ವಿಜಯಪುರ: ಜಿಲ್ಲೆಯಲ್ಲಿಂದು ಮತ್ತೆ 16 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 317ಕ್ಕೆ ಏರಿಕೆಯಾಗಿದೆ.
ಇಂದು ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಈ ಮೂಲಕ ಗುಣಮುಖರಾದವರ ಸಂಖ್ಯೆ 222ಕ್ಕೆ ಏರಿದೆ. ಸದ್ಯ 88 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 7ಜನ ಮಹಾಮಾರಿ ಸೋಂಕಿನಿಂದ ಮೃತಪಟ್ಟಿದ್ದಾರೆ.
ನೆಗಡಿ, ಕೆಮ್ಮಿನಿಂದ ಏಳು ಜನ ಆಸ್ಪತ್ರೆಗೆ ದಾಖಲಾದಾಗ ಅವರಿಗೆ ಸೋಂಕು ಇರುವದು ಪತ್ತೆಯಾಗಿದೆ. P-8792ರ ಸಂಪರ್ಕದಿಂದ ಮೂವರಿಗೆ, P- 7836ರ ರಿಂದ ನಾಲ್ವರಿಗೆ ಸೋಂಕು, ಇಬ್ಬರಿಗೆ ಕಂಟೈನ್ ಮೆಂಟ್ ಝೋನ್ ನಿಂದ ಸೋಂಕು ತಗುಲಿದೆ. ಉಳಿದಂತೆ ಇಂದು ಪಾಸಿಟಿವ್ ಬಂದ 16 ಜನರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.