ETV Bharat / state

ಬ್ರಿಟಿಷರ ಜತೆ ನೆಹರು ಹೊಂದಾಣಿಕೆ, ಸ್ವಾತಂತ್ರ್ಯ ತಡವಾಗಿ ಸಿಗಲು ಕಾರಣ - ಯತ್ನಾಳ್‌ - ಬಸನಗೌಡ ಪಾಟೀಲ ಯತ್ನಾಳ್ ಸುದ್ದಿ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ಮಾಡುತ್ತಿರುವುದು ಅಂಬೇಡ್ಕರ್ ಹಾಗೂ ಸಂವಿಧಾನಕ್ಕೆ ಅಪಮಾಣ ಮಾಡಿದ ಹಾಗೆ. ಲೋಕಸಭೆ, ರಾಜ್ಯಸಭೆಯಲ್ಲಿ ಪಾಸಾದ ಸಂಸತ್ತಿನ ವಿಧೇಯಕ ಭಾರತಕ್ಕೆ ಅನ್ವಯವಾಗಲಿದೆ. ಸಂಸತ್ತಿನಲ್ಲಿ ವಿರೋಧ ಮಾಡುವಲ್ಲಿ ವಿಫಲರಾಗಿದ್ದಾರೆ. ಈಗ ಪೌರತ್ವ ಕಾಯ್ದೆ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಅಂತಾ ಶಾಸಕ ಯತ್ನಾಳ್ ಕಿಡಿಕಾರಿದರು.

Basanagowda Patil Yatnal
ಬಸನಗೌಡ ಪಾಟೀಲ ಯತ್ನಾಳ್
author img

By

Published : Feb 15, 2020, 2:21 PM IST

ವಿಜಯಪುರ: ಕಾಂಗ್ರೆಸ್ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಲ್ಲ. ಅವರದ್ದು ಬರೀ ಅಡ್ಜೆಸ್ಟ್‌ಮೆಂಟ್​ ರಾಜಕಾರಣ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಯತ್ನಾಳ್, ಯಾವಾಗ ಸುಭಾಷ್ ಚಂದ್ರ ಬೋಸ್ ಅವರನ್ನ ಪದಚ್ಯುತಿ ಮಾಡಿ ಜವಾಹರಲಾಲ್ ನೆಹರು ಆಯ್ಕೆಯಾದ್ರೋ ಅವಾಗ ಗೊತ್ತಾಯಿತು ಇವರು ದೇಶಕ್ಕಾಗಿ ಹೋರಾಟ ಮಾಡಿಲ್ಲ ಎಂದು. ನೆಹರು ಬ್ರಿಟಿಷರ್‌ ಜತೆಗೆ ಬರೀ ಅಡ್ಜೆಸ್ಟ್‌ಮೆಂಟ್​ ರಾಜಕಾರಣ ಮಾಡಿದ್ದರು. ಈಗಲು ಅದನ್ನೇ ಮುಂದುವರೆಸುತ್ತಿದ್ದಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ್

ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಡವಾಗಲೂ ಕಾಂಗ್ರೆಸ್‌ನವರೇ ಕಾರಣ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ಮಾಡುತ್ತಿರುವುದು ಅಂಬೇಡ್ಕರ್ ಹಾಗೂ ಸಂವಿಧಾನಕ್ಕೆ ಅಪಮಾಣ ಮಾಡಿದ ಹಾಗೆ. ಲೋಕಸಭೆ, ರಾಜ್ಯಸಭೆಯಲ್ಲಿ ಪಾಸಾದ ಸಂಸತ್ತಿನ ವಿಧೇಯಕ ಭಾರತಕ್ಕೆ ಅನ್ವಯವಾಗಲಿದೆ. ಸಂಸತ್ತಿನಲ್ಲಿ ವಿರೋಧ ಮಾಡುವಲ್ಲಿ ವಿಫಲರಾಗಿದ್ದಾರೆ. ಈಗ ಪೌರತ್ವ ಕಾಯ್ದೆ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಅಂತಾ ಶಾಸಕ ಯತ್ನಾಳ್ ಕಿಡಿಕಾರಿದರು.

ಗಾಂಧೀಜಿ ಅಂದೇ ಹೇಳಿದ್ರು ಕಾಂಗ್ರೆಸ್ ಹೆಸರಲ್ಲಿ ರಾಜಕಾರಣ ಮಾಡುತ್ತೆ ಎಂದು. ಅವರ ಮಾತು ಇಂದು ಸತ್ಯವಾಗಿದೆ. ಸ್ವ-ಹಿತ, ಕುಟುಂಬಶಾಹಿ ವ್ಯವಸ್ಥೆ ಬಗ್ಗೆ ಗಾಂಧೀಜಿ ಮೊದಲೇ ಹೇಳಿದ್ದರು ಎಂದರು.

ಬಿಎಸ್‌ವೈ ಮೂರು ವರ್ಷ ಆಡಳಿತದಲ್ಲಿರಬೇಕು ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಸೌಲಭ್ಯ ನೀಡಬೇಕು ಈ ಕುರಿತು ಅಧಿವೇಶನದಲ್ಲಿ ಪ್ರಸ್ತಾಪ ಮಾಡುತ್ತೇನೆ. ರಾಜಕೀಯ ಬೆಳವಣಿಗೆ ಕುರಿತು ಉಮೇಶ ಕತ್ತಿ ಜೊತೆಗೆ ಮಾತನಾಡಿದ್ದು, ಈ ಕುರಿತು ಸಿಎಂಗೆ ಪತ್ರದಲ್ಲಿ ವಿವರಣೆ ನೀಡಲಾಗಿದೆ. ಅಲ್ಲದೇ ರಾಜ್ಯದ ಸ್ಥಿತಿಗತಿ ಬಗ್ಗೆ ಸಿಎಂ ಹಾಗೂ ಕೇಂದ್ರಕ್ಕೆ ಬರೆದ ಪತ್ರವನ್ನ ಮಧ್ಯಾಹ್ನ 3 ಗಂಟೆಗೆ ಬಿಡುಗಡೆ ಮಾಡುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾಧ್ಯಮಗಳಿಗೆ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.