ETV Bharat / state

ವಿಜಯಪುರ; ಎರಡು ಬಸ್‌ಗಳ ಮಧ್ಯೆ ಮುಖಾಮುಖಿ ಡಿಕ್ಕಿ, ಇಬ್ಬರು ಸಾವು - Bus Accident

Terrible road accident in Vijayapur: ವಿಜಯಪುರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ.

A terrible road accident in Vijayapur
A terrible road accident in Vijayapur
author img

By ETV Bharat Karnataka Team

Published : Jan 6, 2024, 4:49 PM IST

Updated : Jan 6, 2024, 7:53 PM IST

ಅಪಘಾತ ಸಂಭವಿಸಿದ ಸ್ಥಳ

ವಿಜಯಪುರ: ಎರಡು ಬಸ್‌ಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾದ ಘಟನೆ ವಿಜಯಪುರ ತಾಲೂಕಿನ ಕವಲಗಿ ಗ್ರಾಮದ ಬಳಿ ನಡೆದಿದೆ. ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದು, ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾಜೀದಾ ಬೇಗಂ ಮಕಾನದಾರ್ (36) ಮತ್ತು ರೋಹಿಣಿ ಪಂಚಾಳ (31) ಮೃತರು. ಸಾಜೀದಾ ಮೂಲತಃ ಬಸನವಬಾಗೇಬಾಡಿ ತಾಲೂಕಿನ ಡೋಣೂರ ಗ್ರಾಮದವರಾದರೆ, ಮೃತ ರೋಹಿಣಿ ಕಲಬುರಗಿ ಪಟ್ಟಣದ ನಿವಾಸಿ ಎಂದು ತಿಳಿದುಬಂದಿದೆ.

ಸಿಂದಗಿ ಮಾರ್ಗವಾಗಿ ವಿಜಯಪುರಕ್ಕೆ ಬರುತ್ತಿದ್ದ ಬಸ್‌ ಹಾಗೂ ವಿಜಯಪುರದಿಂದ ಸಿಂದಗಿಗೆ ಹೋಗುತ್ತಿದ್ದ ಬಸ್ ನಡುವೆ ಈ ಡಿಕ್ಕಿ ಸಂಭವಿಸಿದೆ. ಅಫಘಾತದಿಂದ ಸ್ಥಳದಲ್ಲಿ ಸಂಪೂರ್ಣ ಸಂಚಾರ ಅಸ್ತವ್ಯಸ್ಥವಾಗಿದೆ. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಬಂದ ಎಎಸ್ಪಿ ಶಂಕರ ಮಾರಿಹಾಳ, ಸಿಪಿಐ ರಾಯಗೊಂಡ ಜನಾರ ಹಾಗೂ ಸಿಬ್ಬಂದಿ ಸ್ಥಳೀಯರ ಸಹಾಯದ ಮೂಲಕ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಾರೆ.

ಅಪಘಾತ ಸಂಭವಿಸಿದ ಸ್ಥಳ
ಅಪಘಾತ ಸಂಭವಿಸಿದ ಸ್ಥಳ

ಅಪಘಾತದ ಕಾರಣ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಸಂಪೂರ್ಣ ಸಂಚಾರ ಬಂದ್ ಆಗಿದ್ದು, ಎರಡು ಬದಿಗೆ ಎರಡು ಮೂರು ಕಿಲೋಮೀಟರ್ ವರೆಗೂ ವಾಹನಗಳು ಸಾಲಗಟ್ಟಿ ನಿಂತಿವೆ. ಸುಗಮ ಸಂಚಾರಕ್ಕೆ ಪೊಲೀಸರು ಹರಸಾಹಸಪಡುತ್ತಿದ್ದಾರೆ. ಸ್ಥಳಕ್ಕೆ ಕ್ರೇನ್ ಹಾಗೂ ಜೆಸಿಬಿ ಆಗಮಿಸಿದ್ದು ಅಪಘಾತಕ್ಕೊಳಗಾದ ಬಸ್​ಗಳನ್ನು ತೆರವು ಮಾಡಲಾಗುತ್ತಿದೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಕಾರು ಅಪಘಾತ: ವೈಎಸ್​ಆರ್​ಸಿಪಿ ಎಂಎಲ್​ಸಿ ಪರ್ವತ ರೆಡ್ಡಿಗೆ ಗಂಭೀರ ಗಾಯ, ಪಿಎ ಸಾವು

Last Updated : Jan 6, 2024, 7:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.