ETV Bharat / state

ಕುಡಿದ ಮತ್ತಿನಲ್ಲಿ ತಂದೆಯ ಜೊತೆ ಜಗಳ: ಬಿಡಿಸಲು ಬಂದ ಅಣ್ಣನನ್ನೇ ಕೊಂದ ತಮ್ಮ - ವಿಜಪುರ ಕೊಲೆ ಸುದ್ದಿ

ಕುಡಿದ ಮತ್ತಿನಲ್ಲಿ ಅಣ್ಣನನ್ನೇ ಕೊಲೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನಲ್ಲಿ ನಡೆದಿದೆ.

ಅಣ್ಣನ ಕೊಂದ ತಮ್ಮ
ಅಣ್ಣನ ಕೊಂದ ತಮ್ಮ
author img

By

Published : Aug 12, 2021, 11:14 AM IST

ವಿಜಯಪುರ: ಸಹೋದರನೋರ್ವ ಚಾಕುವಿನಿಂದ ಚುಚ್ಚಿ ತನ್ನ ಅಣ್ಣನನ್ನೇ ಕೊಲೆ ಮಾಡಿರುವ ಘಟನೆ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಮಣೂರು ತಾಂಡಾದಲ್ಲಿ ನಡೆದಿದೆ. ಕುಡಿದು ಮತ್ತಿನಲ್ಲಿ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.

ಹಣಮಂತ ರಾಠೋಡ ಕೊಲೆ ಮಾಡಿದ ವ್ಯಕ್ತಿ.‌ ಅರ್ಜುನ ರಾಠೋಡ(38) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಕುಡಿದ ಮತ್ತಿನಲ್ಲಿ ತಂದೆಯ ಜೊತೆ ಹಣಮಂತ ಗಲಾಟೆ ಮಾಡುತ್ತಿದ್ದ. ಈ ವೇಳೆ ಜಗಳ ಬಿಡಿಸಲು ಹೋದ ಅರ್ಜುನ್​ಗೆ ಹಣಮಂತ ಚಾಕುವಿನಿಂದ ಇರಿದಿದ್ದಾನೆ. ಪರಿಣಾಮ ತೀವ್ರವಾಗಿ ಗಾಯಗೊಂಡ ಅರ್ಜುನ್ ಮೃತಪಟ್ಟಿದ್ದಾನೆ.

ಇನ್ನೊಬ್ಬ ಸಹೋದರ ನಾಮದೇವ ಶಂಕರ ರಾಠೋಡ (35) ಗೂ ಚಾಕು ತಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ದೇವರ ಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮೊಮ್ಮಗನ ತೊಟ್ಟಿಲು ಕಾರ್ಯಕ್ಕೆ ಹೋದವ ಮಸಣ ಸೇರಿದ.. ಶೀಲ-ಸಂಶಯ ಮತ್ತು ಕೊಲೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.