ವಿಜಯಪುರ: ನಗರದ ಸ್ಟೇಷನ್ ರಸ್ತೆಯಲ್ಲಿರುವ ಸೀಲ್ ಡೌನ್ ಪ್ರದೇಶದಲ್ಲಿ ಬೆಳಗಿನಿಂದ ಜನ ಸಂಚಾರಕ್ಕೆ ಪೊಲೀಸ್ ಇಲಾಖೆ ಸಂಪೂರ್ಣವಾಗಿ ನಿಷೇಧ ಹೇರಿದೆ.
ಸೀಲ್ ಡೌನ್ ಪ್ರದೇಶದ ಜನರು ವಿನಾ ಕಾರಣ ರಸ್ತೆಗಿಳಿಯುತ್ತಿದ್ದ ಹಿನ್ನೆಲೆ ಪೊಲೀಸರು ಹೈ ಅಲರ್ಟ್ ಘೋಷಣೆ ಮಾಡಿದ್ದಾರೆ. ಇಷ್ಟಾದರೂ ಹೊರಗಡೆ ಬರುತ್ತಿದ್ದ ಜನರಿಗೆ ಪೊಲೀಸರು ಮನವೊಲಿಸಿ ಮನೆಗೆ ಹೋಗುವಂತೆ ಮನವಿ ಮಾಡಿದರು.