ETV Bharat / state

ಕಣ್ಣು ದಾನಕ್ಕೆ ವಿಜಯಪುರ ಯುವಕರ ವಾಗ್ದಾನ.. ರಾಜಕುಮಾರನ ಮಾದರಿ ಹಾದಿಯಲ್ಲಿ ಫ್ಯಾನ್ಸ್​ - ಕಣ್ಣು ದಾನಕ್ಕೆ ವಿಜಯಪುರ ಯುವಕರ ವಾಗ್ದಾನ.,

ವಿಜಯಪುರ ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸಿದರು. ಪುನೀತ್​ರಾಜ್​ಕುಮಾರ್​ ಅವರ ಫ್ಲೆಕ್ಸ್ ಗೆ ಹಾರ ಹಾಕಿ, ಐದು ತರಹದ ಹಣ್ಣುಗಳನ್ನು ಇಟ್ಟು ಕಾಯಿ ಒಡೆದು ಪೂಜೆ ಸಲ್ಲಿಸಿದರು. ಬಳಿಕ ಅವರ ಕಾರ್ಯಗಳನ್ನು ನೆನೆಯಲಾಯಿತು.

condolence
ಪುನೀತ್ ರಾಜ್​ಕುಮಾರ್​ ಅವರ ಭಾವಚಿತ್ರಕ್ಕೆ ಶ್ರದ್ದಾಂಜಲಿ
author img

By

Published : Oct 31, 2021, 3:53 PM IST

ವಿಜಯಪುರ: ಪವರಸ್ಟಾರ್ ಪುನೀತ್​ರಾಜ್​ಕುಮಾರ್​ ತಮ್ಮ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಅವರ ಎರಡು ಕಣ್ಣು ದಾನ ಮಾಡುವ ಮೂಲಕ ತಂದೆ ಡಾ. ರಾಜ್​ಕುಮಾರ್​ ಹಾದಿಯಲ್ಲಿ ಸಾಗಿ ಮಾದರಿಯಾಗಿದ್ದಾರೆ. ಇದರಿಂದ ಪ್ರೇರೇಪಣೆಗೊಂಡ ಗುಮ್ಮಟನಗರಿ ಯುವಕರು ನೇತ್ರದಾನದ ವಾಗ್ದಾನ ಹಾಗೂ ರಕ್ತದಾನ ಮಾಡುವ ಮೂಲಕ ತಮ್ಮ ನೆಚ್ಚಿನ ನಟನಿಗೆ ನಮನ ಸಲ್ಲಿಸಿದ್ದಾರೆ.

ರಕ್ತದಾನದ ಬಗ್ಗೆ ಕಾರ್ಯಕ್ರಮದ ಆಯೋಜಕರು ಮಾತನಾಡಿದ್ದಾರೆ

ಇಂದು ಪವರ್​ಸ್ಟಾರ್ ಪುನೀತ್​ ರಾಜ್​ಕುಮಾರ್​ ಅವರ ಅಂತ್ಯಕ್ರಿಯೆ ನೆರವೇರಿದೆ. ಕಂಠೀರವ ಸ್ಟುಡಿಯೋ ಆವರಣದಲ್ಲಿ ಬೆಳಗ್ಗೆ ಅಂತ್ಯ ಸಂಸ್ಕಾರ ಮಾಡಲಾಗಿದೆ. ಶುಕ್ರವಾರ ಪುನೀತ್​ ನಿಧನರಾದ ಮೇಲೆ ಅವರ ಕುಟುಂಬ ವರ್ಗ ನಾರಾಯಣ ನೇತ್ರಾಲಯಕ್ಕೆ ಮಾಡಿದ್ದ ವಾಗ್ದಾನದಂತೆ ಅವರ ಕಣ್ಣನ್ನು ದಾನ ಮಾಡಲಾಯಿತು.‌

Blood donation
ರಕ್ತದಾನ

ಪುನೀತ್ ಅವರ ಈ ಆದರ್ಶವನ್ನೇ ಮಾದರಿ‌ ಮಾಡಿಕೊಂಡ ಬಸವನಾಡು ವಿಜಯಪುರ ನಗರದಲ್ಲಿ ಯುವ ಭಾರತ ಸಮಿತಿ, ಮಠಪತಿ ಗಲ್ಲಿಯ ಶ್ರೀ ಆದಿಶಕ್ತಿ ತರುಣ ಸಂಘ ಹಾಗೂ ಮಠಪತಿ ಗಲ್ಲಿ ಯುವಕರ ಬಳಗದಿಂದ ಸ್ವಯಂ ಪ್ರೇರಿತ ರಕ್ತದಾನ ಹಾಗೂ ನೇತ್ರದಾನದ ವಾಗ್ದಾನ ಕಾರ್ಯಕ್ರಮ ಜರುಗಿತು.

ಈ ಶಿಬಿರದಲ್ಲಿ ಐವತ್ತಕ್ಕೂ ಹೆಚ್ಚು ಯುವಕರು ಭಾಗಿಯಾಗಿ ರಕ್ತದಾನ ಮಾಡಿದರು. ಹಾಗೂ ನೇತ್ರದಾನದ ವಾಗ್ದಾನ ಪತ್ರಕ್ಕೆ ಸಹಿ ಹಾಕಿದರು. ಇದರಲ್ಲಿ 40 ಕ್ಕೂ ಹೆಚ್ಚು ಯುವಕರು ತಮ್ಮ ಸಾವಿನ ಬಳಿಕ ನೇತ್ರದಾನ ಮಾಡುವ ವಾಗ್ದಾನ ಮಾಡಿದ್ರೆ, 35 ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿದರು.

Blood donation in vijayapura
ವಿಜಯಪುರದಲ್ಲಿ ರಕ್ತದಾನ ಶಿಬಿರ

ವಿಜಯಪುರ ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸಿದರು. ಪುನೀತ್​ರಾಜ್​ಕುಮಾರ್​ ಅವರ ಫ್ಲೆಕ್ಸ್ ಗೆ ಹಾರ ಹಾಕಿ, ಐದು ತರಹದ ಹಣ್ಣುಗಳನ್ನು ಇಟ್ಟು ಕಾಯಿ ಒಡೆದು ಪೂಜೆ ಸಲ್ಲಿಸಿದರು. ಬಳಿಕ ಅವರ ಕಾರ್ಯಗಳನ್ನು ನೆನೆಯಲಾಯಿತು.

ಇದೇ ಸಂದರ್ಭದಲ್ಲಿ ಪುನೀತ್​ ಸಾವಿನಿಂದ ಕೆಲ ಯುವಕರು ಆತ್ಮಹತ್ಯೆ, ದೇಹಕ್ಕೆ ಹಾನಿ ಮಾಡಿಕೊಳ್ಳುತ್ತಿರುವ ಕುರಿತು ಯುವಕರು ಕಳವಳ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿ, ಮತ್ತೊಬ್ಬರಿಗೆ ಮಾದರಿಯಾಗೋಣ. ನೇತ್ರದಾನ ಹಾಗೂ ರಕ್ತದಾನದಂತಹ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಅಪ್ಪುವಿನ ಹಾದಿಯಲ್ಲೇ ಸಾಗೋಣ ಎಂದು ಕರೆ ನೀಡಿದರು.

ಓದಿ: ಸಾವಿನಲ್ಲೂ ಸಾರ್ಥಕತೆ ಮೆರೆದ ಪವರ್ ಸ್ಟಾರ್: ಇಬ್ಬರ ಬಾಳಿಗೆ ಬೆಳಕಾದ ದೊಡ್ಮನೆ ಹುಡ್ಗ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.