ETV Bharat / state

ದೆಹಲಿಯಲ್ಲಿ ಆತ್ಮಹತ್ಯೆಗೆ ಶರಣಾದ ವಿಜಯಪುರದ ಯೋಧ - ಯೋಧ ಆತ್ಮಹತ್ಯೆ

ತಾಳಿಕೋಟೆ ತಾಲೂಕಿನ ಕೊಣ್ಣೂರು ಗ್ರಾಮದ ಯೋಧ ದೆಹಲಿಯ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾನೆ.

Suicide by Vijayapura-based warrior
ವಿಜಯಪುರ ಮೂಲದ ಯೋಧ ದೆಹಲಿಯಲ್ಲಿ ಆತ್ಮಹತ್ಯೆ
author img

By

Published : Mar 7, 2021, 1:14 PM IST

ವಿಜಯಪುರ: ಕರ್ತವ್ಯನಿರತ ಯೋಧಯೊಬ್ಬ ದೆಹಲಿಯ ತನ್ನ ನಿವಾಸದಲ್ಲಿ ನೇಣಿಗೆ ಶರಣಾದ ಘಟನೆ ನಡೆದಿದೆ.

ಜಿಲ್ಲೆಯ ತಾಳಿಕೋಟೆ ತಾಲೂಕಿನ ಕೊಣ್ಣೂರು ಗ್ರಾಮದ ಯೋಧ ಪರಸಪ್ಪ ಬಸಪ್ಪ ಚಿಲಕನಹಳ್ಳಿ (25) ಮೃತ ಯೋಧ. ಮದ್ರಾಸ್ ರೆಜಿಮೆಂಟ್ 27 ನೇ ಬೆಟಾಲಿಯನ್‌ನಲ್ಲಿ ಇವರು ಸೇವೆ ಸಲ್ಲಿಸುತ್ತಿದ್ದರು.

20ನೇ ಇಂಜಿನಿಯರಿಂಗ್ ರೆಜಿಮೆಂಟ್‌ನಲ್ಲಿ ಸಿಪಾಯಿಯಾಗಿ‌ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ, ಕಳೆದೆರಡು ವರ್ಷಗಳ ಹಿಂದೆ ಜಯಶ್ರೀ ಎಂಬುವರನ್ನು ವಿವಾಹವಾಗಿದ್ದರು.‌ ಐದು ತಿಂಗಳ ಹಿಂದೆ ಗ್ರಾಮದಿಂದ ಪತ್ನಿಯನ್ನು ಕರೆದುಕೊಂಡು ದೆಹಲಿಗೆ ಹೋಗಿ ಭಾರತೀಯ ಸೇನೆಗೆ ನೀಡುವ ಮಥುರಾ ಕ್ಯಾಂಪ್‌ನಲ್ಲಿ ವಾಸವಿದ್ದರು.

ನಿನ್ನೆ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಪರಸಪ್ಪ ನೇಣು ಹಾಕಿಕೊಂಡು ಆತ್ಮಹತ್ಯೆ ‌ಮಾಡಿಕೊಂಡಿದ್ದಾರೆ. ‌ಘಟನೆಗೆ ನಿಖರ ಕಾರಣ ತಿಳಿದು‌ ಬಂದಿಲ್ಲ. ನಾಳೆ ಮೃತದೇಹ ಸ್ವಗ್ರಾಮ ಕೊಣ್ಣೂರಿಗೆ ಆಗಮಿಸುವ ನಿರೀಕ್ಷೆ ಇದೆ.

ಇದನ್ನೂ ಓದಿ: ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಕಚೇರಿಯಲ್ಲಿ ಮ್ಯಾನೇಜರ್ ಅನುಮಾನಾಸ್ಪದ ಸಾವು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.