ETV Bharat / state

ಜಮೀನು ಸ್ವಾಧೀನ ಮಾಡದಂತೆ ಮುಸ್ಲಿಂ ಬಾಂಧವರ ಮನವಿ.. - ವಿಜಯಪುರದಲ್ಲಿ ಅಂಬುವನ್ ಎ ಇಸ್ಲಾಂ ಕಮಿಟಿ ಬ್ಯಾಕೋಡ್ ಸಂಘಟನೆ ಪ್ರತಿಭಟನೆ

ಕರ್ನಾಟಕ ವಕ್ಫ್​​ ಬೋರ್ಡ್‌ನಿಂದ ಮಂಜೂರಾದ 10 ಎಕರೆ ಜಮೀನನ್ನು ಒತ್ತುವರಿ ಮಾಡದಂತೆ ಅಂಬುವನ್ ಎ ಇಸ್ಲಾಂ ಕಮಿಟಿ ಬ್ಯಾಕೋಡ್ ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು‌.

Ambuvan A Islam Committee Backcode Organization Protest in Vijayapur
ಜಮೀನು ಸ್ವಾಧೀನ ಮಾಡದಂತೆ ಮುಸ್ಲಿಂ ಬಾಂಧವರ ಮನವಿ
author img

By

Published : Feb 18, 2020, 7:10 PM IST

ವಿಜಯಪುರ: ಕರ್ನಾಟಕ ವಕ್ಫ್​​ ಬೋರ್ಡ್‌ನಿಂದ ಮಂಜೂರಾದ 10 ಎಕರೆ ಜಮೀನನ್ನು ಒತ್ತುವರಿ ಮಾಡದಂತೆ ಅಂಬುವನ್ ಎ ಇಸ್ಲಾಂ ಕಮಿಟಿ ಬ್ಯಾಕೋಡ್ ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು‌.

ಬಸವನ ಬಾಗೇವಾಡಿ ತಾಲೂಕಿನ ಬ್ಯಾಕೋಡ್ ಗ್ರಾಮದಲ್ಲಿ 10 ಎಕರೆ 3 ಗುಂಟೆ ಜಾಗದಲ್ಲಿ 4 ಎಕರೆ ಜಾಗವನ್ನು ಮುಸ್ಲಿಂ ಧಾರ್ಮಿಕ ಕಾರ್ಯಗಳಿಗೆ ಬಳಸಿಕೊಳ್ಳುವ ಉಪ ವಿಭಾಗಾಧಿಕಾರಿ ಅನುಮತಿ‌ ನೀಡಿದ್ದಾರೆ. ಉಳಿದ ಒಂದು ಎಕರೆ ಹೆಚ್ಚು ಜಮೀನಿನಲ್ಲಿ ಇತರೆ ಜನಾಂಗಕ್ಕೆ ಸ್ಮಶಾನ ನಿರ್ಮಾಣಕ್ಕೆ ಯಾವುದೇ ಮುನ್ಸೂಚನೆ ನೀಡದೆ ಅಧಿಕಾರಿಗಳು ಭೂಮಿ ನೀಡಿದ್ದಾರೆ‌‌.

ಜಮೀನು ಸ್ವಾಧೀನ ಮಾಡದಂತೆ ಮುಸ್ಲಿಂ ಬಾಂಧವರ ಮನವಿ

ಉಳಿದ ನಾಲ್ಕು ಎಕರೆ ಜಾಗದಲ್ಲಿ ಈಗಾಗಲೇ ಗ್ರಾಮಸ್ಥರು ಮನೆ ನಿರ್ಮಿಸಿಕೊಂಡಿದ್ದಾರೆ. ಮನೆ ನಿರ್ಮಾಣದ ಬಗ್ಗೆ ಮುಸ್ಲಿಂ ಸಮುದಾಯದ ಯಾವುದೇ ತಕರಾರಿಲ್ಲ. ಆದರೆ, ಧಾರ್ಮಿಕ ಕಾರ್ಯಕ್ಕೆ ಮೀಸಲಾದ ಜಮೀನಲ್ಲಿ ಅಧಿಕಾರಿಗಳು ಸ್ಮಶಾನಕ್ಕೆ ಜಾಗ ನೀಡಿರುವುದು ಸರಿಯಲ್ಲ ಎಂದು ಅಂಜುಮನ್ ಎ ಇಸ್ಲಾಂ ಕಮಿಟಿ ಸದಸ್ಯರು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಅಧಿಕಾರಿಗಳು ಉಳಿದ ಒಂದು ಎಕರೆ ಜಾಗವನ್ನ ಯಾವುದೇ ಒತ್ತುವರಿ ಮಾಡದೇ ಮುಸ್ಲಿಂ ಸಮುದಾಯದವರಿಗೆ ನೀಡಲು ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.