ ಆರೋಗ್ಯ ಸೇತು ಎಂಬ ಅಪ್ಲಿಕೇಶನ ಪ್ರಾರಂಭಿಸಿದ್ದು, ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡರೆ ಕೋವಿಡ್ ಸೋಂಕಿತರಿಂದ ಅಂತರ ಕಾಯ್ದುಕೊಳ್ಳಲು ಸುಲಭ ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಸಂಬಂಧಿಸಿದ ಸೋಂಕಿನ ಅಪಾಯ, ಉತ್ತಮ ಅಭ್ಯಾಸ ಹಾಗೂ ಸಂಬಂಧಿತ ವೈದ್ಯಕೀಯ ಸಲಹೆಗಳನ್ನು ಬಳಕೆದಾರರಿಗೆ ತಲುಪಿಸಲು ಇದು ಸಹಾಯಕ. ಟ್ಯ್ರಾಕ್ಟ್ ಆಪ್ ಮೂಲಕ ಸೋಂಕಿತ ವ್ಯಕ್ತಿ ಹತ್ತಿರ ಬಂದರೆ ಎಚ್ಚರಿಕೆಯ ಸೂಚನೆ ಸಹ ನೀಡುತ್ತದೆ. ಈ ಅಪ್ಲಿಕೇಶನನ್ನು ಯಾವುದೇ ಐಒಎಸ್ ಅಥವಾ ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನ್‌ಗೆ ಡೌನ್‌ಲೋಡ್ ಮಾಡಿ ಕೊಳ್ಳಬಹುದಾಗಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಆರೋಗ್ಯ ಸೇತು ಎಂಬ ಆ್ಯಪ್ ಸೋಂಕಿತರ ಮೇಲೆ ಕಣ್ಗಾವಲು ಇರಿಸುವುದಿಲ್ಲವೆಂದು ಕೇಂದ್ರದ ಸಾರ್ವಜನಿಕರ ಮಾಹಿತಿ ಬ್ಯೂರೊ ಸ್ಪಷ್ಟನೆ ನೀಡಿದೆ ಎಂದರು.
ನ್ಯಾಷನಲ್ ಇನ್‌ಫಾರ್ಮೆ ಟಿಕ್ಸ್ ಸೆಂಟರ್ ಈ ಆ್ಯಪ್‌ನ್ನು ಅಭಿವೃದ್ಧಿ ಪಡಿಸಿದ್ದು, ಒಟ್ಟು 11 ಭಾಷೆಗಳಲ್ಲಿ ಈ ಆ್ಯಪ್‌ನಲ್ಲಿ ಮಾಹಿತಿಯಿದೆ. ಹಾಗೆಯೇ ಈ ಅತ್ಯಂತ ಜನೋಪಯೋಗಿ ಆ್ಯಪ್ ಬಳಕೆದಾರರ ಸ್ಥಳದ ಮಾಹಿತಿಯನ್ನು ಇತರ ಸೂಕ್ಮವಾದ ಖಾಸಗಿ ಮಾಹಿತಿಯೊಂದಿಗೆ ಲಿಂಕ್ ಮಾಡಲ್ಲ. ಕೇವಲ ಬ್ಲೂಟೂತ್ ಬಳಸಿ ಸ್ಥಳದ ಮಾಹಿತಿ ಸಂಗ್ರಹಿಸುತ್ತದೆ. ಈ ಮೂಲಕ ಸೋಂಕಿತರ ಟ್ರ್ಯಾಕಿಂಗ್ ಮಾತ್ರ ನೆರವಾಗಲಿದ್ದು, ಆ್ಯಪ್ ಬಳಕೆದಾರರ ಇನ್ಯಾವುದೇ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ ಎಂದು ಸರಕಾರ ಸ್ಪಷ್ಟಪಡಿಸಿದೆ ಎಂದು ವಿವರಿಸಿದರು.