ETV Bharat / state

ಎಟಿಎಂ ಯಂತ್ರ ಇದ್ದಂಗೇ ಇದೆ, ಆದ್ರೂ 16 ಲಕ್ಷ ಮಂಗಮಾಯ: ದರೋಡೆ ಆಗಿದ್ದೇಗೆ? - atm robbery video

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ಎಟಿಎಂ ದರೋಡೆ ನಡೆದಿದ್ದು, ಅಚ್ಚರಿಗೆ ಕಾರಣವಾಗಿದೆ. ಎಟಿಎಂ ಇರುವ ಕೊಠಡಿ ಶಟರ್‌​ ಒಡೆದಿರುವ ಖದೀಮರು ಯಂತ್ರಕ್ಕೆ ಯಾವುದೇ ರೀತಿಯ ಹಾನಿಯಾಗದಂತೆ ಹಣ ಎಗರಿಸಿದ್ದಾರೆ.

ATM robbery in Muddebihal city
ಎಟಿಎಂ ದರೋಡೆ
author img

By

Published : Nov 21, 2021, 7:50 AM IST

ಮುದ್ದೇಬಿಹಾಳ: ಪಟ್ಟಣದ ಹುಡ್ಕೋ ಕಾಲೋನಿಯ ಹೇಮರಡ್ಡಿ ಮಲ್ಲಮ್ಮ ವೃತ್ತದ ಬಳಿಯ ಮದರಿ ಕಾಂಪ್ಲೆಕ್ಸ್‌ನಲ್ಲಿರುವ ಪರಿವರ್ತಿತ ಯೂನಿಯನ್ ಬ್ಯಾಂಕ್‍ ಎಟಿಎಂ ದರೋಡೆ (Union Bank ATM robbery) ಪ್ರಕರಣ ಶನಿವಾರ ಸಂಜೆ ಬೆಳಕಿಗೆ ಬಂದಿದೆ.

ಎಟಿಎಂನಲ್ಲಿ ನ.17ರಂದು 21 ಲಕ್ಷ ರೂ. ನಗದು ಹಾಕಲಾಗಿತ್ತು. ನ.18ರ ಸಂಜೆಯವರೆಗೆ ಗ್ರಾಹಕರು 4-5 ಲಕ್ಷ ನಗದು ಡ್ರಾ ಮಾಡಿಕೊಂಡಿದ್ದಾರೆ. ನ.19ರ ಬೆಳಿಗ್ಗೆ ನೋಡಿದಾಗ ಎಟಿಎಂನಲ್ಲಿ ಇರಬೇಕಿದ್ದ 16.08 ಲಕ್ಷ ನಗದು ಹಣ ನಾಪತ್ತೆಯಾಗಿದೆ. ಈ ಸಂಗತಿಯನ್ನು ಕೂಡಲೇ ಬ್ಯಾಂಕ್ ಶಾಖಾ ವ್ಯವಸ್ಥಾಪಕರು ಸ್ಥಳೀಯ ಠಾಣೆಯ ಪಿಎಸ್​ಐ ಗಮನಕ್ಕೆ ತಂದಿದ್ದಾರೆ. ಸಂಜೆ ಬಸವನ ಬಾಗೇವಾಡಿ ಡಿವೈಎಸ್ಪಿ ಅರುಣಕುಮಾರ ಕೋಳೂರ, ಮುದ್ದೇಬಿಹಾಳ ಪೊಲೀಸ್ ವೃತ್ತದ ಸಿಪಿಐ ಆನಂದ ವಾಘ್ಮೋಡೆ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿದ್ದ ಎಲ್ಲ ಸಿಸಿ ಫೂಟೇಜ್ ಪರಿಶೀಲಿಸಿದ್ದಾರೆ. ಇದ್ರ ಜೊತೆಗೆ, ಬ್ಯಾಂಕ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.

ನ.18-19ರ ಮಧ್ಯರಾತ್ರಿ 2-3 ಮುಸುಕುಧಾರಿ ವ್ಯಕ್ತಿಗಳು ಎಟಿಎಂನೊಳಕ್ಕೆ ಪ್ರವೇಶ ಮಾಡಿರುವುದು ಸಿಸಿ ಫೂಟೇಜ್‍ನಲ್ಲಿ ಕಂಡು ಬಂದಿದೆ ಎನ್ನಲಾಗಿದೆ. ಎಟಿಎಂ ಇದ್ದ ಕೊಠಡಿಯ ಮುಂದಿನ ಶಟರ್​ ಬೀಗವನ್ನು ಜಖಂಗೊಳಿಸಿ ಈ ಕೃತ್ಯ ಎಸಗಲಾಗಿದೆ. ವಿಚಿತ್ರ ಅಂದ್ರೆ, ಎಟಿಎಂಗೆ ಯಾವುದೇ ರೀತಿಯ ಧಕ್ಕೆ ಆಗಿಲ್ಲ. ಲಾಕ್ ಮಾಡಿದಂತೆಯೇ ಇದೆ. ಎಲ್ಲಿಯೂ ಒಡೆದ ಗುರುತುಗಳು ಮೇಲ್ನೋಟಕ್ಕೆ ಕಂಡುಬಂದಿಲ್ಲ. ಆದರೂ ಎಟಿಎಂನೊಳಗಿದ್ದ ಹಣ ಮಾಯವಾಗಿರುವುದು ಅಚ್ಚರಿ ಹುಟ್ಟಿಸುತ್ತಿದೆ.

ಎಟಿಎಂ ಇರುವ ಪ್ರದೇಶದಲ್ಲಿ ಹಗಲು ವೇಳೆ ಸಾಕಷ್ಟು ಜನದಟ್ಟಣೆ ಇರುತ್ತದೆ. ರಾತ್ರಿ ಆಗೊಂದು, ಈಗೊಂದು ವಾಹನಗಳು ಇಲ್ಲಿ ಸಂಚರಿಸುತ್ತವೆ. ಉಳಿದಂತೆ ಸಂಪೂರ್ಣ ನಿರ್ಜನವಾಗಿರುವುದು ಘಟನೆಗೆ ಕಾರಣ ಎಂದು‌‌ ಹೇಳಲಾಗುತ್ತಿದೆ.

ಮುದ್ದೇಬಿಹಾಳ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.