ETV Bharat / state

ವಿಜಯಪುರ : 5 ಲಕ್ಷ ರೂ. ಮೌಲ್ಯದ ಅಫೀಮು ಸಾಗಿಸುತ್ತಿದ್ದ ಕಂಟೇನರ್ ವಶಕ್ಕೆ - ಅಫೀಮು ಸಾಗಾಟ ಕಂಟೇನರ್​ ವಶಕ್ಕೆ

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಶರಾಡೋಣ ಗ್ರಾಮದ ಬಳಿ ಲಕ್ಷಾಂತರ ಮೌಲ್ಯದ ಅಫೀಮು ಸಾಗಿಸುತ್ತಿದ್ದ ಕಂಟೇನರ್​ನ್ನು‌ ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ‌.

container-seized-with-rs-5-lakh-worth-opium
ಅಫೀಮು ಸಾಗಿಸುತ್ತಿದ್ದ ಕಂಟೇನರ್ ವಶಕ್ಕೆ
author img

By

Published : Oct 10, 2020, 3:27 AM IST

ವಿಜಯಪುರ : ಜಿಲ್ಲೆಯ ಚಡಚಣ ತಾಲೂಕಿನ ಶರಾಡೋಣ ಗ್ರಾಮದ ಬಳಿ ಸುಮಾರು 5 ಲಕ್ಷ ರೂ. ಮೌಲ್ಯದ 12 ಕೆ.ಜಿ ಅಫೀಮು ಹಾಗೂ ಗಸಗಸೆ ಪೌಡರ್ ಅಫೀಮು ಸಾಗಿಸುತ್ತಿದ್ದ ಕಂಟೇನರ್​ನ್ನು‌ ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ‌.

ಅಫೀಮು ಸಾಗಿಸುತ್ತಿದ್ದ ಕಂಟೇನರ್ ವಶಕ್ಕೆ

ರಾಜಸ್ಥಾನದಿಂದ ದ್ವಿಚಕ್ರ ವಾಹನಗಳ ಬಿಡಿ ಭಾಗಗಳನ್ನು ತುಂಬಿಕೊಂಡು ಕಂಟೇನರ್ ಬೆಂಗಳೂರಿಗೆ ಹೋಗುತ್ತಿತ್ತು. ಈ ವೇಳೆ ಕಂಟೇನರ್‌ನಲ್ಲಿ ಮಾದಕ ವಸ್ತುವಿರುವ ಖಚಿತ ಮಾಹಿತಿ ಮೇರೆಗೆ ಅಬಕಾರಿ ಜಂಟಿ ಆಯುಕ್ತ ಡಾ. ವೈ ಮಂಜುನಾಥ ನೇತೃತ್ವದ ತಂಡವು ಶರಾಡೋಣ ಗ್ರಾಮದ ಬಳಿ ದಾಳಿ ನಡೆಸಿದೆ.

ದಾಳಿ ವೇಳೆ 5 ಲಕ್ಷ ರೂ. ಮೌಲ್ಯದ ಅಫೀಮು, 30 ಲಕ್ಷ ಮೌಲ್ಯದ ಕಂಟೇನರ್ ಹಾಗೂ ಚಾಲಕ ಸತೀಶ ಚೌಧರಿ ಎಂಬಾತನನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕಂಟೇನರ್ ಚಾಲಕ ರಾಜಸ್ಥಾನ ಮೂಲದವನು ಎಂದು ತಿಳಿದು ಬಂದಿದೆ. ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಅಕ್ರಮ ಸಾಗಾಟದ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.