ವಿಜಯಪುರ: ನಗರದ ವಿವಿಧಡೆ ಮನೆಗಳ್ಳತನ, ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಯನ್ನು ವಿಜಯಪುರ ವಿಶೇಷ ಪೊಲೀಸ್ ತನಿಖಾ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಆರೋಪಿಗಳಿಂದ 10, 53, 600 ರೂ. ಮೌಲ್ಯದ ಚಿನ್ನಾಭರಣ, ಬೈಕ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರನ್ನು ವಿಜಯಪುರದ ನಿಸಾರಮಡ್ಡಿಯ ಮುತ್ತಪ್ಪ ಹಣಮಂತ ಮೂಲಿಮನಿ ಹಾಗೂ ಐಶ್ವರ್ಯನಗರದ ಮಹಾವೀರ ರಾಮಜಿ ಚವ್ಹಾಣ ಎಂದು ಗುರುತಿಸಲಾಗಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಆರೋಪಿಗಳಿಂದ 8,16 ಲಕ್ಷ ರೂ. ಮೌಲ್ಯದ 204 ಗ್ರಾಂ ಚಿನ್ನಾಭರಣ, 87 ಸಾವಿರ ಮೌಲ್ಯದ 1,460ಗ್ರಾಂ ಬೆಳ್ಳಿ ಹಾಗೂ1.50ಲಕ್ಷ ರೂ ಮೌಲ್ಯದ ಮೂರು ಬೈಕ್ ಗಳು ಸೇರಿ 10,53 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.