ETV Bharat / state

ನಾನು ಯಾರನ್ನೂ ಬಿಡಲ್ಲ ಅಬ್ಬರಿಸುತ್ತೇನೆ: ಅರುಣ್​ಸಿಂಗ್​ಗೆ​ ಯತ್ನಾಳ್​ ಟಾಂಗ್​

ಬಿಜೆಪಿ ಶಾಸಕ ಬಸನಗೌಡ​ ಪಾಟೀಲ್​ ಯತ್ನಾಳ್​ ವಿರುದ್ಧ ನೋಟಿಸ್​ ನೀಡುತ್ತೇವೆ ಎಂದು ಅರುಣ್​ಸಿಂಗ್​ ಹೇಳಿಕೆಗೆ ಪ್ರತಿಕ್ರಿಯಿಸಿದ ಯತ್ನಾಳ್​, ನಾನು ಯಾರನ್ನೂ ಬಿಡಲ್ಲ ಅಬ್ಬರಿಸುತ್ತೇನೆ ಎಂದು ಹೇಳಿದರು.

Yatnal
ಬಸನಗೌಡ​ ಪಾಟೀಲ್​ ಯತ್ನಾಳ್​
author img

By

Published : Oct 22, 2022, 4:57 PM IST

Updated : Oct 22, 2022, 6:19 PM IST

ವಿಜಯಪುರ: ​ಬಿಜೆಪಿ ನಾಯಕರ ವಿರುದ್ಧ ಮಾತನಾಡದಂತೆ ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ಅವರಿ​ಗೆ ನೋಟಿಸ್​ ನೀಡುತ್ತೇವೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣಸಿಂಗ್ ಹೇಳಿಕೆಗೆ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಪ್ರತಿಕ್ರಿಯಿಸಿ ನಾನು ಯಾರನ್ನೂ ಬಿಡಲ್ಲ ಅಬ್ಬರಿಸುತ್ತೇನೆ ಎನ್ನುವ ಮೂಲಕ ಟಾಂಗ್​ ಕೊಟ್ಟಿದ್ದಾರೆ.

ಶನಿವಾರ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಬಳಿಕ ಮಾತನಾಡಿದ ಅವರು, ಇಂತಹ ಹೇಳಿಕೆಗೆ ಪ್ರತಿಕ್ರಿಯಿಸಲು ನನಗೆ ಸಮಯ ಇಲ್ಲ. ನಾನು ಯಾರನ್ನೂ ಬಿಡಲ್ಲ, ಅಬ್ಬರಿಸುತ್ತೇನೆ. ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ಅಬ್ಬರಿಸಲು ಸಮಯ ಇಲ್ಲ ಎಂದರು. ನಾನು ಯಾರಿಗಾದರೂ ಸಡಲು ಬಿಡ್ತಿನಾ..? ನಾನು ಅಬ್ಬರಿಸುತ್ತೇನೆ. ನಾನು ಯಾರ ಮನೆಗೂ ಹೋಗಿ ನಿಂತಿಲ್ಲ ಎಂದರು.

ಬಳಿಕ ನಟ ಚೇತನ್ ವಿರುದ್ಧ ಶಾಸಕ ಯತ್ನಾಳ್​ ವಾಗ್ದಾಳಿ ನಡೆಸಿ, ಚೇತನ್​ ನಾಲಾಯಕ್​ ಹಾಗೂ ಒಂದು ಧರ್ಮದ ಏಜೆಂಟ್ ಆಗಿದ್ದಾರೆ. ಆ ಧರ್ಮದವರು ರೊಕ್ಕಾ ಕೊಟ್ಟು ಇಂತಹ ಅಯೋಗ್ಯ ಕೆಲಸ ಮಾಡಿಸುತ್ತಾರೆ. ಹಿಂದೂ ವಿರೋಧಿ ಕೆಲಸ ಮಾಡುತ್ತಾರೆ. ದೈವಾರಾಧನೆ ನಮ್ಮ ಸಂಸ್ಕೃತಿಯ ಭಾಗವಾಗಿದೆ. ನಮ್ಮ ಆರಾಧನೆ ಬಗ್ಗೆ ಮಾತನಾಡುವವರಿಗೆ ದೇವರು ಶಿಕ್ಷೆ ನೀಡುತ್ತಾನೆ ಎಂದು ಹೇಳಿದರು.

ಇದನ್ನೂ ಓದಿ: ಮುಂದಿನ ಒಂದು ವರ್ಷದೊಳಗೆ 10 ಲಕ್ಷ ಉದ್ಯೋಗ ನೀಡೋ ಗುರಿ : ಶೋಭಾ ಕರಂದ್ಲಾಜೆ

Last Updated : Oct 22, 2022, 6:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.