ವಿಜಯನಗರ: ಬಿಜೆಪಿ ಶಾಸಕ ತಿಪ್ಪಾರೆಡ್ಡಿಗೆ ಲಂಚದ ಆರೋಪ ಬಂದಿದೆ ಈ ಬಗ್ಗೆ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಆರ್. ಮಂಜುನಾಥ್ ಆಡಿಯೊ ರೆಕಾರ್ಡ್ ಬಿಡುಗಡೆ ಮಾಡಿದ್ದಾರೆ. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಡಾಕ್ಯುಮೆಂಟ್ ಕೊಡಿ ತನಿಖೆ ಮಾಡಿಸುತ್ತೇನೆ ಎಂದು ಹೇಳಿದ್ದಾರೆ. ಅದಕ್ಕಿಂತ ಬೇರೆ ಎವಿಡೆನ್ಸ್ ಬೇಕಾ? ಇವರು ಎವಿಡೆನ್ಸ್ ಆ್ಯಕ್ಟ್ ಓದಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಕೆಪಿಸಿಸಿಯಿಂದ ಹೊಸಪೇಟೆ ನಗರದ ಡಾ. ಪುನೀತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಜಾ ಧ್ವನಿ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಿಮ್ಮ ಅಪ್ಪ ಎಸ್.ಆರ್. ಬೊಮ್ಮಾಯಿ ಅವರು ವಕೀಲರಾಗಿದ್ದರು. ನೀವು ವಕೀಲ ಅಲ್ಲ, ಬಿಇ ಗ್ರ್ಯಾಜುಯೇಟ್. ನಿನಗೆ ಎವಿಡೆನ್ಸ್ ಅಂದರೆ ಏನು ಅಂತ ಗೊತ್ತಾಗಲ್ಲ. ಏಕೆಂದರೆ ಎವಿಡೆನ್ಸ್ ಆ್ಯಕ್ಟ್ ಓದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಟೀಕಿಸಿದರು.
ಚಿತ್ರದುರ್ಗದ ಶಾಸಕರ ಮೇಲೆ ₹90 ಲಕ್ಷ ಲಂಚ ಪಡೆದಿರುವ ಆರೋಪ ಬಂದಿದೆ: ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಚಾರ ಮುಗಿಲು ಮುಟ್ಟಿದೆ, ವಿಧಾನಸೌಧದ ಗೋಡೆಗಳು ಲಂಚ ಲಂಚ ಅಂತಾ ಪಿಸುಗುಡುತ್ತಿವೆ 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಈ ಹಿಂದೆ ಯಾರು ಕೇಳಿರಲಿಲ್ಲ. ಮೊದಲ ಬಾರಿಗೆ ಬಸವರಾಜ ಬೊಮ್ಮಾಯಿ ಅವರಿಗೆ 40 ಪರ್ಸೆಂಟ್ ಕಳಂಕ ಅಂಟಿಕೊಂಡಿದೆ. ಗುತ್ತಿಗೆದಾರರಾದ ಸಂತೋಷ ಪಾಟೀಲ್, ಪ್ರಸಾದ್ ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಕುಮಾರ ಎಂಬುವರು ದಯಾಮರಣಕ್ಕೆ ಪತ್ರ ಬರೆದಿದ್ದರು. ಈಗ ಚಿತ್ರದುರ್ಗದ ಶಾಸಕರ ಮೇಲೆ ₹90 ಲಕ್ಷ ಲಂಚ ಪಡೆದಿರುವ ಆರೋಪ ಬಂದಿದೆ. ಇಂತಹ ಸರ್ಕಾರ ಅಧಿಕಾರದಲ್ಲಿ ಇರಬೇಕಾ? ಎಂದು ಪ್ರಶ್ನಿಸಿದರು.
ಬಿಜೆಪಿ ಒಂದು ಸುಳ್ಳಿನ ಫ್ಯಾಕ್ಟರಿ:2018ರಲ್ಲಿ ಕೊಟ್ಟ 600 ಭರವಸೆಯಲ್ಲಿ ಎಷ್ಟು ಭರವಸೆ ಈಡೇರಿಸಿದ್ದೀರಾ ಬೊಮ್ಮಯಿ ಅವರೇ? ಎಂದು ಪ್ರಶ್ನಿಸಿದರು, ತಾಕ್ಕತ್ತು ದಮ್ಮಿನ ಬಗ್ಗೆ ಮಾತನಾಡುವ ಬೊಮ್ಮಯಿ, ನಿಮಗೆ ದಮ್ಮು ಇದರೇ ಅಭಿವೃದ್ಧಿ ಕುರಿತು ಚರ್ಚೆಗೆ ಬನ್ನಿ ಎಂದು ಸಾಕಷ್ಟು ಬಾರಿ ಆಹ್ವಾನ ಕೊಟ್ಟಿದ್ದೇನೆ ಅವರಿಗೆ ಧೈರ್ಯ ಇಲ್ಲ ಬಿಜೆಪಿ ಒಂದು ಸುಳ್ಳಿನ ಫ್ಯಾಕ್ಟರಿ ಎಂದು ಸಿದ್ದರಾಮಯ್ಯ ಹರಿಹಾಯ್ದರು.
2013ರಲ್ಲಿ 165 ಭರವಸೆ ನೀಡಿದ್ದೆ ಅದರಲ್ಲಿ 158 ಭರವಸೆ ಈಡೇರಿಸಿದ್ದೇವೆ:ರಾಜ್ಯದ 22 ಜಿಲ್ಲೆಗಳಲ್ಲಿ ಪ್ರಜಾಧ್ವನಿ ಯಾತ್ರೆ ನಡೆಯಲಿದೆ. ಜನರ ಧ್ವನಿ ಆಲಿಸಲು ಪ್ರಜಾಧ್ವನಿ ಯಾತ್ರೆ ಹಮ್ಮಿಕೊಂಡಿದ್ದೇವೆ. ಜನಾಭಿಪ್ರಾಯ, ಜನರ ಸಲಹೆ ಪಡೆಯಲು ಈ ಯಾತ್ರೆ ಮಾಡುತ್ತಿದ್ದು, ಅಧಿಕಾರಕ್ಕೆ ಬಂದರೆ ಜನರ ಸಲಹೆಯಂತೆ ಸರ್ಕಾರ ನಡೆಸುತ್ತೇವೆ. 2013ರಲ್ಲಿ 165 ಭರವಸೆ ನೀಡಿದ್ದೆ ಅದರಲ್ಲಿ 158 ಭರವಸೆ ಈಡೇರಿಸಿದ್ದೇವೆ ಕಾಂಗ್ರೆಸ್ ಪಕ್ಷ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತದೆ ಚುನಾವಣಾ ಸಂದರ್ಭದಲ್ಲಿ ನೀಡುವ ಭರವಸೆ ಪ್ರಾಮಾಣಿಕವಾಗಿ ಈಡೇರಿಸುತ್ತವೆ ಎಂದರು.
ಅಧಿಕಾರಕ್ಕೆ ಬಂದರೆ ಎಷ್ಟೇ ಹಣ ಖರ್ಚು ಆದರು ಸಮಾನಾಂತರ ಜಲಾಶಯ ನಿರ್ಮಾಣ: ಕೊಟ್ಟ ಮಾತನ್ನ ಯಾವತ್ತಿಗೂ ಕಾಂಗ್ರೆಸ್ ತಪ್ಪಲ್ಲ ತುಂಗಾಭದ್ರಾ ಜಲಾಶಯದಲ್ಲಿ 33 ಟಿಎಂಸಿ ಹೂಳು ತುಂಬಿದೆ ಬಿಜೆಪಿ ಸರ್ಕಾರ ಸಮಾನಾಂತರ ಜಲಾಶಯ ಕಟ್ಡುವುದಾಗಿ ಹೇಳಿದ್ದಿರಿ, ಬೊಮ್ಮಾಯಿ ಅವರೇ ಸಮಾನಾಂತರ ಜಲಾಶಯ ಕಟ್ಟಲು ಸಾಧ್ಯವಾಯಿತಾ? ನಾವು ಜನರಿಗೆ ಇವತ್ತು ಮಾತು ಕೊಟ್ಟು ಹೋಗುತ್ತೇನೆ ನಾವು ಅಧಿಕಾರಕ್ಕೆ ಬಂದರೆ ಎಷ್ಟೇ ಹಣ ಖರ್ಚು ಆದರು ಸಮಾನಾಂತರ ಜಲಾಶಯ ನಿರ್ಮಾಣ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ:ಎಲ್ಲ ಸರ್ಕಾರದಲ್ಲೂ ಸಿಡಿ ರಾಜಕಾರಣಗಳಿದ್ದವು: ಆದರೆ ಈ ಸರ್ಕಾರದಲ್ಲಿ ಅದು ಹೆಚ್ಚಾಗಿದೆ ಹೊರಟ್ಟಿ ಅಸಮಾಧಾನ..