ವಿಜಯಪುರ: ವಿಜಯಪುರ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ತಾಂತ್ರಿಕ ಸಮಸ್ಯೆಯಿಂದ 108 ಆಂಬ್ಯುಲೆನ್ಸ್ ದೂರವಾಣಿ ಕರೆಗಳು ಸಂಪರ್ಕಕ್ಕೆ ಬರದೇ ಇರುವುದರಿಂದ ಸಮಸ್ಯೆ ಸೃಷ್ಟಿಯಾಗಿದೆ. ಜಿಲ್ಲೆಯಲ್ಲಿ ಸಾರ್ವಜನಿಕರ ಸೇವೆಗಾಗಿ ಪರ್ಯಾಯ ವ್ಯವಸ್ಥೆ ಮಾಡಿದ್ದು, 108 ಅಂಬ್ಯುಲೆನ್ಸ್ ಸೇವೆಗಾಗಿ ಸಾರ್ವಜನಿಕರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಶ್ ಚವ್ಹಾಣ್ ತಿಳಿಸಿದ್ದಾರೆ.
108 ಆಂಬ್ಯುಲೆನ್ಸ್ ಜಿಲ್ಲಾ ವ್ಯವಸ್ಥಾಪಕರ ದೂರವಾಣಿ ಸಂಖ್ಯೆ- 9740376964ಗೆ ಕರೆ ಮಾಡಿ ತುರ್ತು ಆರೋಗ್ಯ ಸೇವೆಯನ್ನು ಪಡೆಯಬೇಕು. ಒಂದು ವೇಳೆ ಇವರ ದೂರವಾಣಿ ಸಂಪರ್ಕಕ್ಕೆ ಬರದೇ ಇದ್ದ ಸಮಯದಲ್ಲಿ ಆಯಾ ತಾಲೂಕು ಆಸ್ಪತ್ರೆಗಳ ವೈದ್ಯಾಧಿಕಾರಿಗಳ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಬೇಕು ಎಂದು ಡಿಹೆಚ್‌ಒ ತಿಳಿಸಿದ್ದಾರೆ.
- ಇಂಡಿ ವ್ಯಾಪ್ತಿಯ ಸಾರ್ವಜನಿಕ ಆಸ್ಪತ್ರೆ ದೂರವಾಣಿ ಸಂಖ್ಯೆ: 99725669345.
- ಮುದ್ದೆಬೀಹಾಳ ವ್ಯಾಪ್ತಿಯ ಸಾರ್ವಜನಿಕ ಆಸ್ಪತ್ರೆ ದೂರವಾಣಿ ಸಂಖ್ಯೆ: 9380747482.
- ಸಿಂದಗಿ ವ್ಯಾಪ್ತಿಯ ಸಾರ್ವಜನಿಕ ಆಸ್ಪತ್ರೆ ದೂರವಾಣಿ ಸಂಖ್ಯೆ: 7259995853.
- ಬಸವನಬಾಗೇವಾಡಿ ವ್ಯಾಪ್ತಿಯ ಸಾರ್ವಜನಿಕ ಆಸ್ಪತ್ರೆ ದೂರವಾಣಿ ಸಂಖ್ಯೆ: 9448920612ಗೆ ಸಂಪರ್ಕಿಸಬೇಕು ಎಂದು ಡಿಹೆಚ್‌ಒ ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯಾದ್ಯಂತ 108 ಆಂಬ್ಯುಲೆನ್ಸ್ ಸಹಾಯವಾಣಿಯಲ್ಲಿ ತಾಂತ್ರಿಕ ದೋಷ.. ರೋಗಿಗಳ ಪರದಾಟ!