ETV Bharat / state

'ಪೌರತ್ವ ಕಾಯ್ದೆ ಎಲ್ಲರೂ ಭಾರತ ಮಾತಾ ಕಿ ಜೈ ಎನ್ನುವಂತೆ ಮಾಡಿದೆ'

ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ ಪೌರತ್ವ (ತಿದ್ದುಪಡಿ) ಕಾಯ್ದೆ ಜಾರಿಗೆ ತರಲು ಹೊರಟಿರುವ ಕಾರಣ ಭಾರತ ಮಾತಾ ಕಿ ಜೈ ಎನ್ನದವರೂ ಸಹ ಇಂದು ದೇಶಕ್ಕೆ ಜೈ ಎನ್ನುತ್ತಿದ್ದಾರೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ
ಶಾಸಕ ಬಸನಗೌಡ ಪಾಟೀಲ್ ಯತ್ನಾಳ
author img

By

Published : Jan 12, 2020, 9:45 PM IST

ವಿಜಯಪುರ: ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ ಪೌರತ್ವ (ತಿದ್ದುಪಡಿ) ಕಾಯ್ದೆ ಜಾರಿಗೆ ತರಲು ಹೊರಟಿರುವ ಕಾರಣ, ಭಾರತ ಮಾತಾ ಕಿ ಜೈ ಎನ್ನದವರೂ ಸಹ ಇಂದು ದೇಶಕ್ಕೆ ಜೈ ಎನ್ನುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.

ನಗರದ ದರ್ಬಾರ್ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಪೌರತ್ವ ಕಾಯ್ದೆ ಕುರಿತ ಜನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಎಲ್ಲೆಡೆ ಭಾರತ ಮಾತಾ ಕಿ ಜೈ, ಜನಗಣಮನ ಪ್ರಾರಂಭವಾಗಿದೆ ಎಂದರು.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ

ಯಾರು ಒಪ್ಪಲಿ ಬಿಡಲಿ, ಕಾಯ್ದೆ ಜಾರಿಯಾಗುತ್ತೆ. ಲೋಕಸಭೆ, ರಾಜ್ಯಸಭೆ ಒಪ್ಪಿದ ಮೇಲೆ ನೀವು ಒಪ್ಪಲೇಬೇಕು ಎಂದರು. ಕಾಶ್ಮೀರದಲ್ಲಿ 370ನೇ ಕಾಯ್ದೆ ರದ್ದುಗೊಳ್ಖುತ್ತದೆ ಎಂದು ಯಾರು ಊಹಿಸಿರಲಿಲ್ಲ. ಇದೀಗ ಕಾಶ್ಮೀರ ಶಾಂತವಾಗಿದೆ ಎಂದರು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅಡ್ಡಿಯಾಗಿದ್ದ ತೊಡಕು ಸಹ ನಿವಾರಣೆಯಾಗಿದೆ. ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ದೇಶ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದರು.

ಇನ್ನು ಮಂಗಳೂರು ಗಲಭೆ ವಿಚಾರ ಮಾತನಾಡಿದ ಅವರು, ಕಲ್ಲು ಹೊಡೆಯಲು ಬಂದವರಿಗೆ ಪರಿಹಾರ ನೀಡಬೇಕಾ? ಎಂದು ಪ್ರಶ್ನಿಸಿದರು. ಇದೇ ರೀತಿ ಪರಿಹಾರ ನೀಡಿದರೆ ಅಂಥವರು ಹೆಚ್ಚಾಗುತ್ತಾರೆ ಎಂದು ಶಾಸಕ ಜಮೀರ್ ಅಹ್ಮದ್ ಅವರಿಗೆ ತಿರುಗೇಟು ನೀಡಿದ್ರು.

Intro:ವಿಜಯಪುರ

Body:ವಿಜಯಪುರ: ಪೌರತ್ವ ಕಾಯ್ದೆ ವಿರೋಧಿಸುತ್ತಿರುವ ಜೆಡಿಎಸ್ ವರಿಷ್ಢ ಮಾಜಿ ಪಿಎಂ ದೌವೇಗೌಡ, ಅವರ ಪುತ್ರ ಕುಮಾರಸ್ವಾಮಿ, ಮಮತಾ ಬ್ಯಾನರ್ಜಿ ಸೇರಿ ಹಲವು ವಿರೋಧಿ ಪಕ್ಷ ದವರಿಗೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತನ್ನ ಹರಿತವಾದ ಮಾತುಗಳಿಂದಲೇ ಚುಚ್ಚುವ ಮೂಲಕ ಕಾರ್ಯಕರ್ತರ ಚಪ್ಪಾಳೆ ಗಿಟ್ಡಿಸಿದರು.
ನಗರದ ದರಬಾರ ಕಾಲೇಜ್ ಆವರಣದಲ್ಲಿ ಹಮ್ಮಿಕೊಂಡಿದ್ದ ಪೌರತ್ವ ಕಾಯ್ದೆ ಕುರಿತ ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ ಶಹಾ ಕಾಯ್ದೆ ಜಾರಿಗೆ ತರಲು ಹೊರಟಿರುವ ಕಾರಣ, ಭಾರತ ಮಾತಾ ಕೀ ಜೈ ಅನ್ನದವರು ಸಹ ಇಂದು ದೇಶಕ್ಕೆ ಜೈ ಎನ್ನುತ್ತಿದ್ದಾರೆ. ಈಗ ಎಲ್ಲಡೇ ಭಾರತ ಮಾತಾ ಕೀ ಜೈ, ಜನಗಣಮನ ಪ್ರಾರಂಭವಾಗಿದೆ ಎಂದರು.
ಯಾರೇ ಒಪ್ಪಲಿ ಬೀಡಲಿ ಕಾಯ್ದೆ ಜಾರಿಯಾಗುತ್ತೆ, ಲೋಕಸಭೆ, ರಾಜ್ಯಸಭೆ ಒಪ್ಪಿದ ಮೇಲೆ ನೀವು ಒಪ್ಪಲೇ ಬೇಕು ಎಂದರು. ಕಾಶ್ಮೀರದಲ್ಲಿ 370 ನೇ ಕಾಯ್ದೆ ರದ್ದುಗೊಳ್ಖುತ್ತದೆ ಎಂದು ಯಾರು ಊಹಿಸಿರಲಿಲ್ಲ, ಮೋದಿ, ಶಹಾ ಸೇರಿ ಕಾಯ್ದೆ ರದ್ದುಗೊಳಿಸಿದ್ದಾರೆ. ಈಗ ಕಾಶ್ಮೀರ ಶಾಂತವಾಗಿದೆ. ಇದರ ಜತೆ ಅಯೋಧ್ಯದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅಡ್ಡಿಯಾಗಿದ್ದ ತೊಡಕು ಸಹ ನಿವಾರಣೆಯಾಗಿದೆ. ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ದೇಶ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದರು.
ಇದೇ ವೇಳೆ ಮುಂದಿನ ಮೋದಿ ಸರ್ಕಾರದ ಯೋಜನೆ ಬಗ್ಗೆ ಮಾತನಾಡಿದ ಅವರು, ಹಮ್ ದೋ, ಹಮಾರ್ ದೋ ಆಗಲಿದೆ. ಕೆಲವರು ದೇಶದಲ್ಲಿ ಹಮ್ ದೋ, ಹಮಾರಾ ಪಚ್ಚೀಸ್ ಎನ್ನುವರಿದ್ದಾರೆ. ಅವರಿಗೆ ಬಿಸಿ ಮುಟ್ಟಲಿದೆ ಎಂದರು.
ಮಂಗಳೂರ ಘಟನೆ ಪ್ರಸ್ತಾಪಿಸಿದ ಅವರು, ಕಲ್ಲು ಹೊಡೆಯಲು ಬಂದವರಿಗೆ ಪರಿಹಾರ ನೀಡಬೇಕಾ? ಎಂದು ಪ್ರಶ್ನಿಸಿದ ಅವರು, ಇದೇ ರೀತಿ ಪರಿಹಾರ ನೀಡಿದರೆ ಅಂಥವರು ಹೆಚ್ಚಾಗುತ್ತಾರೆ ಎಂದರು.
ಶಾಸಕ ಜಮೀರ ಅಹಮ್ಮದಖಾನ ಹೇಳಿಕೆಗೆ ತಿರುಗೇಟು ನೀಡಿದ ಯತ್ನಾಳ, ಅವರ ಮುತ್ಯಾ, ಮುತ್ಯಾನ ತಾತಾ ಹೆಸರು ಕಲ್ಲಪ್ಪ, ಮಲ್ಲಪ್ಪ ಎಂದು ಲೇವಡಿ ಮಾಡಿದರು.

Conclusion:ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.