ETV Bharat / state

ವಿಜಯಪುರದ ತೊರವಿ ಗ್ರಾಮದಲ್ಲಿ ಒಂದೇ ತಿಂಗಳು 40 ಮಂದಿ ಕೊರೊನಾಗೆ ಬಲಿ! - ಕೊರೊನಾ ಎರಡನೇ ಅಲೆ

ಮಾಜಿ ಸಚಿವ ಎಂ.ಬಿ.ಪಾಟೀಲ್​ ಅವರ ಸ್ವಕ್ಷೇತ್ರವಾದ ಬಬಲೇಶ್ವರ ವಿಧಾನಸಭೆ ವ್ಯಾಪ್ತಿಗೆ ಬರುವ ತೊರವಿ ಎಂಬ ಪುಟ್ಟ ಗ್ರಾಮದಲ್ಲಿ ಒಂದೇ ತಿಂಗಳಲ್ಲಿ ಒಟ್ಟು 70 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ 40 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಎಂ.ಬಿ.ಪಾಟೀಲ್​ ಮಾಹಿತಿ ನೀಡಿದ್ದಾರೆ.

Vijayapura
ತೊರವಿ ಗ್ರಾಮದಲ್ಲಿ ಒಂದೇ ತಿಂಗಳಲ್ಲಿ 40 ಮಂದಿ ಕೊರೊನಾಗೆ ಬಲಿ
author img

By

Published : May 18, 2021, 8:07 AM IST

Updated : May 18, 2021, 3:15 PM IST

ವಿಜಯಪುರ: ಮಾಜಿ ಸಚಿವ ಎಂ.ಬಿ. ಪಾಟೀಲ್​ ಅವರ ಸ್ವಕ್ಷೇತ್ರವಾಗಿರುವ ಬಬಲೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಬರುವ ತೊರವಿ ಗ್ರಾಮ ಈಗ ಜಿಲ್ಲೆಯ ಅಧಿಕಾರಿಗಳ ನಿದ್ದೆಗೆಡಿಸಿದೆ.‌ ಕೊರೊನಾ ಎರಡನೇ ಅಲೆ ಆರಂಭವಾದ ಮೇಲೆ ಕೇವಲ ಒಂದು ತಿಂಗಳ ಅವಧಿಯಲ್ಲೇ ಈ ಗ್ರಾಮದಲ್ಲಿ 70 ಮಂದಿ ಸಾವನ್ನಪ್ಪಿದ್ದಾರೆ. ಈ ವಿಷಯವನ್ನು ಸ್ವತ: ಮಾಜಿ ಸಚಿವ ಎಂ.ಬಿ. ಪಾಟೀಲ್​​ ಬಹಿರಂಗಗೊಳಿಸಿದ್ದಾರೆ. ಈ ಸುದ್ದಿ ಗೊತ್ತಾಗುತ್ತಿದ್ದಂತೆ ಆರೋಗ್ಯ ಅಧಿಕಾರಿಗಳು ಗ್ರಾಮಕ್ಕೆ ತೆರಳಿದ್ದಾರೆ.

ವಿಜಯಪುರದಿಂದ ಕೇವಲ 5 ಕಿ.ಮೀ. ದೂರದಲ್ಲಿದೆ ಈ ಗ್ರಾಮ!

ವಿಜಯಪುರ ನಗರದಿಂದ ಕೇವಲ 5 ಕಿ.ಮೀ ಅಂತರವಿರುವ ಕಾರಣ ಇಲ್ಲಿಯೇ ಅನೇಕ ವ್ಯಾಪಾರ-ವಹಿವಾಟು ನಡೆಯುತ್ತವೆ. ಇದರಿಂದಾಗಿ ಗ್ರಾಮದ ಜನರಿಗೆ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಗ್ರಾಮದ 100 ಸೋಂಕಿತರು ಹೋಂ ಕ್ವಾರಂಟೈನ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮದಲ್ಲಿ ಸೋಂಕು ಹೆಚ್ಚಾಗುತ್ತಿರುವ ಕಾರಣ ಗ್ರಾಮ ಪಂಚಾಯಿತಿ ಕಾರ್ಯಾಲಯವನ್ನು ಕೋವಿಡ್ ಕೇರ್ ಸೆಂಟರ್​ ಆಗಿ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಧಿಕಾರಿಗಳು ತೊರವಿ ಗ್ರಾಮಕ್ಜೆ ತೆರಳಿ ಪ್ರತಿ ಮನೆಯ ಪ್ರತಿ ಸದಸ್ಯರ ಸ್ವ್ಯಾಬ್ ಟೆಸ್ಟ್ ಮಾಡಿಸುತ್ತಿದ್ದು, ಅಗತ್ಯ ಬಿದ್ದವರಿಗೆ ಆಸ್ಪತ್ರೆಗೆ ದಾಖಲಿಸುತ್ತಿದ್ದಾರೆ. ಮಹಿಳಾ ವಿಶ್ವ ವಿದ್ಯಾಲಯ ಇರೋದು ಇದೇ ಗ್ರಾಮದಲ್ಲೇ. ಈ ಗ್ರಾಮ 15 ಸಾವಿರ ಜನಸಂಖ್ಯೆ ಹೊಂದಿದೆ.

ತೊರವಿ ಗ್ರಾಮದಲ್ಲಿ ಒಂದೇ ತಿಂಗಳಲ್ಲಿ 40 ಮಂದಿ ಕೊರೊನಾಗೆ ಬಲಿ

ಎಂ.ಬಿ. ಪಾಟೀಲ್​​ ಏನ್​ ಹೇಳ್ತಾರೆ..?

ಈ ಕುರಿತು ಪ್ರತಿಕ್ರಿಯಿಸಿದ ಎಂ.ಬಿ.ಪಾಟೀಲ್, ಜಿಲ್ಲೆಯ ಪ್ರತಿ ಗ್ರಾಮದಲ್ಲಿರುವ ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಮದಲ್ಲಿರುವ ಎಲ್ಲಾ ಜನರ ಪರೀಕ್ಷೆ ನಡೆಸಿ ಅದರಲ್ಲಿ ಎಷ್ಟು ಜನಕ್ಕೆ ಕೊರೊನಾ ಲಕ್ಷಣಗಳಿವೆ ಎಂಬ ಮಾಹಿತಿ ಕಲೆ ಹಾಕಬೇಕು. ಕೊರೊನಾ ಸೋಂಕು ದೃಢಪಟ್ಟವರಿಗೆ ಸೂಕ್ತ ಚಿಕಿತ್ಸೆ ಹಾಗು ಮಾರ್ಗದರ್ಶನ ನೀಡಬೇಕು. ಆಸ್ಪತ್ರೆಗೆ ತೆರಳುವವರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವ ಮೂಲಕ ರಾಜ್ಯದಲ್ಲಿ ಮಾದರಿಯಾಗಬೇಕೆಂದು ಸೂಚಿಸಲಾಗಿದೆ ಎಂದು ಹೇಳಿದರು.

ಪಿಡಿಒ ಸುರೇಶ ಕಳ್ಳಿಮನಿ ಮಾತನಾಡಿ, ತಿಕೋಟಾ ತಾಲೂಕಿನ ವಿವಿಧ ಗ್ರಾಮಗಳಿಗೆ ಸ್ಯಾನಿಟೈಸ್​ ಮಾಡಿಸಲಾಗುತ್ತಿದೆ. ಜೊತೆಗೆ ಗ್ರಾಮಗಳಲ್ಲಿನ ಚರಂಡಿ ಸ್ವಚ್ಛಗೊಳಿಸುವ ಮೂಲಕ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಆಶಾ ಕಾರ್ಯಕರ್ತರೊಂದಿಗೆ ಮನೆ-ಮನೆಗೆ ತೆರಳಿ ಕೊರೊನಾ ಬಗ್ಗೆ ಅರಿವು ಮೂಡಿಸಲಾಗುವುದು. ಜೊತೆಗೆ ಗ್ರಾಮಗಳಲ್ಲಿ ಡಂಗುರ ಸಾರಿ ಜಾಗೃತಿ ಮೂಡಿಸಲಾಗುವುದು. ಈವರೆಗೆ ತಾಲೂಕಿನಲ್ಲಿರುವ ಯಾವೊಬ್ಬ ವಲಸಿಗರಿಗೂ ಸೋಂಕು ತಗುಲಿಲ್ಲ ಎಂದರು.

ಪಟ್ಟಣಕ್ಕೆ ಸೀಮಿತವಾಗಿದ್ದ ಕೊರೊನಾ ಮಹಾಮಾರಿ ಈಗ ಗ್ರಾಮೀಣ ಭಾಗದಲ್ಲೂ ವ್ಯಾಪಕವಾಗಿ ಹರಡುತ್ತಿದೆ. ಇದರ ಜತೆ ಬ್ಲ್ಯಾಕ್​​ ಫಂಗಸ್ ಪ್ರಕರಣಗಳು ಉತ್ತರ ಕರ್ನಾಟಕದಲ್ಲಿಯೇ ಅತಿ ಹೆಚ್ಚು ಕಂಡು ಬಂದಿರುವುದು ಜನ ಮತ್ತಷ್ಟು ಆತಂಕಕ್ಕೆ ಒಳಗಾಗುವಂತೆ ಮಾಡಿದೆ.

ಇದನ್ನೂ ಓದಿ: ಲಾಕ್​ಡೌನ್ ವಿಸ್ತರಣೆ ಮತ್ತು ಆರ್ಥಿಕ ಪ್ಯಾಕೇಜ್ ಬಗ್ಗೆ ಶೀಘ್ರದಲ್ಲೇ ತೀರ್ಮಾನ: ಸಿಎಂ

Last Updated : May 18, 2021, 3:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.