ETV Bharat / state

ವಿಜಯಪುರದಲ್ಲಿ ಮೂವರು ಕೊರೊನಾ ವಾರಿಯರ್ಸ್​ಗೆ ತಗುಲಿದ ಮಹಾಮಾರಿ! - District Collector YS Patila

ವಿಜಯಪುರ ಜಿಲ್ಲೆಯಲ್ಲಿ ಕರ್ತವ್ಯನಿರತ ಇಬ್ಬರು ಆಶಾ ಕಾರ್ಯಕರ್ತೆಯರು ಮತ್ತು ಓರ್ವ ಅಂಗನವಾಡಿ ಕಾರ್ಯಕರ್ತೆಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದ್ದಾರೆ.

Corona Positive to Three Corona Warriors in Vijayapura
ವಿಜಯಪುರದಲ್ಲಿ ಮೂವರು ಕೊರೊನಾ ವಾರಿಯರ್ಸ್​ಗೆ ಕೊರೊನಾ ಪಾಸಿಟಿವ್​
author img

By

Published : Jun 5, 2020, 9:56 PM IST

ವಿಜಯಪುರ: ಜಿಲ್ಲೆಯಲ್ಲಿ ಕರ್ತವ್ಯನಿರತ ಇಬ್ಬರು ಆಶಾ ಕಾರ್ಯಕರ್ತೆಯರು ಮತ್ತು ಓರ್ವ ಅಂಗನವಾಡಿ ಕಾರ್ಯಕರ್ತೆಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಇಬ್ಬರು ಆಶಾ ಕಾರ್ಯಕರ್ತೆಯರು ಕಂಟೈನ್ಮೆಂಟ್ ಏರಿಯಾದಲ್ಲಿ ಕೆಲಸ ಮಾಡಿದ್ದು, ಅಂಗನವಾಡಿ ಸೂಪರ್​ವೈಸರ್ ಕಂಟೈನ್ಮೆಂಟ್ ಏರಿಯಾದಲ್ಲಿ ವಾಸಿಸುತ್ತಿದ್ದರು. ಈ ಮೂವರಲ್ಲಿ ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ. ಆದರೆ ಕಂಟೈನ್ಮೆಂಟ್ ಏರಿಯಾದಲ್ಲಿನ ಜನರ ಆರೋಗ್ಯ ತಪಾಸಣೆ ಮಾಡಿದ್ದರು. ಇದರಿಂದ ಸೋಂಕು ಹರಡಿರಬಹುದು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದ್ದಾರೆ.

ಹನ್ನೊಂದು ಮಂದಿ ಸೋಂಕಿತರು ಗುಣಮುಖ: ಜಿಲ್ಲೆಯಲ್ಲಿ ಇಂದು ಮೂವರು ಬಾಲಕರು, ಓರ್ವ ಬಾಲಕಿ, 3 ಮಹಿಳೆಯರು, 3 ಪುರುಷರು, ಓರ್ವ ಯುವಕ ಸೇರಿ ಒಟ್ಟು 11 ಮಂದಿ ಸೋಂಕಿತರು ಸಂಪೂರ್ಣ ಗುಣಮುಖರಾಗಿದ್ದು, ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.