ETV Bharat / state

ವಿಜಯಪುರ ಜಿಲ್ಲೆಯ ಜಲಸಂರಕ್ಷಣ ಕ್ರಮಗಳ ಕುರಿತು ಕೇಂದ್ರ ತಂಡದಿಂದ ವಸ್ತುಸ್ಥಿತಿ ಅಧ್ಯಯನ - undefined

ಕೃಷಿ, ತೋಟಗಾರಿಕೆ, ಜಲಾನಯನ ಇಲಾಖೆ ಸೇರಿದಂತೆ ಜಿಲ್ಲೆಯ ಮತ್ತು ಇಂಡಿ ತಾಲೂಕಿನ ಬರ ಪರಿಸ್ಥಿತಿ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ವಿಜಯಪುರದಲ್ಲಿ ಸಭೆ ನಡೆಯಿತು.

ವಿಜಯಪುರದಲ್ಲಿ ಕೇಂದ್ರ ನೊಡಲ್ ಅಧಿಕಾರಿಗಳೊಂದಿಗೆ ಸಭೆ ನಡೆಯಿತು.
author img

By

Published : Jul 18, 2019, 10:38 AM IST

ವಿಜಯಪುರ: ಜಿಲ್ಲೆಯಲ್ಲಿನ ನೀರಿನ ಕೊರತೆ ಹಾಗೂ ಜಲಸಂರಕ್ಷಣಾ ಕ್ರಮಗಳ ಕುರಿತು ವಸ್ತುಸ್ಥಿತಿ ಅಧ್ಯಯನ ನಡೆಸಲಾಗುತ್ತಿದೆ ಎಂದು ಭಾರತ ಸರ್ಕಾರದ ವಾಣಿಜ್ಯ ಇಲಾಖೆಯ ಆರ್ಥಿಕ ಸಲಹೆಗಾರರು ಹಾಗೂ ಜಲಶಕ್ತಿ ಅಭಿಯಾನದ ಕೇಂದ್ರದ ನೋಡಲ್ ಅಧಿಕಾರಿ ಅಜಯ ಶ್ರೀವಾತ್ಸವ ಹೇಳಿದರು.

ವಿಜಯಪುರದಲ್ಲಿ ಕೇಂದ್ರ ನೊಡಲ್ ಅಧಿಕಾರಿಗಳೊಂದಿಗೆ ಸಭೆ ನಡೆಯಿತು.

ನಗರದ ನೂತನ ಪ್ರವಾಸಿ ಮಂದಿರದಲ್ಲಿ ಕೃಷಿ, ತೋಟಗಾರಿಕೆ, ಜಲಾನಯನ ಇಲಾಖೆ ಸೇರಿದಂತೆ ಜಿಲ್ಲೆಯ ಮತ್ತು ಇಂಡಿ ತಾಲೂಕಿನ ಬರ ಪರಿಸ್ಥಿತಿ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿ ತೀವ್ರ ಬರವಿದ್ದು, ಈಗಾಗಲೇ ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ ಎಂದರು.

ಬರ ಪರಿಸ್ಥಿತಿ ಎದುರಿಸುತ್ತಿರುವ ಜಿಲ್ಲೆಗಳಲ್ಲಿ ಕೇಂದ್ರವು ಜಲಶಕ್ತಿ ಸಚಿವಾಲಯದ ಅಡಿ ಜಂಟಿ ಕಾರ್ಯದರ್ಶಿಗಳ ಮಟ್ಟದ ಅಧಿಕಾರಿಗಳು ತಾಂತ್ರಿಕ ಸಲಹೆಗಾರರು ಸೇರಿದಂತೆ 250 ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳು ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿ ಒಟ್ಟಾರೆ ನೀರಿನ ಕೊರತೆ, ಜಲಸಂರಕ್ಷಣೆ ಹಾಗೂ ನಿರ್ವಹಣೆ ಕುರಿತು ಅಧ್ಯಯನ ನಡೆಸುತ್ತಿದ್ದು, ಪ್ರಸ್ತುತ ಜಾರಿಯಲ್ಲಿರುವ ನೀರಿಗೆ ಸಂಬಂಧಪಟ್ಟಂತಹ ಯೋಜನೆಗಳಿಗೆ ಪ್ರೋತ್ಸಾಹ ನೀಡುವುದೇ ಜಲಶಕ್ತಿ ಅಭಿಯಾನದ ಉದ್ದೇಶವಾಗಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್​ ಮಾತನಾಡಿ, ಜಿಲ್ಲೆಯಲ್ಲಿ ಬರ ನಿರ್ವಹಣಾ ಚಟುವಟಿಕೆಗಳು ಹಾಗೂ ತೀವ್ರ ಬರ ಎದುರಿಸುತ್ತಿರುವ ಇಂಡಿ ತಾಲೂಕಿನ ಬರ ಪರಿಸ್ಥಿತಿ, ಕೈಗೊಳ್ಳಲಾಗುತ್ತಿರುವ ಬರ ನಿರ್ವಹಣಾ ಕ್ರಮಗಳ ಬಗ್ಗೆ ವಿವರಿಸಿದರು. ಅದರಂತೆ ಕೃಷ್ಣಾ ನದಿಯ ನೀರನ್ನು ಆಲಮಟ್ಟಿ ಜಲಾಶಯಕ್ಕೆ ಸೀಮಿತವಾಗಿ ಜಿಲ್ಲೆಯ ಪ್ರತಿ ಮನೆಗೆ ಪೈಪಲೈನ್ ಮೂಲಕ ನೀರು ಸರಬರಾಜು ಮಾಡುವ ಜಲಧಾರೆ ಯೋಜನೆ ಜಾರಿಗೊಂಡಲ್ಲಿ ಬಹುತೇಕ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಸಾಧ್ಯವಿದೆ. ಈ ಯೋಜನೆ ಜಾರಿಗೊಳಿಸಲು ಜನಪ್ರತಿನಿಧಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮುಂಬರುವ ವರ್ಷಗಳಲ್ಲಿ ಈ ಯೋಜನೆ ಜಾರಿಗೊಳ್ಳಲಿದೆ ಎಂದರು.

ಜಿಲ್ಲೆಯ ವಿವಿಧ ಪ್ರದೇಶಗಳಿಗೆ ನೋಡಲ್ ಅಧಿಕಾರಿಗಳ ಭೇಟಿ : ಜಿಲ್ಲೆಯ ಅಥರ್ಗಾ, ತಡವಲಗಾ, ಗಣವಲಗಾ, ರೂಗಿ, ಬಬಲಾದ, ಹಳಗುಣಕಿ ಗ್ರಾಮಗಳಿಗೆ ಭೇಟಿ ನೀಡಿದ ಭಾರತ ಸರ್ಕಾರದ ವಾಣಿಜ್ಯ ಇಲಾಖೆಯ ಆರ್ಥಿಕ ಸಲಹೆಗಾರರು ಹಾಗೂ ಜಲಶಕ್ತಿ ಅಭಿಯಾನದ ಕೇಂದ್ರ ನೋಡಲ್ ಅಧಿಕಾರಿಗಳಾದ ಅಜಯ ಶ್ರೀವಾತ್ಸವ ಅವರು ಅಲ್ಲಿ ಕೈಗೊಳ್ಳಲಾದ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

Intro:ವಿಜಯಪುರ Body:
 ವಿಜಯಪುರ: ನೀರಿನ ಕೊರತೆ ಹಾಗೂ ಜಲಸಂರಕ್ಷಣಾ ಕ್ರಮಗಳ ಕುರಿತು ವಸ್ತುಸ್ಥಿತಿ ಅಧ್ಯಯನವನ್ನು ನಡೆಸಲಾಗುತ್ತ್ತಿದೆ ಎಂದು ಭಾರತ ಸರ್ಕಾರದ ವಾಣಿಜ್ಯ ಇಲಾಖೆಯ ಆರ್ಥಿಕ ಸಲಹೆಗಾರರು ಹಾಗೂ ಜಲಶಕ್ತಿ ಅಭಿಯಾನದ ಕೇಂದ್ರ ನೋಡಲ್ ಅಧಿಕಾರಿ ಅಜಯ ಶ್ರೀವಾತ್ಸವ ಹೇಳಿದರು. 
          ನಗರದ ನೂತನ ಪ್ರವಾಸಿ ಮಂದಿರದಲ್ಲಿ ಕೃಷಿ, ತೋಟಗಾರಿಕೆ, ಜಲಾನಯನ ಇಲಾಖೆ ಸೇರಿದಂತೆ ಜಿಲ್ಲೆಯ ಮತ್ತು ಇಂಡಿ ತಾಲೂಕಿನ ಬರ ಪರಿಸ್ಥಿತಿ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿ ತೀವ್ರ ಬರವಿದ್ದು, ಈಗಾಗಲೇ ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಬರ ಪರಿಸ್ಥಿತಿಯನ್ನು ಎದುರಿಸುತ್ತಿರುವ ಜಿಲ್ಲೆಗಳಲ್ಲಿ ಕೇಂದ್ರ ಜಲಶಕ್ತಿ ಸಚಿವಾಲಯದ ಅಡಿಯಲ್ಲಿ ಜಂಟಿ ಕಾರ್ಯದರ್ಶಿಗಳ ಮಟ್ಟದ ಅಧಿಕಾರಿಗಳು ತಾಂತ್ರಿಕ ಸಲಹೆಗಾರರು ಸೇರಿದಂತೆ 250 ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳು ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿ ಒಟ್ಟಾರೆ ನೀರಿನ ಕೊರತೆ, ಜಲಸಂರಕ್ಷಣಾ ಹಾಗೂ ನಿರ್ವಹಣೆ ಕುರಿತು ಅಧ್ಯಯನ ನಡೆಸುತ್ತಿದ್ದು, ಪ್ರಸ್ತುತ ಜಾರಿಯಲ್ಲಿರುವ ನೀರಿಗೆ ಸಂಬಂಧಪಟ್ಟಂತಹ ಯೋಜನೆಗಳಿಗೆ ಪ್ರೋತ್ಸಾಹ ನೀಡುವುದೇ ಜಲಶಕ್ತಿ ಅಭಿಯಾನದ   ಉದ್ದೇಶವಾಗಿದೆ ಎಂದು ಹೇಳಿದರು. 
          ಅದರಂತೆ ಜಲ ಸಂಪನ್ಮೂಲಗಳ ಸಂರಕ್ಷಣೆ, ನಿರ್ವಹಣೆ, ಜಲಸಾಕ್ಷರತೆ,  ಜಲಾನಯನ ಪ್ರದೇಶಗಳ ಅಭಿವೃದ್ದಿ, ಕೊಳವೆಬಾವಿಗಳ ಮರುಪೂರಣ, ಅಂತರಜಲ ಹೆಚ್ಚಳ, ಅರಣ್ಯೀಕರಣ ಹಾಗೂ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದ್ದು, ಜಲಶಕ್ತಿ ಅಭಿಯಾನದ ಅಂಗವಾಗಿ ಅಧ್ಯಯನ ನಡೆಸಲಾಗುತ್ತಿದೆ. ರಾಷ್ಟ್ರದ ವಿವಿಧ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಇದ್ದು, ಬರ ನಿರ್ವಹಣೆ ಸವಾಲಾಗಿದೆ. ವಿಜಯಪುರ ಜಿಲ್ಲೆಯಲ್ಲಿಯೂ ಕೂಡ ಪ್ರಾಥಮಿಕ ಜಲಸಂಪನ್ಮೂಲವಾಗಿರುವ ಭೀಮಾ ನದಿ ಅವಸಾನದ ಅಂಚಿನಲ್ಲಿದ್ದು, ನಿರಂತರ ಟ್ಯಾಂಕರ್ ಮೂಲಕ ವಿವಿಧ ಪ್ರದೇಶಗಳಿಗೆ ನೀರು ಸರಬರಾಜು ಮಾಡುವುದು ಕಷ್ಟಸಾಧ್ಯ. ಇಂತಹ ಪರಿಸ್ಥಿತಿಯಲ್ಲಿ ಮುಂಬರುವ ವರ್ಷಗಳಲ್ಲಿ ಶಾಶ್ವತ ಪರಿಹಾರ ಕಲ್ಪಿಸುವ ಅವಶ್ಯಕತೆ ಇದ್ದು, ಅವಶ್ಯಕ ಯೋಜನೆ ಸಹ ರೂಪಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು. 
          ಈ ಹಿನ್ನಲೆಯಲ್ಲಿ ಇಂದು ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಡಿಯಲ್ಲಿ ಹಮ್ಮಿಕೊಂಡಿರುವ ವಿವಿಧ ನೀರಾವರಿ ಯೋಜನೆಗಳು ಅರಣ್ಯೀಕರಣ ಹಾಗೂ ಜಲಸಂಪನ್ಮೂಲದ ಕೊರತೆಯ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಈ ಕುರಿತಂತೆ ಸ್ಥಳೀಯ ಮಟ್ಟದಲ್ಲಿ ಸಾರ್ವಜನಿಕರ ಸಮಸ್ಯೆಗಳು ಹಾಗೂ ಅಭಿಪ್ರಾಯವನ್ನು ಸಹ ಪಡೆಯಲಾಗುತ್ತಿದ್ದು, ಪ್ರಸ್ತುತ ಸ್ಥಾಪಿಸಲಾಗಿರುವ ಯೋಜನೆಗಳಿಗೆ ಉತ್ತೇಜನ ನೀಡುವುದು ಮೂಲ ಉದ್ದೇಶವಾಗಿದೆ ಎಂದು ಹೇಳಿದ ಅವರು, ಕುಡಿಯುವ ನೀರಿನ ಕೊರತೆ ನೀಗಿಸುವ ಕಾರ್ಯಕ್ರಮಗಳನ್ನು ಆಂದೋಲನದ ಮಾದರಿಯಲ್ಲಿ ನಡೆಯುವ ಅವಶ್ಯಕತೆ ಇದೆ ಎಂದು ಹೇಳಿದರು. 
          ಅಂತರಜಲ ಹೆಚ್ಚಳ ಹಾಗೂ ಜಲಸಂರಕ್ಷಣೆಗೆ ಸಂಬಂಧಪಟ್ಟಂತೆ ಜನವಸತಿಗಳಿಗೆ ವಿಶೇಷ ಯೋಜನೆ ಮೂಲಕ ರಾಜಸ್ತಾನ ರಾಜ್ಯದಲ್ಲಿ ಜಾರಿಗೊಳಿಸಲಾದ ಯೋಜನಾ ಮಾದರಿಯನ್ನು ಇಲ್ಲಿಯೂ ಅಳವಡಿಸುವ ಕುರಿತು ಪರಿಶೀಲಿಸಬೇಕು. ಜಲಸಂಪನ್ಮೂಲದ ಮಹತ್ವದ ಕುರಿತಂತೆ ಸಾರ್ವಜನಿಕರಲ್ಲಿ ಸೂಕ್ತ ಅರಿವನ್ನು ಸಹ ಮೂಡಿಸುವಂತೆ ಸಲಹೆ ನೀಡಿದರು. 
          ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಮಾತನಾಡಿ, ಜಿಲ್ಲೆಯಲ್ಲಿ ಬರ ನಿರ್ವಹಣಾ ಚಟುವಟಿಕೆಗಳು ಹಾಗೂ ತೀವ್ರ ಬರ ಎದುರಿಸುತ್ತಿರುವ ಇಂಡಿ ತಾಲೂಕಿನ ಬರ ಪರಿಸ್ಥಿತಿ, ಕೈಗೊಳ್ಳಲಾಗುತ್ತಿರುವ ಬರ ನಿರ್ವಹಣಾ ಕ್ರಮಗಳ ಬಗ್ಗೆ ವಿವರಿಸಿದರು.
          ಅದರಂತೆ ಕೃಷ್ಣಾ ನದಿಯ ನೀರನ್ನು ಆಲಮಟ್ಟಿ ಜಲಾಶಯಕ್ಕೆ ಸೀಮಿತವಾಗಿ ಜಿಲ್ಲೆಯ  ಪ್ರತಿ ಮನೆಗೆ ಪೈಪಲೈನ್ ಮೂಲಕ ನೀರು ಸರಬರಾಜು ಮಾಡುವ ಜಲಧಾರೆ ಯೋಜನೆ ಜಾರಿಗೊಂಡಲ್ಲಿ ಬಹುತೇಕ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಸಾಧ್ಯವಿದೆ.  ಈ ಯೋಜನೆ ಜಾರಿಗೊಳಿಸಲು ಜನಪ್ರತಿನಿಧಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮುಂಬರುವ ವರ್ಷಗಳಲ್ಲಿ ಈ ಯೋಜನೆ ಜಾರಿಗೊಳ್ಳಲಿದೆ. ಜಿಲ್ಲೆಯಾದ್ಯಂತ ಈಗಾಗಲೇ ಜಲಾಮೃತ ಯೋಜನೆಯಡಿ ಜಾಗೃತಿಯನ್ನು ಮೂಡಿಸಲಾಗಿದೆ. ನೀರಿನ ಜಲಮೂಲಗಳ ಸಂರಕ್ಷಣೆಗೆ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಏತ ನೀರಾವರಿ ಯೋಜನೆಗಳನ್ನು ಸಹ ಜಾರಿಗೊಳಿಸಲಾಗುತ್ತಿದೆ. ಚೆಕ್‌ಡ್ಯಾಂ, ಕೆರೆ ತುಂಬುವ ಯೋಜನೆಗಳು, ನೀರಿನ ಸಂರಕ್ಷಣಾ ಚಟುವಟಿಕೆಗಳು, ಅರಣ್ಯೀಕರಣ, ಜಲಾನಯನ ಪ್ರದೇಶಗಳ ಅಭಿವೃದ್ದಿ, ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.
          ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ರಾಷ್ಟ್ರದಲ್ಲಿ ತೀವ್ರ ಬರ ಎದುರಿಸುತ್ತಿರುವ ಜಿಲ್ಲೆಗಳ ಪೈಕಿ ಕರ್ನಾಟಕ ರಾಜ್ಯದ ಹಾಸನ, ಬಳ್ಳಾರಿ, ವಿಜಯಪುರ ಜಿಲ್ಲೆಗಳನ್ನು ಜಲಶಕ್ತಿ ಅಭಿಯಾನದಡಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು. 
          ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ಮಹಾನಗರ ಪಾಲಿಕೆ ಆಯುಕ್ತ ಡಾ.ಔದ್ರಾಮ, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶಿವಕುಮಾರ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸಂತೋಷ ಇನಾಂದಾರ, ಅರಣ್ಯ ಸಂರಕ್ಷಣಾಧಿಕಾರಿ ಶ್ರೀಮತಿ ಸರಿನಾ ಸಿಕ್ಕಲಿಗಾರ, ಹಿರಿಯ ಭೂವಿಜ್ಞಾನಿ ಮಹೇಶ ಬಿರಾಜನೂರ ಸೇರಿದಂತೆ ವಿವಿದ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದು, ಪಾವರ್ ಪಾಯಿಂಟ್ ಪ್ರೇಜಂಟೇಶನ್ ಮೂಲಕ ಅವಶ್ಯಕ ಮಾಹಿತಿ ಒದಗಿಸಿದರು. ಕೃಷಿ ಇಲಾಖೆಯ ಉಪನಿರ್ದೇಶಕ ಚವ್ಹಾಣ ಸ್ವಾಗತಿಸಿದರು. 
 ಜಿಲ್ಲೆಯ ವಿವಿಧ ಪ್ರದೇಶಗಳಿಗೆ ನೋಡಲ್ ಅಧಿಕಾರಿಗಳ ಭೇಟಿ : ಜಿಲ್ಲೆಯ ಅಥರ್ಗಾ, ತಡವಲಗಾ, ಗಣವಲಗಾ, ರೂಗಿ, ಬಬಲಾದ, ಹಳಗುಣಕಿ ಗ್ರಾಮಗಳಿಗೆ ಭೇಟಿ ನೀಡಿದ ಭಾರತ ಸರ್ಕಾರದ ವಾಣಿಜ್ಯ ಇಲಾಖೆಯ ಆರ್ಥಿಕ ಸಲಹೆಗಾರರು ಹಾಗೂ ಜಲಶಕ್ತಿ ಅಭಿಯಾನದ ಕೇಂದ್ರ ನೋಡಲ್ ಅಧಿಕಾರಿಗಳಾದ ಅಜಯ ಶ್ರೀವಾತ್ಸವ ಅವರು ಅಲ್ಲಿ ಕೈಗೊಳ್ಳಲಾದ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. 
          ಅಥರ್ಗಾ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಲಾದ ಕೃಷಿ ಹೊಂಡ ಪರಿಶೀಲನೆ ನಡೆಸಿ, ಅವಶ್ಯಕ ಮಾಹಿತಿ ಪಡೆದರು. ಕೃಷಿ ಭಾಗ್ಯ ಯೋಜನೆಯಡಿ ರೈತರಿಗೆ ನೀಡಲಾಗುತ್ತಿರುವ ಸೌಲಭ್ಯಗಳ ಬಗ್ಗೆ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
          ತಡವಲಗಾ ಗ್ರಾಮದಲ್ಲಿ ಬೇವಿನತೋಪು ವೀಕ್ಷಣೆ ನಡೆಸಿದರು. ಇಂಡಿ ಸೇರಿದಂತೆ ಜಿಲ್ಲೆಯಾದ್ಯಂತ 70 ಬೇವಿನತೋಪು ಬ್ಲಾಕ್ಸ್‌ಗಳನ್ನು ನಿರ್ಮಿಸಲಾಗಿದ್ದು, ಕೊಳವೆ ಬಾವಿ ತೋಡಲು ಅವಶ್ಯಕ ಅನುದಾನದ ಅವಶ್ಯಕತೆ ಇದೆ. ಅದರಂತೆ ತಡವಲಗಾ ಗ್ರಾಮದಲ್ಲಿ 27 ಹೆಕ್ಟೇರ್ ಜಮೀನಿನಲ್ಲಿ 5400 ಬೇವಿನ ಸಸಿಗಳನ್ನು ನೆಡಲಾಗಿದೆ. ಅದರಂತೆ ಜಿಲ್ಲೆಯಾದ್ಯಂತ ಈ ಸಸಿಗಳನ್ನು ನೆಡಲಾಗುತ್ತಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿಗಳು ಮಾಹಿತಿ ನೀಡಿದರು. 
          ಅದರಂತೆ ಗಣವಲಗಾ ಗ್ರಾಮದಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ನಿರ್ಮಿಸಲಾಗಿರುವ ನಾಲಾಬಂಡಿಂಗ್ ಕಾಮಗಾರಿ ಪರಿಶೀಲಿಸಿದರು. ರೂಗಿ ಗ್ರಾಮದಲ್ಲಿ ಕೃಷಿಭಾಗ್ಯ ಯೋಜನೆಯಡಿ ರೈತರಿಗೆ ನೀಡಲಾದ ಸೌಲಭ್ಯಗಳ ಬಗ್ಗೆ ತೊಟಗಾರಿಕೆ ಅಧಿಕಾರಿಗಳಿಂದ ಮಾಹಿತಿ ಪಡೆದರು. 
          ಬಬಲಾದ ಗ್ರಾಮದಲ್ಲಿ ಕೆರೆ ವೀಕ್ಷಣೆ ನಡೆಸುವ ಸಂದರ್ಭದಲ್ಲಿ ಭೀಮಾ ನದಿಯಿಂದ ನೀರಿನ ಸರಬರಾಜುವಿನಲ್ಲಿ ತೊಂದರೆ ಉಂಟಾಗುತ್ತಿದ್ದು, ಭೀಮಾ ನದಿ ನೀರಿನ ಕೊರತೆ ಉಂಟಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದರು. ಇದೇ ರೀತಿ ಬಬಲಾದ ಗ್ರಾಮದಲ್ಲಿ ಅರಣ್ಯ ಸಸಿಗಳ ರಕ್ಷಣೆಗಾಗಿ ನಿರ್ಮಿಸಲಾದ ನೀರಿನ ಹೊಂಡವನ್ನು ಪರಿಶೀಲಿಸಿದರು. 
          ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು. 
 ಬೈಟ್: ಅಜಯ್ ಶ್ರೀವಾತ್ಸವ ನೋಡಲಾಧಿಕಾರಿConclusion:ವಿಜಯಪುರ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.