ETV Bharat / state

ವೃದ್ಧೆ ಕೊಲೆ ಆರೋಪಿ‌ ಬಂಧನ: ಆರು ಲಕ್ಷ ಮೌಲ್ಯದ ಚಿನ್ನಾಭರಣ ವಶ - ಎಸ್ಪಿ ಬಿ.ಎಸ್. ನ್ಯಾಮಗೌಡ ನೇತೃತ್ವದಲ್ಲಿ ತಂಡ ರಚನೆ

ವಿಜಯಪುರದ ಶಾಸ್ತ್ರಿನಗರದಲ್ಲಿ ಒಂಟಿಯಾಗಿ ನೆಲೆಸಿದ್ದ ವೃದ್ಧ ಮಹಿಳೆಯನ್ನು ಕೊಲೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ವೃದ್ಧೆ ಕೊಲೆ ಆರೋಪಿ‌ ಬಂಧನ
author img

By

Published : Nov 5, 2019, 6:52 PM IST

ವಿಜಯಪುರ: ಜಿಲ್ಲೆಯ ಶಾಸ್ತ್ರಿನಗರದಲ್ಲಿ ಒಂಟಿ‌ಯಾಗಿ ಜೀವಿಸುತ್ತಿದ್ದ ವೃದ್ಧ ಮಹಿಳೆಯನ್ನು ಕೊಲೆಗೈದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಾದ ಕೇದಾರಿ (ಜ್ಯೋತಿಬಾ), ಪೋಳ (37) ಎಂಬುವರು ಕೊಲೆ ಮಾಡಿ ಬಂಗಾರದ ಆಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದರು. ‌ಪೊಲೀಸರು ತನಿಖೆ ಕೈಗೊಂಡಾಗ ಮೃತ ರೇಖಾ ಮನೆಯಲ್ಲಿ ಇವರು ಬಾಡಿಗೆದಾರರಾಗಿದ್ದರು ಎಂದು ತಿಳಿದು ಬಂದಿದೆ.

ವೃದ್ಧೆ ಕೊಲೆ ಆರೋಪಿ‌ ಬಂಧನ

ಅಕ್ಟೋಬರ್‌ 12 ರಂದು ರೇಖಾ ದೇಶಮಾನೆ ಎಂಬುವರನ್ನು ಆಕೆಯ ಸೀರೆಯಿಂದ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು. ಆರೋಪಿ ಶೋಧಕ್ಕಾಗಿ ಹೆಚ್ಚುವರಿ ಎಸ್ಪಿ ಬಿ.ಎಸ್. ನ್ಯಾಮಗೌಡ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು. ಬಳಿಕ ನವೆಂಬರ್‌ 4 ರಂದು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪೂರದಲ್ಲಿ ಆರೋಪಿ ಕೇದಾರಿಯನ್ನು‌ ಬಂಧಿಸಲಾಗಿದೆ ಎಂದು ಎಸ್ಪಿ ಪ್ರಕಾಶ ನಿಕ್ಕಂ ಹೇಳಿದ್ದಾರೆ.

ಆರೋಪಿಯಿಂದ 6 ಲಕ್ಷ ಮೌಲ್ಯದ ಬಂಗಾರ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ‌. ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರ ತಂಡವನ್ನು ಶ್ಲಾಘಿಸಿ ಸೂಕ್ತ ಬಹುಮಾನ ನೀಡುವುದಾಗಿ ಎಸ್ಪಿ ಪ್ರಕಾಶ ನಿಕ್ಕಂ‌ ಘೋಷಿಸಿದ್ದಾರೆ.

Intro:ವಿಜಯಪುರ: ನಗರದ ಶಾಸ್ತ್ರಿನಗರ ಒಂಟಿ‌ ವೃದ್ದ ಮಹಿಳೆ ಕೊಲೆ ಮಾಡಿದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಎಸ್ಪಿ ಪ್ರಕಾಶ ನಿಕ್ಕಂ ಹೇಳಿದರು.

Body:ಅಕ್ಕೋಬರ್ 12 ರಂದು ರೇಖಾ ದೇಶಮಾನೆ ಎಂಬ ಮಹಿಳೆಯನ್ನು ಅಪರಿಚಿತರು ಅವಳ ಸೀರೆಯಿಂದ ಕತ್ತಿಗೆಗೆ ಬಿಗಿದು ಕೊಲೆ ಮಾಡಲಾಗಿತು. ಆರೋಪಿ ಶೋಧಕ್ಕಾಗಿ ಹೆಚ್ಚುವರಿ ಎಸ್ಪಿ ಬಿ.ಎಸ್ ನ್ಯಾಮಗೌಡ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ‌ಪೋಸರು ತನಿಖೆ ಕೈಗೊಂಡಾ ಮೃತ ರೇಖಾ ಮನೆಯಲ್ಲಿ ಬಾಡಿಗೆದಾರನಾಗಿದ್ದ ಆರೋಪಿತನಾದ ಕೇದಾರಿ ( ಜ್ಯೋತಿಬಾ) ಪೋಳ( 37) ಎಂಬವನ್ನು ಕೊಲೆ ಮಾಡಿ ಬಂಗಾರದ ಆಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದ ಆತನ‌ ಮೇಲೆ ಸಂಶಯ ಕಾರಣ ಪೋಲಿಸರು ಹುಡುಕಾಟ ನಡೆಸುತ್ತಿದ್ದರು. ನವೆಂಬರ್‌ 4 ರಂದು ಬಾಗಲಕೋಟ ಜಿಲ್ಲೆಯ ಮಹಾಲಿಂಗಪೂರದಲ್ಲಿ ಆರೋಪಿ ಕೇದಾರಿ ಯನ್ನು‌ ಬಂಧಿಸಲಾಗಿದೆ ಎಂದು ಎಸ್ಪಿ ಪ್ರಕಾಶ ನಿಕ್ಕಂ ಹೇಳಿದರು.

Conclusion:ಆರೋಪಿಯಿಂದ 6 ಲಕ್ಷ ಮೌಲ್ಯದ ಬಂಗಾರ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ‌.ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೋಲಿಸ ತಂಡಕ್ಕೆ ಶ್ಲ್ಯಾಘಿಸಿ ಸೂಕ್ತ ಬಹುಮಾನ ಎಸ್ಪಿ ಪ್ರಕಾಶ ನಿಕ್ಕಂ‌ ಘೋಷಿಸಿದ್ದಾರೆ.

ಶಿವಾನಂದ ಮದಿಹಳ್ಳಿ
ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.