ವಿಜಯಪುರ: ಜಿಲ್ಲಾಧಿಕಾರಿ ಎದುರೇ ಇಬ್ಬರು ರಾಜಕೀಯ ನಾಯಕರು ಜಗಳವಾಡಿದ್ದಾರೆ. ಈ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಣದಲ್ಲಿರುವ ತಹಶೀಲ್ದಾರ ಕಚೇರಿಯ ಎದುರು ನಡೆಯಿತು. ಕ್ಷುಲ್ಲಕ ಕಾರಣಕ್ಕೆ ಬಿಜೆಪಿ ಮುಖಂಡ ಹಾಗು ನಿಗಮ ಮಂಡಳಿ ಅಧ್ಯಕ್ಷ ವಿಜುಗೌಡ ಪಾಟೀಲ ಹಾಗೂ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಸುನೀಲ ಗೌಡ ಪಾಟೀಲ ಮಧ್ಯೆ ಮಾತಿನ ಚಕಮಕಿ ನಡೆದಿದೆ.
ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಪ್ರಯುಕ್ತ ತಾಲೂಕು ಕಚೇರಿಗೆ ಡಿಸಿ ದಾನಮ್ಮನವರ ಭೇಟಿ ನೀಡಿದ್ದಾಗ ಹೈಡ್ರಾಮಾ ನಡೆಯಿತು. ಇದನ್ನು ಗಮನಿಸಿದ ಡಿಸಿ, ಉಭಯ ನಾಯಕರ ಜಗಳ ತಿಳಿಗೊಳಿಸಿದರು.
ಡಿಸಿ ವಿಜಯ ಮಹಾಂತೇಶ ದಾನಮ್ಮನವರ ಪ್ರತಿಕ್ರಿಯಿಸಿ, "ಅಧಿಕೃತ ಕಾರ್ಯಕ್ರಮ ಇರಲಿಲ್ಲ. ಸರ್ಕಾರದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮವಿತ್ತು. ಹೀಗಾಗಿ ಬಬಲೇಶ್ವರ ತಾಲೂಕಿಗೆ ಭೇಟಿ ನೀಡಿದ್ದೆ. ಅಲ್ಲಿ ಜನ ಬಂದಿದ್ದರು. ಕಚೇರಿಯಲ್ಲಿ ಸರಿಯಾಗಿ ಜಾತಿ ಪ್ರಮಾಣಪತ್ರ ನೀಡುತ್ತಿಲ್ಲ ಎಂದು ಜನರು ತಮ್ಮ ಅಳಲು ತೋಡಿಕೊಂಡರು. ಜನನಾಯಕರು ಸಹ ಅಲ್ಲಿದ್ದರು. ಇದರ ಮಧ್ಯೆ ಉಭಯ ನಾಯಕರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಘಟನೆಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ" ಎಂದು ಹೇಳಿದರು.
ಇದನ್ನೂ ಓದಿ: 'ನೀನು ಹೇಳಿದ ಹಾಗೆ ಕೇಳ್ಕೊಂಡು ಎಂಎಲ್ಎ ಗಿರಿ ಮಾಡುವ ಕಾಲ ಹೋಯ್ತು': ರೇವಣ್ಣ-ಪ್ರೀತಂ ಗೌಡ ವಾಕ್ಸಮರ