ವಿಜಯಪುರ : ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾಲಯ ಅಕ್ಕಮಹಾದೇವಿ ಮಹಿಳಾ ವಿದ್ಯಾಲಯವನ್ನು ಸಾಮಾನ್ಯ ವಿಶ್ವವಿದ್ಯಾಲಯವಾಗಿ ಪರಿವರ್ತನೆಗೆ ಮಾಡಲು ಮುಂದಾಗಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.
ರಾಜ್ಯದಲ್ಲಿರುವ ಎಲ್ಲ ವಿಶ್ವವಿದ್ಯಾಲಯಗಳಂತೆ ಮಹಿಳಾ ವಿವಿಯಲ್ಲಿಯೂ ಕೋ ಎಜುಕೇಶನ್ ಪದ್ದತಿ ತರಲು ಚಿಂತನೆ ನಡೆಸಿದೆ. ಇದು ವಿದ್ಯಾರ್ಥಿನಿಯರ ಆಕ್ರೋಶಕ್ಕೆ ಕಾರಣವಾಗಿದೆ.
ಅಧಿವೇಶನದಲ್ಲಿ ಇಂಡಿ ಶಾಸಕ ಬಸವಂತರಾಯಗೌಡ ಪಾಟೀಲ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ವಿಶ್ವನಾಥ ಈ ವಿಷಯವನ್ನು ಲಿಖಿತವಾಗಿ ಉತ್ತರ ನೀಡಿದ ಮೇಲೆ ಮಹಿಳಾ ವಿವಿ ವಿದ್ಯಾರ್ಥಿನಿಯರಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
ಮಹಿಳಾ ವಿವಿ ವ್ಯಾಪ್ತಿಯಲ್ಲಿ ಒಟ್ಟು ಸ್ನಾತಕೋತ್ತರ, ಸ್ನಾತಕ ಪದವಿ ಪಡೆಯುತ್ತಿರುವ ಸುಮಾರು 43 ಸಾವಿರ ವಿದ್ಯಾರ್ಥಿನಿಯರು ಅಭ್ಯಸಿಸುತ್ತಿದ್ದಾರೆ. ಸದ್ಯ ಸರ್ಕಾರ ಮಹಿಳಾ ವಿವಿಯನ್ನು ಸಾಮಾನ್ಯ ವಿವಿಯಾಗಿ ಮಾಡಲು ನಿರ್ಧರಿಸುತ್ತಿರುವುದು ವಿವಿ ಕುಲಪತಿಗಳು ಸಹ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಹಿಳೆಯರಿಗಾಗಿ ಉನ್ನತ ಶಿಕ್ಷಣ ಪಡೆಯಲು ಪ್ರತ್ಯೇಕ ವಿಶ್ವವಿದ್ಯಾಲಯ ಇರುವ ಕಾರಣ ಪೋಷಕರು ಧೈರ್ಯವಾಗಿ ನಮಗೆ ಸ್ವಾತಂತ್ರ್ಯವಾಗಿ ಕಲಿಯಲು ಅವಕಾಶ ನೀಡಿದ್ದಾರೆ. ಹೆಚ್ಚಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರು ಇಲ್ಲಿ ಕಲಿಯಲು ಬರುತ್ತಾರೆ. ಮತ್ತೆ ಕೋ ಎಜುಕೇಷನ್ಗೆ ಅವಕಾಶ ನೀಡಿದರೆ ಬಹುತೇಕ ವಿದ್ಯಾರ್ಥಿನಿಯರು ಶಿಕ್ಷಣ ಮೊಟಕುಗೊಳಿಸಬಹುದು ಎಂದು ವಿದ್ಯಾರ್ಥಿನಿಯರು ಹೇಳುತ್ತಾರೆ.
ಇದನ್ನೂ ಓದಿ: ಸರ್ಕಾರದ ಅಧೀನ ಸಂಸ್ಥೆಗಳಲ್ಲಿ ಯಾವುದೇ ಒಂದು ಧರ್ಮದ ವಿಚಾರ ಅನುಷ್ಠಾನ ಸಾಧ್ಯವಿಲ್ಲ.. ಸಿಎಫ್‌ಐ