ಮುದ್ದೇಬಿಹಾಳ: ಪಟ್ಟಣದ ಬಿಜೆಪಿ ನಾಯಕಿ ಕಾಶೀಬಾಯಿ ರಾಂಪೂರ ಅವರು ಕಾರ್ಮಿಕರ ದಿನಾಚರಣೆ ನಿಮಿತ್ತ 1000 ಮಾಸ್ಕ್ಗಳನ್ನು ವಿತರಿಸಿ, ಕಾರ್ಮಿಕ ದಿನವನ್ನ ಸಾರ್ಥಕಗೊಳಿಸಿದರು.
ಪಟ್ಟಣದ ತರಕಾರಿ ಮಾರಾಟಗಾರರು, ಪೌರಕಾರ್ಮಿಕರಿಗೆ ಉಚಿತ ಮಾಸ್ಕ್ಗಳನ್ನು ವಿತರಿಸಲಾಯಿತು. ಆದರ್ಶ ಮಹಿಳಾ ಅಭಿವೃದ್ಧಿ ಸಂಸ್ಥೆ, ಸ್ಪಂದನಾ ಗೆಳೆಯರ ಬಳಗದ ಸಹಕಾರದೊಂದಿಗೆ ಉಚಿತ ಮಾಸ್ಕ್ಗಳನ್ನು ವಿತರಣೆ ಮಾಡಲಾಯಿತು.