ವಿಜಯಪುರ: ಬಿರುಗಾಳಿ ಸಹಿತ ಭಾರೀ ಮಳೆಗೆ ಮನೆಯ ಛಾವಣಿ ಹಾರಿ ಹೋದ ಪರಿಣಾಮ ಜೋಳಿಗೆಯಲ್ಲಿ ಮಲಗಿದ್ದ ಪುಟ್ಟ ಮಗು ಸಾವನ್ನಪ್ಪಿದ ದಾರುಣ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಸುರಗಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅಬ್ದುಲ್ ರೆಹೆಮಾನ್ ಎಂಬುವರ 8 ತಿಂಗಳ ಮಗು ಸಾವನ್ನಪ್ಪಿದೆ. ಬಿರುಗಾಳಿಯ ರಭಸಕ್ಕೆ ಛಾವಣಿ ಹಾರಿ ಹೋಗಿದೆ. ಪರಿಣಾಮ ಛಾವಣಿಯ ಕಂಬಕ್ಕೆ ಕಟ್ಟಿದ್ದ ಜೋಳಿಯಲ್ಲಿದ್ದ ಮಗು ವಿದ್ಯುತ್ ಕಂಬಕ್ಕೆ ಸಿಲುಕಿ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.
ಸಿಡಿಲು ಬಡಿದು ಮಹಿಳೆ ಸಾವು:
ಜಿಲ್ಲೆಯ ಇಂಡಿ ತಾಲೂಕಿನ ಅಂಜುಟಗಿ ಗ್ರಾಮದಲ್ಲಿ ಸಿಡಿಲು ಬಡಿದು ಮಹಿಳೆಯೋರ್ವಳು ಸಾವನ್ನಪ್ಪಿದ್ದಾಳೆ. ಮಹಾದೇವಿ ನಿಂಬರಗಿ (50) ಮೃತಪಟ್ಟ ಮಹಿಳೆ. ಹೊಲದ ಕೆಲಸ ಮುಗಿಸಿಕೊಂಡು ಬರುವಾಗ ಗುಡುಗು ಸಹಿತ ಸಿಡಿಲು ಅಬ್ಬರಿಸಿತ್ತು. ಮಳೆಗೆ ಹೆದರಿ ಮರದ ಕೆಳಗೆ ನಿಂತಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗ್ತಿದೆ.
ಇಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಓದಿ: ಆಮ್ಲಜನಕ ಸಿಗದೆ ಜೈಪುರದ ಆಸ್ಪತ್ರೆಯಲ್ಲಿ ನಾಲ್ವರು ಸೋಂಕಿತರು ಸಾವು