ವಿಜಯಪುರ: ಗೃಹಿಣಿಯೊಬ್ಬರು ಆಕಸ್ಮಿಕವಾಗಿ ಕಳೆದುಕೊಂಡಿದ್ದ ಮಾಂಗಲ್ಯ ಸರವನ್ನು ಹುಡುಕಿ ಕೊಡುವಲ್ಲಿ ಪೌರಕಾರ್ಮಿಕ ನೆರವಾಗಿದ್ದು, ಆತನ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.
ನಗರದ 22ನೇ ವಾರ್ಡ್ ಮಹಿಳೆಯೊಬ್ಬರು ಬೆಳಗ್ಗೆ ಕಸದ ವಾಹನಕ್ಕೆ ಕಸ ಹಾಕುವಾಗ ಮಾಂಗಲ್ಯ ಸರವನ್ನೂ ಕಸದ ಜೊತೆ ಎಸೆದಿದ್ದಾರೆ. ಬಳಿಕ ಮನೆಯಲ್ಲಿ ಹುಡುಕಾಡಿದ್ದಾರೆ. ಸಿಗದಿದ್ದಾಗ ಕಸದ ವಾಹನದಲ್ಲಿ ಕಳೆದಿರುವುದು ತಿಳಿದು ಬಂದಿದೆ.
ತಕ್ಷಣ ಎಚ್ಚೆತ್ತ ಕುಟುಂಬಸ್ಥರು ಪಾಲಿಕೆಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಅಧಿಕಾರಿ ಸದರಿ ಕಸದ ವಾಹನ ಚಾಲಕನಿಗೆ ಕಸ ಸುರಿಯಂತೆ ಸುಚಿಸಿದ್ದಾರೆ. ಬಳಿಕ ಮನೆಯವರೆಲ್ಲರು ಕಸದ ರಾಶಿ ಬಳಿ ತೆರಳಿದ್ದಾರೆ. ಈ ವೇಳೆ ಪಾಲಿಕೆ ಪೌರಕಾರ್ಮಿಕರೇ ಕಸದ ರಾಶಿಯಲ್ಲಿ ಮಾಂಗಲ್ಯಕ್ಕಾಗಿ ಹುಡುಕಾಡಿದ್ದಾರೆ.
ಹುಡುಕಾಟದ ವೇಳೆ ಮಾಂಗಲ್ಯ ಸರ ದೊರೆತಿದ್ದು, ಸರ ಕಳೆದುಕೊಂಡಿದ್ದ ರಾಣಾಬಾಯಿ ಚವ್ಹಾಣರಿಗೆ ಮರಳಿಸಿದ್ದಾರೆ. ಈ ಕಾರ್ಯದಿಂದ ಸಂತಸಗೊಂಡ ಕುಟುಂಬಸ್ಥರು, ಪೌರಕಾರ್ಮಿಕರಿಗೆ ಧನ್ಯವಾದ ಅರ್ಪಿಸಿದ್ದಾರೆ. ಅಧಿಕಾರಿಯ ಸಮಯಪ್ರಜ್ಞೆಯಿಂದ ಮಾಂಗಲ್ಯ ಸರ ಮರಳಿ ಕೈಸೇರಿದಂತಾಗಿದೆ.
ಇದನ್ನೂ ಓದಿ: ಫೆ.14ರಂದು ಪ್ರೇಮಿಗಳ ದಿನಾಚರಣೆ: ಬಜರಂಗದಳ ವಾರ್ನಿಂಗ್ ಬೆನ್ನಿಗೆ ಪೊಲೀಸರ ಕ್ರಮ