ಉತ್ತರ ಕನ್ನಡ ಜಿಲ್ಲೆ ಪಂಚಾಯತ್, ಕಾರವಾರದಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಪರಿಣಾಮಕಾರಿ ಅನುಷ್ಠಾನಗೊಳಿಸಲು 14 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಒಂದು ವರ್ಷದ ಗುತ್ತಿಗೆ ಅವಧಿಗೆ ಈ ಹುದ್ದೆ ಭರ್ತಿ ನಡೆಸಲಾಗುವುದು. ಆಸಕ್ತ ಮತ್ತು ಸೂಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆ ವಿವರ: ತಾಂತ್ರಿಕ ಸಹಾಯಕರು -12, ತಾಲೂಕು ಪಂಚಾಯತ್ ಆಡಳಿತ ಸಹಾಯಕರು- 1, ತಾಲೂಕು ಮಾಹಿತಿ ಶಿಕ್ಷಣ ಮತ್ತು ಸಂವಹನ-1 ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
![ಅಧಿಸೂಚನೆ](https://etvbharatimages.akamaized.net/etvbharat/prod-images/22-06-2023/uttara-kannada-3_2206newsroom_1687428466_1018.jpg)
ವಿದ್ಯಾರ್ಹತೆ:
ತಾಂತ್ರಿಕ ಸಹಾಯಕ ಹುದ್ದೆ: ಬಿಇ ಸಿವಿಲ್, ಬಿಎಸ್ಸಿ/ ಎಂಎಸ್ಸಿಯಲ್ಲಿ ಅರಣ್ಯಶಾಸ್ತ್ರ, ಬಿಎಸ್ಸಿ/ ಎಂಎಸ್ಸಿ ತೋಟಗಾರಿಕೆ, ಬಿಎಸ್ಸಿ/ ಎಂಎಸ್ಸಿಯಲ್ಲಿ ಕೃಷಿ ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದು.
ತಾಲೂಕು ಪಂಚಾಯತ್ ಆಡಳಿತ ಸಹಾಯಕರು: ಬಿಕಾಂ ಪದವಿಯನ್ನ ಹೊಂದಿರಬೇಕು.
ತಾಲೂಕು ಮಾಹಿತಿ ಶಿಕ್ಷಣ ಮತ್ತು ಸಂವಹನ: ಸಮೂಹ ಸಂವಹನದಲ್ಲಿ ಪದವಿ ಅಥವಾ ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ
ವೇತನ ಮತ್ತು ವಯೋಮಿತಿ
- ತಾಂತ್ರಿಕ ಸಹಾಯಕರ ಹುದ್ದೆ: ಕನಿಷ್ಠ 25 ವರ್ಷ ಗರಿಷ್ಠ 40 ವರ್ಷ- ಮಾಸಿಕ 28 ಸಾವಿರ ರೂ. ಜೊತೆಗೆ 2000 ಟಿಎ
- ತಾಲೂಕು ಪಂಚಾಯಿತಿ ಆಡಳಿತ ಸಹಾಯಕರು: ಕನಿಷ್ಠ 25 ವರ್ಷ - ಗರಿಷ್ಠ 40 ವರ್ಷ- ಮಾಸಿಕ 22 ಸಾವಿರ ರೂ ಜೊತೆಗೆ 2000 ಟಿಎ
- ತಾಲೂಕು ಮಾಹಿತಿ ಶಿಕ್ಷಣ ಮತ್ತು ಸಂವಹನ: ಕನಿಷ್ಠ 25 ವರ್ಷ ಗರಿಷ್ಠ 40 ವರ್ಷ- ಮಾಸಿಕ 28 ಸಾವಿರ ರೂ. ಜೊತೆಗೆ 2000 ಟಿಎ.
ಅನುಭವ: ಮೇಲಿನ ಎಲ್ಲಾ ಹುದ್ದೆಗಳಿಗೆ ಅಭ್ಯರ್ಥಿಗಳು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಕನಿಷ್ಠ 2 ರಿಂದ 3 ವರ್ಷ ಹುದ್ದೆ ನಿರ್ವಹಣೆ ಮಾಡಿದ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.
ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಮೇಲಿನ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಉತ್ತರ ಕನ್ನಡ ಜಿಲ್ಲಾಪಂಚಾಯತ್ನ ಅಧಿಕೃತ ಜಾಲತಾಣ zpkarwar.kar.nic.in/mgnregaಕ್ಕೆ ಭೇಟಿ ನೀಡಬೇಕು. ಇಲ್ಲಿ ಲಭ್ಯವಾಗುವ ನಿಗದಿತ ಅರ್ಜಿಯಲ್ಲಿ ಅಗತ್ಯ ಮಾಹಿತಿ, ದಾಖಲೆಯೊಂದಿಗೆ ಆನ್ಲೈನ್ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ಎಲ್ಲಾ ದಾಖಲೆಗಳನ್ನು ಪಿಡಿಎಫ್ ಸ್ವರೂಪದಲ್ಲಿ ಸೇರಿಸಿ ಅಪ್ಲೋಡ್ ಮಾಡಬೇಕು.
ಹುದ್ದೆ ಆಯ್ಕೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೆರಿಟ್, ಕಂಪ್ಯೂಟರ್ ಪರೀಕ್ಷೆ ಹಾಗೂ ಸಂದರ್ಶನದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಈ ಹುದ್ದೆಗೆ ಅರ್ಜಿ ಸಲ್ಲಿಕೆ ಆರಂಭ ಜೂನ್ 17ರಿಂದ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜೂನ್ 26 ಆಗಿದೆ.
ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಕುರಿತು ಈ ದೂರವಾಣಿಗೆ 08383-226862ಗೆ ಸಂಪರ್ಕಿಸಬಹುದು.
ಈ ಹುದ್ದೆ ಕುರಿತು ಅಧಿಕೃತ ಅಧಿಸೂಚನೆ ಮತ್ತು ವಿವರವಾದ ಮಾಹಿತಿಗೆ zpuk.karnataka.gov.in ಜಾಲತಾಣಕ್ಕೆ ಭೇಟಿ ನೀಡಬಹುದು.
ಇದನ್ನೂ ಓದಿ: Government Jobs: ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿ ನೇಮಕಾತಿ; 386 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ