ವಿಜಯಪುರ: ರಸ್ತೆ ಪಕ್ಕದಲ್ಲಿರುವ ಗುಂಡಿಗೆ ಬಿದ್ದು ಕತ್ತೆಯೊಂದು ನರಳಾಡಿ ಪ್ರಾಣ ಬಿಟ್ಟ ದಾರುಣ ಘಟನೆ ವಿಜಯಪುರದಲ್ಲಿ ನಡೆದಿದೆ.
ನಗರದ ರೈಲು ನಿಲ್ದಾಣ ಹಿಂಭಾಗದ ರಸ್ತೆಯ ಪಕ್ಕದಲ್ಲಿ ಒಳಚರಂಡಿ ನಿರ್ಮಾಣಕ್ಕೆಂದು ಮಹಾನಗರ ಪಾಲಿಕೆ ರಸ್ತೆ ಬದಿಯಲ್ಲಿ ಹಲವು ವರ್ಷಗಳ ಹಿಂದೆ ಗುಂಡಿ ನಿರ್ಮಾಣ ಮಾಡಲಾಗಿತ್ತು. ತದನಂತರ ಗುಂಡಿಯನ್ನು ಮುಚ್ಚದೇ ಹಾಗೆ ಬಿಟ್ಟ ಪರಿಣಾಮ ರಸ್ತೆ ಬದಿಯಲ್ಲಿ ಹೋಗುತ್ತಿದ್ದ ಕತ್ತೆಯೊಂದು ಗುಂಡಿಯಲ್ಲಿ ಬಿದ್ದು ಹೊರ ಬರಲಾಗದೆ ನರಳಾಡಿ ನರಳಾಡಿ ಮೃತಪಟ್ಟಿದೆ.
ಸಾರ್ವಜನಿಕರು ಗುಂಡಿಯಲ್ಲಿ ಸಿಲುಕಿದ ಕತ್ತೆಯನ್ನು ಹೊರ ತೆಗೆಲು ಪ್ರಯತ್ನಿಸಿದ್ದಾರೆ. ಆದ್ರೂ ಸಾಧ್ಯವಾಗದ ಕಾರಣ ಸ್ಥಳೀಯರು ಮಹಾನಗರ ಪಾಲಿಕೆಗೆ ಕರೆ ಮಾಡಿ ಕತ್ತೆ ಗುಂಡಿಯಲ್ಲಿ ಬಿದ್ದು ನರಳುತ್ತಿರೋದನ್ನ ತಿಳಿಸಿದ್ದಾರೆ. ಸ್ಥಳಕ್ಕೆ ಮಹಾನಗರ ಪಾಲಿಕೆ ಸಿಬ್ಬಂದಿ ಬರುವ ಒಳಗಾಗಿ ಕತ್ತೆ ಕೊನೆಯುಸಿರೆಳೆದಿದೆ. ಬಳಿಕ ಮಹಾನಗರ ಪಾಲಿಕೆ ಸಿಬ್ಬಂದಿ ಮೃತ ಕತ್ತೆಯ ದೇಹವನ್ನ ಹೊರ ತೆಗೆದು ಪಾಲಿಕೆ ವಾಹನದಲ್ಲಿ ತೆಗೆದುಕೊಂಡು ಹೊಗಿದ್ದಾರೆ. ಮಹಾನಗರಪಾಲಿಕೆ ಈ ಗುಂಡಿಯನ್ನು ಮುಚ್ಚದೆ ಹಾಗೇ ಬಿಟ್ಟ ಪರಿಣಾಮ ಕತ್ತೆ ಗುಂಡಿಯಲ್ಲಿ ಬಿದ್ದು ಮೃತಪಟ್ಟಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.