ETV Bharat / state

ದನದ ಕೊಟ್ಟಿಗೆಯಂತಾದ ಸರ್ಕಾರಿ ಶಾಲೆ... ಅನುದಾನದ ಹಣ ಮಂಗಮಾಯ!

author img

By

Published : Apr 26, 2019, 8:55 PM IST

ತಾವು ಕಟ್ಟಿಸಿದ ಶಾಲೆಯ ಕೊಠಡಿಗಳಿಗೆ ಸರ್ಕಾರಿ ಅನುದಾನ ನೀಡಿಲ್ಲವೆಂದು ವ್ಯಕ್ತಿಯೊಬ್ಬರು ವಿಜಯಪುರ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯಲ್ಲಿ ದನದ ಮೇವು ಸಂಗ್ರಹಿಸಿದ್ದಾರೆ.

ವಿಜಯಪುರ

ವಿಜಯಪುರ: ಎಷ್ಟೋ ಸರ್ಕಾರಿ ಶಾಲೆಗಳಿಗೆ ಸರಿಯಾದ ಅನುದಾನ ದೊರೆಯದೆ ಅವನತಿಯ ಹಾದಿ ಹಿಡಿದಿವೆ. ಈ ಮಧ್ಯೆ ಸರ್ಕಾರ ನೀಡಿದ ಅನುದಾನವನ್ನು ಸರಿಯಾಗಿ ಬಳಸಿಕೊಳ್ಳದೆ ಇಲ್ಲಿನ ಶಾಲೆಯೊಂದು ದನದ ಕೊಟ್ಟಿಗೆಯಾಗಿ ಪರಿವರ್ತನೆ ಹೊಂದಿದೆ.

ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ ಹೀನಾಯ ಸ್ಥಿತಿಗೆ ತಲುಪಿದೆ. 2011ರಲ್ಲಿ ಶಾಲೆಯ 4 ಕೋಣೆಗಳ ನಿರ್ಮಾಣಕ್ಕೆ ಸರ್ಕಾರ 4 ಲಕ್ಷದ 60 ಸಾವಿರ ರೂ. ಬಿಡುಗಡೆ ಮಾಡಲಾಗಿತ್ತು. ಆದರೆ ಆ ಮೊದಲೇ ಕೊಠಡಿಗಳನ್ನು ನಿರ್ಮಿಸಿ, ಅನುದಾನಕ್ಕಾಗಿ ಕಾಯುತ್ತಿದ್ದ ಮಲ್ಲನಗೌಡ ಬಿರಾದಾರ ಎಂಬುವರಿಗೆ ಈ ಹಣ ಸಂಪೂರ್ಣವಾಗಿ ಕೈ ಸೇರಿಲ್ಲ ಎನ್ನಲಾಗಿದೆ. ಇದರಿಂದ ಬೇಸತ್ತ ಬಿರಾದಾರ ಇನ್ನೂ ಕೊಠಡಿಗಳನ್ನು ಶಾಲಾ ಆಡಳಿತಕ್ಕೆ ಒಪ್ಪಿಸಿಲ್ಲ.

ವಿಜಯಪುರ

ಅಲ್ಲದೆ, 8 ವರ್ಷ ಕಳೆದರೂ ಶಾಲೆಯ ಆಡಳಿತ ಮಂಡಳಿ ಆ ಕೊಠಡಿಗಳನ್ನು ತನ್ನ ಸ್ವಾಧೀನಕ್ಕೆ ಪಡೆದುಕೊಳ್ಳುವ ಗೋಜಿಗೂ ಹೋಗಿಲ್ಲ. ಹೀಗಾಗಿ ಮಲ್ಲನಗೌಡ ಬಿರಾದಾರ ಅವರು ಶಾಲೆಯಲ್ಲಿ ದನದ ಮೇವು, ಹೊಟ್ಟು ಇಟ್ಟುಕೊಂಡಿದ್ದಾರೆ. ವಿಪರ್ಯಾಸವೆಂದರೆ, ಈ ಬಗ್ಗೆ ಯಾವ ಆಧಿಕಾರಿಯೂ ಚಕಾರವೆತ್ತಿಲ್ಲ. ನಾನು ಖರ್ಚು ಮಾಡಿದ ದುಡ್ಡು ಸಿಕ್ರೆ ಸಾಕು. ಈಗಲೇ ಶಾಲೆಯನ್ನು ಹೆಡ್​ಮಾಸ್ಟರ್ ಅವರಿಗೆ ಕೊಟ್ಟುಬಿಡ್ತೀನಿ ಎಂದು ಮಲ್ಲನಗೌಡ ಬಿರಾದಾರ ಹೇಳಿದ್ದಾರೆ.

ಇನ್ನು ಶಾಲೆ ದುಸ್ಥಿತಿ ನೋಡಿದರೆ, ಗೋಡೆಗಳು ಅಲ್ಲಲ್ಲಿ ಬಿರುಕು ಬಿಟ್ಟಿವೆ. ಕೊಠಡಿಗಳ ಕೊರತೆ ಎದುರಾಗಿದೆ. ಇಷ್ಟೆಲ್ಲಾ ದುರ್ಗತಿ ಬಂದೊದಗಿದ್ದರೂ ಬಿಇಓ ಆಗಲಿ, ಎಸ್​ಡಿಎಂಸಿ ಸದಸ್ಯರಾಗಲೀ ಈ ಸಮಸ್ಯೆ ಬಗೆಹರಿಸುವ ಗೋಜಿಗೇ ಹೋಗಿಲ್ಲ ಎನ್ನಲಾಗಿದೆ. ಶಾಲೆಗೆ ನೀಡಲಾದ ಅನುದಾನವನ್ನು ಹೆಡ್​ ಮಾಸ್ಟರ್​​ ಕೊಳ್ಳೆ ಹೊಡೆದಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿದೆ.

Intro:ಸ್ಲಗ್: ಪರಿಹಾರ ಸಿಗದಿದ್ದಕ್ಕೆ ದನದಕೊಟ್ಟಿಯಾಯ್ತು ಸರ್ಕಾರಿ ಶಾಲೆ....

Anchor: ಸರ್ಕಾರ ಶಾಲೆಗಳ ಅಭಿವೃದ್ಧಿಗಾಗಿ ಸಾಕಷ್ಟು ಹಣವನ್ನು ಬಿಡುಗಡೆ ಮಾಡುತ್ತೆ..ಆದ್ರೆ ಅವುಗಳ ಸರಿಯಾಗಿ ಬಳಕೆಯಾಗದೆ ಶಾಲೆಗಳು ಮೂರಾಬಟ್ಟಿಯಾಗಿ ಹೋಗುತ್ತಿವೆ..Body:ಹೀಗೆ ವಿಜಯಪೂರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯೊಂದು ಬಂದ ಹಣವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳದೆ ದನದಕೊಟ್ಟಿಯಾಗಿ ನಿರ್ಮಾಣಗೊಂಡಿದೆ...ಹೌದು 2011ರಲ್ಲಿ 4 ಕೋಣೆ ನಿರ್ಮಾಣಕ್ಕೆ ಶಾಲೆಗೆ 4 ಲಕ್ಷ 60 ಸಾವಿರ ಹಣ ಬಿಡುಗಡೆಯಾಗಿತ್ತು. ಆದ್ರೆ ಕೊಠಡಿಗಳನ್ನು ನಿರ್ಮಿಸಿದ ಮಲ್ಲನಗೌಡ ಬಿರಾದಾರ ಎಂಬುವರಿಗೆ ಇನ್ನು ಪರಿಪೂರ್ಣವಾಗಿ ಹಣ ಸಿಗಲಿಲ್ಲ. ಇದರಿಂದ ಬೇಸತ್ತ ಮಲ್ಲನಗೌಡ ಬಿರಾದಾರ ಇನ್ನುವರೆಗೂ ಶಾಲಾ ಆಡಳಿತಕ್ಕೆ ಒಪ್ಪಿಸಿಲ್ಲ. ಇನ್ನು 8 ವರ್ಷ ಕಳಿಲಿಕ್ಕೂ ಬಂದ್ರೂ ಕೂಡ ಶಾಲಾ ಆಡಳಿತ ಮಂಡಳಿ ಆ ಕೊಠಡಿಗಳನ್ನು ತನ್ನ ಸ್ವಾಧಿನಕ್ಕೆ ಪಡೆದುಕೋಳ್ಳುವ ಗೋಜಿಗೂ ಹೋಗಿಲ್ಲ. ಹೀಗಾಗಿ ಶಾಲೆಯಲ್ಲಿ ಈಗ ಮಲ್ಲನಗೌಡ ಬಿರಾದಾರ ದನದ ಮೇವು, ಹೊಟ್ಟು ಇಟ್ಟುಕೊಂಡಿದ್ದಾರೆ..ಈ ಬಗ್ಗೆ ಇನ್ನುವರೆಗೂ ಯಾವ ಆಧಿಕಾರಿ ಕೂಡ ಚಕಾರವೆತ್ತಿಲ್ಲ..ಇನ್ನೂ ಶಾಲೆ ದುಸ್ಥತಿ ನೋಡಿದರೆ ಹೇಳತೀರದು..ಶಾಲೆಯ ಕೆಲಗೋಡೆಗಳು ಅಲ್ಲಲ್ಲಿ ಬಿರುಕುಗೊಂಡಿವೆ..ಜೊತೆಗೆ ವಿದ್ಯಾರ್ಥಿಗಳಿಗೆ ಕೊಠಡಿಗಳ ಕೊರತೆ ಇದ್ದು, ಈ ಕಟ್ಟಿಸಲಾದ ಕೊಟ್ಟಡಿಯಲ್ಲಿ ತರಗತಿಗಳನ್ನು ನಡೆಸಬೇಕಾದ ಪರಿಸ್ಥಿತಿ ಉಂಟಾಗಿದೆ.ಆದ್ರೂ ಇಲ್ಲಿ ಬಿಓ ಆಗಲಿ, ಎಸ್ ಡಿಎಂ ಸಿ ಮೆಂಬಸ್೯ಗಳಾಗಲಿ ಈ ಸಮಸ್ಯೆ ಬಗೆಹರಿಸಲಿಲ್ಲ. ಇನ್ನು ಈ ಶಾಲೆಗೆ ಬಂದಂತಹ ಅನುದಾನವನ್ನು ಹೆಡ್ಮಾಸ್ಟರಗಳೆ ಕೊಳ್ಳೆ ಹೊಡೆದಿದ್ದಾರೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ. ಹೀಗಾಗಿ ಕೂಡಲೇ ಇದಕ್ಕೆ ಸಂಬಂಧಪಟ್ಟ ಮೇಲಾಧಿಕಾರಿಗಳು ಈ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ. ಜೊತೆಗೆ ನಾನು ಖರ್ಚು ಮಾಡಿದ ದುಡ್ಡು ಸಿಕ್ರೆ ಸಾಕು ...ನಾನು ಈಗಲೇ ಶಾಲೆಯನ್ನು ಹೆಡ್ ಮಾಸ್ಟರ್ ಅವರಿಗೆ ಹ್ಯಾಂಡವರ್ ಮಾಡ್ತಿನಿ ಅಂತ ಮಲ್ಲನಗೌಡ ಬಿರಾದಾರ ಕೂಡ ತಿಳಿಸಿದ್ದಾರೆ..Conclusion:ಆದ್ರೆ ಈ ಸಮಸ್ಯೆಯನ್ನು ಬಗೆಹರಿಸಲು ಮೇಲಾಧಿಕಾರಿಗಳು ಎಷ್ಟರ ಮಟ್ಟಿಗೆ ಆಸಕ್ತಿ ತೋರುತ್ತಾರೆ ಎಂಬುದು ಕಾದು ನೋಡಬೇಕಾಗಿದೆ...

ಬೈಟ್: ಮಲ್ಲನಗೌಡ್ ಬಿರಾದಾರ, ಕೊಟಡಿಗಳನ್ನು ನಿರ್ಮಿಸಿದವರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.