ETV Bharat / state

ಸರ್ಕಾರದ ನಿರ್ದೇಶನದಂತೆ ರಂಜಾನ್ ಆಚರಣೆ: ಅಂಜುಮನ್ ಕಮಿಟಿ

ಸಾಮೂಹಿಕ ನಮಾಜ್ ಮಾಡುವ ವಿಷಯ ಕುರಿತಂತೆ ಸರ್ಕಾರ ನೀಡುವ ನಿರ್ದೇಶನಗಳನ್ನು ಪಾಲಿಸಲಾಗುತ್ತದೆ. ನಮ್ಮ ಜನಸಮೂಹಕ್ಕೂ ಈ ಸಲದ ರಂಜಾನ್ ಸರಳ ರೀತಿಯಲ್ಲಿ ಆಚರಿಸಲು ಸಂದೇಶ ನೀಡುತ್ತಿದ್ದೇವೆ ಎಂದು ಅಂಜುಮನ್ ಇಸ್ಲಾಂ ಕಮಿಟಿ ಮಾಜಿ ಅಧ್ಯಕ್ಷ ರಸೂಲ್ ದೇಸಾಯಿ ಹೇಳಿದರು.

anjuman-committee-statement-on-ramjan-festival
ರಂಜಾನ್ ಆಚರಣೆ
author img

By

Published : May 22, 2020, 12:06 PM IST

ಮುದ್ದೇಬಿಹಾಳ: ನಗರದಲ್ಲಿ ಇಸ್ಲಾಂ ಕಮಿಟಿ ವತಿಯಿಂದ 600 ದಿನಸಿ ಕಿಟ್ ವಿತರಿಸಲಾಯಿತು. ಅಲ್ಲದೆ ಈ ಸಲದ ರಂಜಾನ್ ಹಬ್ಬವನ್ನು ಸರಳವಾಗಿ ಆಚರಿಸಲು ನಿರ್ದೇಶನ ನೀಡಿದ್ದೇವೆ ಎಂದು ಅಂಜುಮನ್ ಇಸ್ಲಾಂ ಕಮಿಟಿ ಮಾಜಿ ಅಧ್ಯಕ್ಷ ರಸೂಲ್ ದೇಸಾಯಿ ತಿಳಿಸಿದರು.

ಪಟ್ಟಣದ ಅಂಜುಮನ್ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಆದೇಶದಂತೆ ನಡೆಯುತ್ತೇವೆ. ಸಾಮೂಹಿಕ ನಮಾಜ್ ಮಾಡುವ ವಿಷಯ ಕುರಿತಂತೆ ಸರ್ಕಾರ ನೀಡುವ ನಿರ್ದೇಶನಗಳನ್ನು ಪಾಲಿಸಲಾಗುತ್ತದೆ. ನಮ್ಮ ಜನಸಮೂಹಕ್ಕೂ ಈ ಸಲದ ರಂಜಾನ್ ಸರಳ ರೀತಿಯಲ್ಲಿ ಆಚರಿಸಲು ಸಂದೇಶ ನೀಡುತ್ತಿದ್ದೇವೆ ಎಂದು ತಿಳಿಸಿದರು.

ಸರ್ಕಾರದ ನಿರ್ದೇಶನದಂತೆ ರಂಜಾನ್ ಆಚರಣೆ

ಡಾ. ಎ.ಎಂ.ಮುಲ್ಲಾ ಮಾತನಾಡಿ, ಪವಿತ್ರ ರಂಜಾನ್ ಅದ್ಧೂರಿಯಾಗಿ ಆಚರಿಸುವುದನ್ನು ಕೈ ಬಿಟ್ಟು ಸರಳವಾಗಿ ಆಚರಿಸಲು ನಿರ್ಧರಿಸಿದ್ದೇವೆ. ಅಲ್ಲಾಹುವಿನ ಇಚ್ಛೆಯಂತೆ ಇದು ನಡೆದಿದೆ. ಸಂಭ್ರಮ, ಆಡಂಬರ ಇಲ್ಲದೇ ಸರಳವಾಗಿ ಆಚರಣೆ ಮಾಡುತ್ತೇವೆ. ನಮಾಜ್​ ಮಾಡಲು ಮಸೀದಿಯೇ ಬೇಕು ಎಂಬ ನಿರ್ಧಾರ ಬೇಡ. ಮನೆಯಲ್ಲಿಯೇ ನಮಾಜ್ ಮಾಡೋಣ ಎಂದು ಕರೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.