ETV Bharat / state

ವಿಜಯಪುರದಲ್ಲಿಂದು 62 ಮಂದಿಗೆ ಸೋಂಕಿನಿಂದ ವಿಮುಕ್ತಿ - Vijayapura Corona Case

ವಿಜಯಪುರ ಜಿಲ್ಲೆಯಲ್ಲಿಂದು 58 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 3,419ಕ್ಕೆ ಏರಿಕೆಯಾಗಿದೆ.

Corona positive for 58 people in Vijayapur district
ವಿಜಯಪುರದಲ್ಲಿಂದು 58 ಮಂದಿಗೆ ಕೊರೊನಾ ದೃಢ..ಓರ್ವ ಸಾವು
author img

By

Published : Aug 6, 2020, 8:55 PM IST

ವಿಜಯಪುರ: ಜಿಲ್ಲೆಯಲ್ಲಿಂದು 58 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಓರ್ವ ವೃದ್ಧ ವ್ಯಕ್ತಿ ಸಾವನ್ನಪ್ಪಿದ್ದಾನೆ.

ಇಂಡಿ ನಗರದ 68 ವರ್ಷದ (ಪಿ-140195) ವೃದ್ಧ ತೀವ್ರ ಉಸಿರಾಟದ ತೊಂದರೆಯಿಂದ ಆಗಸ್ಟ್​ 1ರಂದು ಆಸ್ಪತ್ರೆಗೆ ದಾಖಲಾಗಿದ್ದು, ಸೋಂಕು ದೃಢಪಟ್ಟಿತ್ತು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಜಿಲ್ಲೆಯಲ್ಲಿನ ಮೃತರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ.

ಇಂದು 62 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ ಒಟ್ಟು 2,396 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನೂ 983 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಲೂಕುವಾರು ಸೋಂಕಿತರು:

ವಿಜಯಪುರ ತಾಲೂಕು 2153, ಬಸವನ ಬಾಗೇವಾಡಿ 196, ಬಬಲೇಶ್ವರ 55, ಚಡಚಣ 35, ದೇವರಹಿಪ್ಪರಗಿ 58, ಇಂಡಿ 192, ಕೊಲ್ಹಾರ 56, ಮುದ್ದೇಬಿಹಾಳ 181, ನಿಡಗುಂದಿ 35, ಸಿಂದಗಿ 191, ತಾಳಿಕೋಟೆ 199 ಹಾಗೂ ತಿಕೋಟಾ ತಾಲೂಕಿನಲ್ಲಿ 68 ಜನರಿಗೆ ಸೋಂಕು ತಗುಲಿದೆ. ಇಲ್ಲಿಯವರೆಗೆ 42,137 ಜನರ ಮೇಲೆ ನಿಗಾ ಇಡಲಾಗಿದೆ. 50,870 ಜನರ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 46,654 ಜನರ ವರದಿ ನೆಗಟಿವ್ ಬಂದಿದೆ. 3,419 ಜನರ ವರದಿ ಪಾಸಿಟಿವ್ ಬಂದಿದೆ. ಇನ್ನೂ 796 ಜನರ ವರದಿ ಬರಬೇಕಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ​ಕುಮಾರ್​ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.