ETV Bharat / state

120 ಕೆಜಿ ಚೀಲ ಹೊತ್ತು ಎರಡೂವರೆ ಕಿ.ಮೀ ಸಾಗಿದ ಭಲೇ ಯುವಕ

ಮಡ್ಡಿ ಬಸವೇಶ್ವರ ಜಾತ್ರೆ ನಿಮಿತ್ತ ಮುದ್ದೇಬಿಹಾಳ ತಾಲೂಕಿನ ರೂಢಗಿಯಲ್ಲಿ ಭಾರವಾದ ಚೀಲ ಎತ್ತುವ ಸ್ಪರ್ಧೆ ಏರ್ಪಡಿಸಲಾಗಿತ್ತು.

A young man carrying a 120 kg bag  in half kilometers
120 ಕೆಜಿ ಚೀಲ ಹೊತ್ತು ಎರಡೂವರೆ ಕಿ.ಮೀ ಸಾಗಿದ ಯುವಕ
author img

By

Published : Sep 1, 2021, 9:36 AM IST

ಮುದ್ದೇಬಿಹಾಳ: ಶ್ರಾವಣ ಮಾಸದ ನಿಮಿತ್ತ ಮಡ್ಡಿ ಬಸವೇಶ್ವರ ಜಾತ್ರೆ ಅಂಗವಾಗಿ ತಾಲೂಕಿನ ರೂಢಗಿಯಲ್ಲಿ ಏರ್ಪಡಿಸಿದ್ದ ಭಾರವಾದ ಚೀಲ ಎತ್ತುವ ಸ್ಪರ್ಧೆಯಲ್ಲಿ ಯುವಕರು ತಮ್ಮ ಶಕ್ತಿ ಪ್ರದರ್ಶನ ತೋರಿದರು.

120 ಕೆ.ಜಿ ಚೀಲವನ್ನು 2.50 ಕಿ.ಮೀ ದೂರ ಹೊತ್ತೊಯ್ದ ಲೋಕಾಪೂರದ ಜೈಹನುಮಾನ ಜಾಲಿಕಟ್ಟಿ ತಂಡದ ಹಣಮಂತ ಕಮಟೇರ ಪ್ರಥಮ ಸ್ಥಾನ ಪಡೆದರೆ, 2 ಕಿ.ಮೀ ದೂರ ಸಾಗಿ ಡೊಂಕಮಡು ಗ್ರಾಮದ ಯಲ್ಲಾಲಿಂಗ ಬಂಟನೂರ ದ್ವಿತೀಯ ಸ್ಥಾನ ಪಡೆದರು. ಬಾದಾಮಿ ತಾಲೂಕಿನ ಬೂದನಗೂಡ ಗ್ರಾಮದ ವಿಠ್ಠಳ ಖಂಡೋಜಿ ತೃತೀಯ ಸ್ಥಾನ ಪಡೆದುಕೊಂಡರು.

ಭಾರವಾದ ಚೀಲ ಎತ್ತುವ ಸ್ಪರ್ಧೆ

ಬಸವೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ ಶ್ರೀಶೈಲ ರೂಢಗಿ ನೇತೃತ್ವದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಬಾಬುಧಣ ಸೂಳಿಭಾವಿ, ನೀಲಕಂಠರಾವ ನಾಡಗೌಡ, ಸುನೀಲಗೌಡ ಪಾಟೀಲ, ಗ್ರಾಪಂ ಉಪಾಧ್ಯಕ್ಷ ಬಸವರಾಜ ಬೆಲ್ಲದ, ಸದಸ್ಯ ಸದಾಶಿವ ಸೂಳಿಭಾವಿ, ಮಾಜಿ ಅಧ್ಯಕ್ಷ ಕುಮಾರ ಸೂಳಿಭಾವಿ ಮೊದಲಾದವರು ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.