ETV Bharat / state

ಸಿಂದಗಿ-ಇಂಡಿ ಪಟ್ಟಣಗಳಲ್ಲಿ ಕೊರೊನಾ ಸೋಂಕಿತನ ಓಡಾಟ: ಸ್ಥಳೀಯರಲ್ಲಿ ಆತಂಕ - ಇನ್​ಸ್ಟಿಟ್ಯೂಷನಲ್ ಕ್ವಾರಂಟೈನ್

38 ವರ್ಷದ ಕೊರೊನಾ ಸೋಂಕಿತ ವ್ಯಕ್ತಿ ಮೇ 16ರಂದು ಮುಂಬೈನಿಂದ ಬಂದು ಪತ್ನಿಯೊಂದಿಗೆ ಕಲಬುರಗಿಯಲ್ಲಿ 10 ದಿನಗಳ ಕಾಲ ಇನ್​ಸ್ಟಿಟ್ಯೂಷನಲ್ ಕ್ವಾರಂಟೈನ್ ಮುಗಿಸಿದ್ದ. ಈ ವೇಳೆ ಕ್ವಾರಂಟೈನ್​​ ಸಡಿಲಿಕೆ ಮಾಡಿದ್ದ ಕಾರಣ ಇಬ್ಬರನ್ನು ರಿಪೋರ್ಟ್​ ಬರುವ ಮುಂಚಿತವಾಗಿಯೇ ಮನೆಗೆ ಕಳುಹಿಸಲಾಗಿತ್ತು.

ಕೊರೊನಾ
ಕೊರೊನಾ
author img

By

Published : Jun 10, 2020, 9:21 PM IST

ವಿಜಯಪುರ: ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ಜಿಲ್ಲೆಯ ಸಿಂದಗಿ, ಇಂಡಿ ಪಟ್ಟಣಗಳಲ್ಲಿ ಓಡಾಟ ನಡೆಸಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

38 ವರ್ಷದ ಕೊರೊನಾ ಸೋಂಕಿತ ವ್ಯಕ್ತಿ ಮೇ 16ರಂದು ಮುಂಬೈನಿಂದ ಬಂದು ಪತ್ನಿಯೊಂದಿಗೆ ಕಲಬುರಗಿಯಲ್ಲಿ 10 ದಿನಗಳ ಕಾಲ ಇನ್​ಸ್ಟಿಟ್ಯೂಷನಲ್ ಕ್ವಾರಂಟೈನ್ ಮುಗಿಸಿದ್ದ. ಈ ವೇಳೆ ಕ್ವಾರಂಟೈನ್​​ ಸಡಿಲಿಕೆ ಮಾಡಿದ್ದ ಕಾರಣ ಇಬ್ಬರನ್ನು ರಿಪೋರ್ಟ್​ ಬರುವ ಮುಂಚಿತವಾಗಿಯೇ ಮನೆಗೆ ಕಳುಹಿಸಲಾಗಿತ್ತು. ಮನೆಗೆ ಬಂದ ಮೇಲೆ ಹೋಮ್​ ಕ್ವಾರಂಟೈನ್​​ನಲ್ಲಿ ಇರದೇ ಈತ ಅಲೆದಾಡಿದ್ದಾನೆ. ಮಂಗಳವಾರ ರಿಪೋರ್ಟ್​​ ಬಂದಿದ್ದು, ಇಬ್ಬರಲ್ಲಿ ಪತಿಗೆ ಮಾತ್ರ ಕೊರೊನಾ ಇರುವುದು​​ ದೃಢಪಟ್ಟಿದೆ.

ಕೂಡಲೇ ಕಲಬುರಗಿ ಅಧಿಕಾರಿಗಳು ವಿಜಯಪುರ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ. ಈ ವೇಳೆ ಸೋಂಕಿತ ವ್ಯಕ್ತಿ ಇಂಡಿಯಿಂದ ಬೈಕ್​ನಲ್ಲಿ ಸಹೋದರನ ಜೊತೆಗೆ ಲಚ್ಯಾಣ ಗ್ರಾಮಕ್ಕೆ ತೆರಳಿ, ಅನಾರೋಗ್ಯದ ಕಾರಣ ಇಂಡಿ ತಾಲೂಕು ಆಸ್ಪತ್ರೆಯಲ್ಲಿ ಇಂದು ಪ್ರತ್ಯಕ್ಷನಾಗಿದ್ದಾನೆ. ಈತನ ಮಾಹಿತಿ ಪಡೆದ ವೈದ್ಯರು ಕೂಡಲೇ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಘಟನೆಯಿಂದ ಸಿಂದಗಿ, ಇಂಡಿ ಪಟ್ಟಣ ಹಾಗೂ ಲಚ್ಯಾಣ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.