ETV Bharat / state

ಕೋವಿಡ್ ಭೀತಿ: ಮುಳ್ಳು ಕಂಟಿ ಹಾಕಿ ರಸ್ತೆ ಬಂದ್ - ಮುದ್ದೇಬಿಹಾಳ

2ನೇ ದಿನದ ಕರ್ಫ್ಯೂ ಚಾಲ್ತಿಯಲ್ಲಿದ್ದು, ಮುದ್ದೇಬಿಹಾಳ ಪಟ್ಟಣದ ಪ್ರಮುಖ ಜನನಿಬಿಡ ಪ್ರದೇಶದಲ್ಲಿ ಜನ ಸಂಚಾರ ಸಂಪೂರ್ಣ ಸ್ತಬ್ಧವಾಗಿತ್ತು.

Road closed
ಕೋವಿಡ್ ಭೀತಿ: ಮುಳ್ಳುಕಂಟಿ ಹಾಕಿ ರಸ್ತೆ ಬಂದ್
author img

By

Published : Apr 29, 2021, 2:18 PM IST

ಮುದ್ದೇಬಿಹಾಳ: ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಎಸ್​​ಬಿಐ ಎಟಿಎಂ ಮುಂದಿರುವ ರಸ್ತೆಯನ್ನು ಮುಳ್ಳು ಕಂಟಿ ಹಾಕಿ ಬಂದ್ ಮಾಡಲಾಗಿದೆ.

ಕೋವಿಡ್ ಭೀತಿ: ಮುಳ್ಳು ಕಂಟಿ ಹಾಕಿ ರಸ್ತೆ ಬಂದ್

ಇನ್ನು ಕರ್ಫ್ಯೂ ಇದ್ದರೂ ಅನಗತ್ಯವಾಗಿ ಸಂಚರಿಸುತ್ತಿದ್ದ ಯುವಕರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಉಳಿದಂತೆ ಪಟ್ಟಣದ ಜನನಿಬಿಡ ಪ್ರದೇಶಗಳಾದ ಬಸ್ ನಿಲ್ದಾಣ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಇಂದಿರಾ ವೃತ್ತ, ಬನಶಂಕರಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಸೇವಾಲಾಲ್ ವೃತ್ತ, ಬಾಬು ಜಗಜೀವನರಾಂ ವೃತ್ತ ಸೇರಿದಂತೆ ಹಲವು ಕಡೆಗಳಲ್ಲಿ ಜನ ಸಂಚಾರ ಸ್ತಬ್ಧವಾಗಿತ್ತು.

ಬೆಳಗ್ಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು. ಸಿಪಿಐ ಆನಂದ ವಾಘಮೋಡೆ, ಪಿಎಸ್​ಐ ಎಂ.ಬಿ.ಬಿರಾದಾರ ಹಾಗೂ ಸಿಬ್ಬಂದಿ ಪಟ್ಟಣದಲ್ಲಿ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿಯಲ್ಲಿರುವಂತೆ ನೋಡಿಕೊಳ್ಳುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.