ETV Bharat / state

ವಿಜಯಪುರ: ಕ್ರಿಕೆಟ್​ ಬೆಟ್ಟಿಂಗ್ ಜಾಲ ಭೇದಿಸಿ 32 ಆರೋಪಿಗಳ ಬಂಧನ - ವಿಜಯಪುರದ ಕಳ್ಳತನ ಪ್ರಕರಣಗಳು

ಕ್ರಿಕೆಟ್​​ ಬೆಟ್ಟಿಂಗ್​​ನಲ್ಲಿ ತೊಡಗಿದ್ದ 32 ಆರೋಪಿಗಳನ್ನು ಬಂಧಿಸಿ 16 ಪ್ರಕರಣ ದಾಖಲಿಸಲಾಗಿದೆ. ಆಪಾದಿತರಿಂದ 6,52,770 ರೂ. ನಗದು, ಮೊಬೈಲ್, 2 ಟಿವಿ, ಒಂದು ಲ್ಯಾಪ್​ಟಾಪ್​ ಹಾಗೂ ಒಂದು ಕಾರ್ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್​​ಪಿ ಅನುಪಮ್ ಅಗರವಾಲ್ ಮಾಹಿತಿ ನೀಡಿದರು.

Vijayapura
ವಿಜಯಪುರ
author img

By

Published : Oct 23, 2020, 4:11 AM IST

ವಿಜಯಪುರ: ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ 32 ಆರೋಪಿಗಳ ಬಂಧಿಸಲಾಗಿದೆ ಎಂದು ಎಸ್​​ಪಿ ಅನುಪಮ್ ಅಗರವಾಲ್ ತಿಳಿಸಿದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕ್ರಿಕೆಟ್​ ಬೆಟ್ಟಿಂಗ್​​ನಲ್ಲಿ ತೊಡಗಿದ್ದ 32 ಆರೋಪಿಗಳನ್ನು ಬಂಧಿಸಿ 16 ಪ್ರಕರಣ ದಾಖಲಿಸಲಾಗಿದೆ. ಆಪಾದಿತರಿಂದ 6,52,770 ರೂ. ನಗದು, ಮೊಬೈಲ್, 2 ಟಿವಿ, ಒಂದು ಲ್ಯಾಪ್​ಟಾಪ್​ ಹಾಗೂ ಒಂದು ಕಾರ್ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅನುಪಮ್ ಅಗರವಾಲ್

ಅಕ್ರಮವಾಗಿ ಗಾಂಜಾ ಬೆಳೆದು ಮಾರಾಟ ಮಾಡುತ್ತಿದ್ದವರು ವಿರುದ್ಧ 18 ಪ್ರಕರಣ ದಾಖಲಿಸಿ, 258 ಕೆ.ಜಿ. ಗಾಂಜಾ ಜಪ್ತಿ ಮಾಡಿದ್ದೇವೆ. ಅಬಕಾರಿ ಕಾಯ್ದೆ ಅಡಿಯಲ್ಲಿ 19 ಪ್ರಕರಣ ದಾಖಲಿಸಿ 19 ಆರೋಪಿಗಳನ್ನು ಬಂಧಿಸಲಾಗಿದೆ. ಜೂಜಾಟ ಸಂಬಂಧ ಜಿಲ್ಲೆಯಲ್ಲಿ 35 ಪ್ರಕರಣ ದಾಖಲಿಸಿ, 130 ಆರೋಪಿಗಳನ್ನು ಬಂಧಿಸಿದ್ದೇವೆ. ಮಟ್ಕಾ ಪ್ರಕರಣದಲ್ಲಿ ಭಾಗಿಯಾದ 30 ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ವಿವರಿಸಿದರು.

Gold
ವಶಪಡಿಸಿಕೊಂಡ ಚಿನ್ನಾಭರಣ

ಅಕ್ರಮ ಅಡುಗೆ ಅನಿಲ ಸಿಲಿಂಡರ್‌ ಮರುಸಂಸ್ಕರಣೆಯಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನನ್ನು ವಶಕ್ಕೆ ಪಡೆಯಲಾಗಿದೆ. ಅವರಿಂದ 1,38,060 ರೂ. ಮೌಲ್ಯದ ಸಿಲಿಂಡರ್​ ಜಪ್ತಿ ಮಾಡಲಾಗಿದೆ. ಕೊಪ್ಟಾ ಕಾಯ್ದೆ 2003 ಅಡಿಯಲ್ಲಿ 5 ಪ್ರಕರಣ ದಾಖಲಿಸಿ, 10 ಜನ ಆರೋಪಿಗಳನ್ನು ಬಂಧಿಸಿ 1 ಲಕ್ಷ ರೂ. ಮೌಲ್ಯದ ಮಾವಾ ಕಚ್ಚಾ ಸರಕು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.

ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ

ಮನೆ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಸೋಹೈಲಗ ಇನಾಮದಾರ್ ( 21) ಹಾಗೂ ಆಕಾಶ್​ ಕೋಲಕಾರ ( 19) ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಕಳೆದ ಮೂರು ತಿಂಗಳ ಹಿಂದೆ ಮನೆಯ ಬಾಗಿಲು ಬೀಗ ಮುರಿದು ಕಳವು ಮಾಡಿದ್ದರು. ಈ ಕುರಿತು ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು ಅ.22ರಂದು ಬಂಧಿಲಾಗಿದ್ದು‌ ಅವರಿಂದ‌, 2,15,000 ರೂ. ಮೌಲ್ಯದ 40 ಗ್ರಾಂ. ಚಿನ್ನಾಭರಣ, 190 ಗ್ರಾಂ. ಬೆಳ್ಳಿ ಹಾಗೂ‌ ಕೃತ್ಯಕ್ಕೆ ಬಳಸಿದ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ ಎಂದರು.

ಆರು ಜನರ ಮೇಲೆ ಗುಂಡಾ ಕಾಯ್ದೆ:

ಪದೇ ಪದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ 6 ಆರೋಪಿಗಳ ಮೇಲೆ ಗೂಂಡಾ ಕಾಯ್ದೆ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇಂಡಿ ತಾಲೂಕಿನ‌ ದೇವೇಂದ್ರ ತದ್ದೇವಾಡಿ (16 ಪ್ರಕರಣ), ನಾಗಠಾಣದ ಚಂದ್ರಶೇಖರ (8 ಪ್ರಕರಣ), ತಾಳಿಕೋಟೆಯ ಸಂಗನೌಡ ಸುಂಕನಾಳ (4 ಪ್ರಕರಣ), ಚಾಫೀರ್ ಇನಾಮದಾರ್ (12 ಪ್ರಕರಣ), ವಿಜಯಪುರದ ಹೈದರಲಿ ನಾಧಾಪ್ ( 15 ಪ್ರಕರಣ) ಹಾಗೂ ಇಂಡಿಯ ಫಿರಪ್ಪ ಕಟ್ಟಿಮನಿ ಎಂಬುವರಾಗಿದ್ದಾರೆ. 20 ವರ್ಷಗಳ ಬಳಿಕ ಜಿಲ್ಲೆಯಲ್ಲಿ ಆರು ಆರೋಪಿಗಳ ಮೇಲೆ ಗೂಂಡಾ ಕಾಯ್ದೆ ಹೇರಲಾಗಿದೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.