ವಿಜಯಪುರ: ಕೊರೊನಾ ಭೀತಿ ಹೆಚ್ಚುತ್ತಿರುವ ನಡುವೆಯೇ ಸೋಂಕಿಗೆ ಐವರು ಜೀವ ಕಳೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ ಈಗ 34ಕ್ಕೆ ಏರಿದೆ. 118 ಜನರಲ್ಲಿ ಕೊರೊನಾ ಪಾಸಿಟಿವ್ ದೃಢವಾಗಿದ್ದು, ಸೋಂಕಿತರ ಸಂಖ್ಯೆ 2,890ಕ್ಕೇರಿದೆ.
ಕಳೆದ 15 ದಿನಗಳಲ್ಲಿ ಮೂವರು ವೃದ್ಧೆಯರು, ಓರ್ವ ಮಹಿಳೆ, ಓರ್ವ ವೃದ್ಧ ವ್ಯಕ್ತಿ ನಾನಾ ರೋಗಗಳ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
P- 78796 (64 ವರ್ಷದ ವೃದ್ಧೆ) ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಜು. 17 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಇವರು ಜು. 20ರಂದು ಸಾವಿಗೀಡಾಗಿದ್ದಾರೆ.
P-81475 (86 ವರ್ಷದ ವೃದ್ಧೆ) ತೀವ್ರ ಉಸಿರಾಟದ ಸಮಸ್ಯೆಯಿಂದ ಜು.15 ರಂದು ಆಸ್ಪತ್ರೆಗೆ ದಾಖಲಾಗಿದ್ದು ಜು. 20 ರಂದು ಸಾವಿಗೀಡಾಗಿದ್ದಾರೆ.
P-82514 (86 ವರ್ಷದ ವೃದ್ಧ) ಉಸಿರಾಟದ ಸಮಸ್ಯೆಯಿಂದ ಜು. 16 ರಂದು ಆಸ್ಪತ್ರೆಗೆ ದಾಖಲಾಗಿದ್ದು ಜು. 20 ರಂದು ಸಾವನ್ನಪ್ಪಿದ್ದಾರೆ.
P-113184 (55 ವರ್ಷದ ಮಹಿಳೆ) ಉಸಿರಾಟದ ಸಮಸ್ಯೆಯಿಂದ ಜು. 25 ರಂದು ಆಸ್ಪತ್ರೆಗೆ ದಾಖಲಾಗಿದ್ದು ಜು. 27 ರಂದು ಸಾವನ್ನಪ್ಪಿದ್ದಾರೆ.
P- 117278 (65 ವರ್ಷದ ವೃದ್ಧೆ) ಉಸಿರಾಟದ ಸಮಸ್ಯೆಯಿಂದ ಜು. 23 ರಂದು ಆಸ್ಪತ್ರೆಗೆ ದಾಖಲಾಗಿದ್ದು ಜು. 24 ರಂದು ಸಾವನ್ನಪ್ಪಿದ್ದಾರೆ.
ಸಾವಿಗೀಡಾದವರ ಮಾಹಿತಿಯನ್ನು ಅಧಿಕೃತಗೊಳಿಸುವಲ್ಲಿ ವಿಜಯಪುರ ಜಿಲ್ಲಾಡಳಿತ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಸಾರ್ವಜನಿಕರು, ಮೃತರ ಕುಟುಂಬ ವರ್ಗ ಆಕ್ರೋಶ ವ್ಯಕ್ತಪಡಿಸಿದೆ. ಆದರೆ ಕೋವಿಡ್ ವರದಿ ತಡವಾಗಿ ಕೈಸೇರುತ್ತಿರುವುದೇ ಇದಕ್ಕೆ ಕಾರಣ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ.
ಇಂದು ಕೊರೊನಾದಿಂದ ಗುಣಮುಖರಾದ 49 ಮಂದಿ ಸೇರಿ ಒಟ್ಟು 2,061ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 729 ಸಕ್ರಿಯ ಪ್ರಕರಣಗಳಿಗೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರೆದಿದೆ.
40,722 ಜನರ ಮೇಲೆ ನಿಗಾ ಇಡಲಾಗಿದೆ. 44,401 ಜನರ ಗಂಟಲು ದ್ರವ ಪಡೆದುಕೊಳ್ಳಲಾಗಿದ್ದು ಇವರಲ್ಲಿ 41,469 ಜನರ ವರದಿ ನೆಗಟಿವ್, 2,772 ಜನರ ವರದಿ ಪಾಸಿಟಿವ್ ಎಂದು ಬಂದಿದೆ. ಇನ್ನು, 160 ಜನರ ವರದಿ ಬರಬೇಕಾಗಿದೆ. ಸದ್ಯ 2,677 ಜನರು ಹೋಂ ಕ್ವಾರಂಟೈನ್‌ನಲ್ಲಿದ್ದಾರೆ.