ETV Bharat / state

ಸಿದ್ದರಾಮಯ್ಯ ಕೋಲಾರ, ಬಾದಾಮಿ ಬಿಟ್ಟು ಮೈಸೂರು ಭಾಗದಲ್ಲಿ ಸ್ಪರ್ಧಿಸಲಿ: ಸಿ.ಎಂ.ಇಬ್ರಾಹಿಂ - etv bharat kannada

ಉರಿಗೌಡ-ನಂಜೇಗೌಡ ವಿವಾದ, ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟದ ಬಗ್ಗೆ ಜೆಡಿಎಸ್ ಮುಖಂಡ ಸಿ.ಎಂ.ಇಬ್ರಾಹಿಂ ಮಾತನಾಡಿದರು.

cm-ibrahimc-gives-suggestion-siddaramaiah
ಸಿದ್ದರಾಮಯ್ಯ ಕೋಲಾರ, ಬಾದಾಮಿ ಬಿಟ್ಟು ಹಳೆ ಮೈಸೂರನಲ್ಲಿ ಸ್ಪರ್ಧಿಸಲಿ: ಸಿ.ಎಂ.ಇಬ್ರಾಹಿಂ
author img

By

Published : Mar 22, 2023, 6:43 AM IST

ಸಿ.ಎಂ.ಇಬ್ರಾಹಿಂ ಹೇಳಿಕೆ

ವಿಜಯಪುರ: ಹಳೆ ಮೈಸೂರು ಭಾಗದಲ್ಲಿ ಮುಸ್ಲಿಮರು ಒಕ್ಕಲಿಗರು ಒಂದಾಗುತ್ತಿದ್ದಾರೆ ಎಂದು ಮುಸ್ಲಿಮರನ್ನು ಒಕ್ಕಲಿಗರ ಮೇಲೆ ಎತ್ತಿಕಟ್ಟಲು ಮಾಡಿರುವ ತಂತ್ರವೇ ಉರಿಗೌಡ-ನಂಜೇಗೌಡ ವಿವಾದ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದರು.‌ ಆಲಮಟ್ಟಿಯಲ್ಲಿ‌ ಮಂಗಳವಾರ ಮಾತನಾಡಿದ ಅವರು, ‘‘ಉರಿಗೌಡ ಮತ್ತು ನಂಜೇಗೌಡ ಒಂದು ಕಾಲ್ಪನಿಕ ಕಥೆ. ಚುನಾವಣೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗರು, ಮುಸ್ಲಿಮರು ಒಂದಾಗುತ್ತಿದ್ದಾರೆ. ಮುಸ್ಲಿಮರನ್ನು ಗೌಡರ ಮೇಲೆ ಎತ್ತಿಕಟ್ಟಲು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾಡಿರುವ ಪ್ಲಾನ್ ಇದು’’ ಎಂದು ಟೀಕಿಸಿದರು.

"ನಾನು ಮುಸ್ಲಿಂ ಅನ್ನೋ ಕಾರಣಕ್ಕೆ ಕಾಂಗ್ರೆಸ್ ನನ್ನನ್ನು ಲೀಡರ್ ಮಾಡಲಿಲ್ಲ. ಕೌನ್ಸಿಲ್​ನಲ್ಲಿ 25 ಜನರ ಪೈಕಿ 19 ಜನ ನನಗೆ ಸಪೋರ್ಟ್ ಮಾಡಿದ್ದರು. ಆದರೆ ಕಾಂಗ್ರೆಸ್ ನನ್ನನ್ನು ಲೀಡರ್ ಮಾಡಲಿಲ್ಲ" ಎಂದರು. ಜೆಡಿಎಸ್ ಮೂರು ಬಾರಿ ಮುಸ್ಲಿಮರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದೆ. ಕಾಂಗ್ರೆಸ್ ಈ ವರೆಗೂ ಪಕ್ಷದ ಅಧ್ಯಕ್ಷ ಸ್ಥಾನ ಕೊಟ್ಟಿಲ್ಲ ಎಂದು ದೂರಿದರು.

ಇದನ್ನೂ ಓದಿ : ಉರಿಗೌಡ ನಂಜೇಗೌಡರ ಇತಿಹಾಸ ಪಠ್ಯದಲ್ಲಿ ಸೇರಿಸುವ ವಿಚಾರ ಕಮಿಟಿ ನೋಡುತ್ತೆ: ಸಿಎಂ ಬೊಮ್ಮಾಯಿ

"ಚುನಾವಣೆಗಾಗಿ ಕಾಂಗ್ರೆಸ್‌ನವರು ಹ್ಯಾಂಡ್‌ಬಿಲ್ ಹಂಚುತ್ತಿದ್ದಾರೆ. ಆದರೆ ಅದರಲ್ಲಿ ಒಬ್ಬರೇ ಒಬ್ಬ ಮುಸ್ಲಿಂ ನಾಯಕರ ಫೋಟೋ ಇಲ್ಲ. ಈ ಬಾರಿ ಉದ್ದೇಶಪೂರ್ವಕವಾಗಿ ಮೌಲಾನಾ ಅಬ್ದುಲ್ ಕಲಾಂ ಆಜಾದ್​ ಅವರ ಫೋಟೋ ಹಾಕಿಲ್ಲ ಎಂದು ಆರೋಪಿಸಿದರು. ಬಿಜೆಪಿಯದ್ದು ಹಾರ್ಡ್ ಹಿಂದುತ್ವ, ಕಾಂಗ್ರೆಸ್‌ನದ್ದು ಸಾಫ್ಟ್ ಹಿಂದುತ್ವ" ಎಂದು ಇದೇ ವೇಳೆ ಸಿ.ಎಂ.ಇಬ್ರಾಹಿಂ ವಿಶ್ಲೇಷಣೆ ಮಾಡಿದರು.

ಸಿದ್ದರಾಮಯ್ಯಗೆ ಸಲಹೆ: ಮಾಜಿ ಸಿಎಂ ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟ ವಿಚಾರವಾಗಿ ಮಾತನಾಡಿ, "ಸಿದ್ದರಾಮಯ್ಯಗೆ ಕೋಲಾರ, ಬಾದಾಮಿ ಬೇಡ. ಅವರು ಮೈಸೂರು ಭಾಗದಲ್ಲಿ ಚುನಾವಣೆಗೆ ನಿಲ್ಲಲಿ. ಈ ಮೂಲಕ ಅಸೆಂಬ್ಲಿಗೆ ಬರಲಿ" ಎಂದರು.

ಉರಿಗೌಡ-ನಂಜೇಗೌಡ ವಿವಾದ​: ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದ ಉರಿಗೌಡ-ನಂಜೇಗೌಡ ಸಿನಿಮಾಕ್ಕೆ ಕಡಿವಾಣ​ ಬಿದ್ದಿದೆ. ಸೋಮವಾರ ನಿರ್ಮಲಾನಂದ ಸ್ವಾಮೀಜಿಯನ್ನು ಭೇಟಿ ಮಾಡಿದ ಸಚಿವ ಮುನಿರತ್ನ ಸಿನಿಮಾ ನಿರ್ಮಾಣ ಕಾರ್ಯದಿಂದ ಹಿಂದೆ ಸರಿದಿದ್ದಾರೆ. ಈ ಕುರಿತ ಚಿತ್ರ ನಿರ್ಮಾಣ ಮಾಡಲ್ಲ. ಚರ್ಚೆಯೂ ನಡೆಸಲ್ಲ ಎಂದು ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ: ಉರಿಗೌಡ, ನಂಜೇಗೌಡ ವಿಚಾರವನ್ನು ಸ್ವಾಮೀಜಿಗೆ ಮನವರಿಕೆ ಮಾಡಿಕೊಡ್ತೀವಿ: ಸಿ ಟಿ ರವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.