ETV Bharat / state

ವಿಜಯಪುರದಲ್ಲಿಂದು 132 ಮಂದಿಗೆ ಕೊರೊನಾ.. ವೃದ್ಧ ಸಾವು

ವಿಜಯಪುರ ಜಿಲ್ಲೆಯಲ್ಲಿಂದು 132 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಓರ್ವ ವೃದ್ದ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್​ ತಿಳಿಸಿದ್ದಾರೆ.

Corona Positive for 132 in Vijayapur District
ವಿಜಯಪುರದಲ್ಲಿಂದು 132 ಮಂದಿಗೆ ಕೊರೊನಾ..ಓರ್ವ ವೃದ್ದೆ ಸಾವು
author img

By

Published : Jul 26, 2020, 8:09 PM IST

Updated : Jul 26, 2020, 8:24 PM IST

ವಿಜಯಪುರ: ಜಿಲ್ಲೆಯಲ್ಲಿಂದು 132 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 2,295ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್​ ತಿಳಿಸಿದ್ದಾರೆ.

ನಗರದ ಮೀನಾಕ್ಷಿ ಚೌಕ್ ನಿವಾಸಿ 76 ವರ್ಷದ ವೃದ್ಧ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಇವರು ಕೆಮ್ಮು, ತೀವ್ರ ಉಸಿರಾಟ ತೊಂದರೆ ಹಾಗೂ ಕಳೆದ 4 ವರ್ಷಗಳಿಂದ ರಕ್ತದೊತ್ತಡದಿಂದ ಬಳಲುತ್ತಿದ್ದರು. ವೃದ್ದನ ಅಂತ್ಯಸಂಸ್ಕಾರವನ್ನು ಸರ್ಕಾರದ ಮಾರ್ಗಸೂಚಿಯಂತೆ ನೆರವೇರಿಸಲಾಗಿದೆ. ಇಂದು ಸೋಂಕಿನಿಂದ 143 ಜನ ಗುಣಮುಖರಾಗಿದ್ದು, ಇಲ್ಲಿಯವರೆಗೆ 1,724 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಇಲ್ಲಿಯವರೆಗೆ ಒಟ್ಟು 40,381 ಜನರ ಮೇಲೆ ನಿಗಾ ಇಡಲಾಗಿದ್ದು, ಅವರಲ್ಲಿ 41,248 ಜನರ ಗಂಟಲು ದ್ರವ ಪಡೆದುಕೊಳ್ಳಲಾಗಿದೆ. ಇವರಲ್ಲಿ 38,410 ಜನರ ವರದಿ ನೆಗೆಟಿವ್ ಹಾಗೂ 2,295 ಮಂದಿಯ ವರದಿ ಪಾಸಿಟಿವ್​ ಬಂದಿದೆ. ಇನ್ನೂ 543 ಜನರ ವರದಿ ಬರಬೇಕಿದೆ. ಜಿಲ್ಲೆಯಲ್ಲಿ ಈವರೆಗೆ 25 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

Last Updated : Jul 26, 2020, 8:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.