ವಿಜಯಪುರ: ಜಿಲ್ಲೆಯಲ್ಲಿ 35 ವರ್ಷದ ಕೋವಿಡ್ ಸೋಂಕಿತ ಪಿ-16,985 ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದ್ದಾರೆ.
ನಗರದ ಬಸವ ನಗರ ನಿವಾಸಿಯಾದ 35 ವರ್ಷದ ಸೋಂಕಿತ ವ್ಯಕ್ತಿಯು ಜೂನ್ 23ರಂದು ಜ್ವರ, ನೆಗಡಿ, ಕೆಮ್ಮು ಲಕ್ಷಣಗಳಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ. ನಂತರ ಕೋವಿಡ್ ಪಾಸಿಟಿವ್ ಎಂದು ದೃಢಪಟ್ಟಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ (ಸೋಮವಾರ) ಮೃತಪಟ್ಟಿದ್ದಾರೆ. ಇವರು ತೀವ್ರ ಉಸಿರಾಟ ತೊಂದರೆ, ತೀವ್ರ ರಕ್ತದೊತ್ತಡ ಕಾಯಿಲೆಗಳಿಂದ ಬಳಲುತ್ತಿದ್ದರು. ಮೃತರ ಅಂತ್ಯಕ್ರಿಯೆಯನ್ನು ಕೋವಿಡ್ ಮಾರ್ಗಸೂಚಿಯಂತೆ ನೆರವೇರಿಸಲಾಗಿದೆ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಇಂದು ಮತ್ತೆ 22 ಜನರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಇಲ್ಲಿಯವರೆಗೆ ಒಟ್ಟು 12 ಜನ ಮೃತಪಟ್ಟಿದ್ದಾರೆ. ಆದರೆ ಇಂದಿನ ರಾಜ್ಯ ಬುಲೆಟಿನ್ ವರದಿ ಪ್ರಕಟವಾಗಿಲ್ಲ ಎಂದರು.